ಕೊರೋನಾ ವೈರಸ್ ಹಾಗೂ ಲಾಕ್‌ಡೌನ್ ಹೊಡೆತದಿಂದ ಹಲವು ಆಟೋಮೊಬೈಲ್ ಕಂಪನಿಗಳು ಆರ್ಥಿಕ ಸಂಕಷ್ಟ ಅನುಭವಿಸುತ್ತಿದೆ. ಹೀಗಾಗಿ ಕಂಪನಿಗಳು ಸಹಭಾಗಿತ್ವದ ಒಪ್ಪಂದಕ್ಕೆ ಗುಡ್ ಬೈ ಹೇಳುತ್ತಿದೆ. ಇದೀಗ ಟಾಟಾ ಮೋಟಾರ್ಸ್ ತನ್ನ ಟಿಯಾಗೋ ಹಾಗೂ ಟಿಗೋರ್ JTP ವರ್ಶನ್ ಕಾರು ಸ್ಥಗಿತಗೊಳಿಸುತ್ತಿದ.
ಮುಂಬೈ(ಜೂ.15): ಟಾಟಾ ಮೋಟಾರ್ಸ್ ಕಂಪನಿಯ ಟಿಯಾಗೋ ಹಾಗೂ ಟಿಗೋರ್ ಕಾರು ಹೆಚ್ಚು ಜನಪ್ರಿಯವಾಗಿದೆ. 2018ರಲ್ಲಿ ಜಯೇಮ್ ಮೋಟಾರ್ಸ್ ಸಹಭಾಗಿತ್ವದಲ್ಲಿ ಟಿಯಾಗೋ ಹಾಗೂ ಟಿಗೋರ್ JTP ವರ್ಶನ್ ಕಾರು ಬಿಡುಗಡೆ ಮಾಡಿತ್ತು. ಇದೀಗ ಆರ್ಥಿಕ ಸಂಕಷ್ಟದ ಕಾರಣ JTP ವರ್ಶನ್ ಕಾರನ್ನು ಸ್ಥಗಿತಗೊಳಿಸುತ್ತಿದೆ.
65 ಟಾಟಾ ನೆಕ್ಸಾನ್ ಎಲೆಕ್ಟ್ರಿಕ್ ಕಾರು ಬುಕ್ ಮಾಡಿದ ಸರ್ಕಾರ!...
undefined
ಟಾಟಾ ಮೋಟಾರ್ಸ್ JTP ಕಾರು ಸ್ಥಗಿತ ಕುರಿತು ಅಧೀಕೃತ ಹೇಳಿಕೆ ನೀಡಿದೆ. ಟಾಟಾ ಮೋಟಾರ್ಸ್ ಹಾಗೂ ಜಯೇಮ್ ಆಟೋಮೇಟೀವ್ 50:50 ಜಂಟಿ ಸಹಭಾಗಿತ್ವದಲ್ಲಿ ಕಾರು ಉತ್ಪಾದನೆ ಮಾಡಿತ್ತು. ಹೀಗೆ ಜಾಯಿಂಟ್ ವೆಂಚರ್ ಮೂಲಕ ಬಿಡುಗಡೆ ಮಾಡಿದ JTP ವರ್ಶನ್ ಕಾರು ಇದೀಗ ಸ್ಥಗಿತಗೊಂಡಿದೆ. ಆದರೆ ಟಾಟಾ ಟಿಯಾಗೋ ಹಾಗೂ ಟಾಟಾ ಟಿಗೋರ್ ಕಾರಿಗೆ ಯಾವುದೇ ಸಮಸ್ಯೆ ಇಲ್ಲ.
ಈಗಾಗಲೇ JTP ವರ್ಶನ್ ಕಾರು ಖರೀದಿಸಿದ ಗ್ರಾಹಕರಿಗೂ ಯಾವುದೇ ಸಮಸ್ಯೆಯಾಗುವುದಿಲ್ಲ ಎಂದು ಟಾಟಾ ಮೋಟಾರ್ಸ್ ಹೇಳಿದೆ. ಟಿಯಾಗೋ JTP ಕಾರಿನ ಬೆಲೆ 6.69 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ). ಇನ್ನು ಟಿಗೋರ್ JTP ಕಾರಿನ ಬೆಲೆ 7.59 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ). ಕೊಂಚ ದುಬಾರಿಯಾದ ಕಾರಣ ಈ ಕಾರಿನ ಬೇಡಿಕೆ ಕುಸಿದಿದೆ. ಹೀಗಾಗಿ ಟಾಟಾ ಮೋಟಾರ್ಸ್ ಸ್ಥಗಿತಗೊಳಿಸಲು ನಿರ್ಧರಿಸಿದೆ.