ಭಾರತದ ಪ್ರಪ್ರಥಮ 4x2 ಪ್ರೈಮ್ ಮೂವರ್ ಸಿಗ್ನಾ 5525.S ಬಿಡುಗಡೆ ಮಾಡಿದ ಟಾಟಾ !

By Suvarna News  |  First Published Sep 30, 2020, 3:35 PM IST
  • ಟ್ರಕ್ ಟ್ರಾಕ್ಟರ್ ಸೆಗ್ಮೆಂಟ್ ವಾಹ ಬಿಡುಗಡೆ ಮಾಡಿದ ಟಾಟಾ ಮೋಟಾರ್ಸ್
  • ವಿಶ್ವದ ಅತಿದೊಡ್ಡ ಮಾರಾಟವಾಗುವ ಯೂರೋ 6 ವಾಣಿಜ್ಯ ವಾಹನ ಇಂಜಿನ್ ಆದ ಕಮ್ಮಿನ್ಸ್ 6.7 ಲೀ ಇಂಜಿನ್‍ನ ಶಕ್ತಿ
  • 4x2 ಪ್ರೈಮ್ ಮೂವರ್‌ಗೆ 55 ಟನ್ ಅತ್ಯಧಿಕ ನಿವ್ವಳ ಸಂಯೋಜಿತ ತೂಕ 

ಮುಂಬೈ(ಸೆ.30): ಭಾರತದ ಮುಂಚೂಣಿ ವಾಣಿಜ್ಯ ವಾಹನ ತಯಾರಿಕಾ ಸಂಸ್ಥೆಯಾದ ಟಾಟಾ ಮೋಟರ್ಸ್, 4x2 ವರ್ಗದಲ್ಲಿ, ಭಾರತದ ಅತ್ಯಧಿಕ ಜಿಸಿಡಬ್ಲ್ಯು ಪ್ರೈಮ್ ಮೂವರ್(ಟ್ರ್ಯಾಕ್ಟರ್)ಸಿಗ್ನಾ 5525.S ಬಿಡುಗಡೆ ಮಾಡಿದೆ..  ಸಿಗ್ನಾ 5525.S, 4x2 ಶ್ರೇಣಿಯಲ್ಲಿ ಸರಿಸಾಟಿಯಿಲ್ಲದ 55-ಟನ್ ಜಿಸಿಡಬ್ಲ್ಯು ಆಗಿದ್ದು, ಲಾಭವನ್ನು ಗರಿಷ್ಟಗೊಳಿಸಿಕೊಳ್ಳಲು ಗ್ರಾಹಕರಿಗೆ ವಿಶಿಷ್ಟ ಮೌಲ್ಯ ಅವಕಾಶ ಒದಗಿಸುತ್ತದೆ. ಈ ಮಾದರಿಯನ್ನು ಟಾಟಾ ಮೋಟರ್ಸ್‍ನ ‘6ರ ಶಕ್ತಿ’ ಸಿದ್ಧಾಂತದೊಂದಿಗೆ ವಿನ್ಯಾಸಗೊಳಿಸಲಾಗಿದ್ದು ಗ್ರಾಹಕರಿಗೆ ವರ್ಧಿತ ಕಾರ್ಯಕ್ಷಮತೆ, ಮಾಲೀಕತ್ವದ ಕಡಿಮೆ ಒಟ್ಟೂ ವೆಚ್ಚಗಳು,  ಅಧಿಕ ಆರಾಮ ಹಾಗು ಅನುಕೂಲತೆಯನ್ನು ಶಕ್ತಿಯೊಂದಿಗೆ ಅವರನ್ನು ಸಬಲಗೊಳಿಸಿ ಆ ಮೂಲಕ ಒಂದೇ ಸಮಯದಲ್ಲಿ ಆದಾಯವನ್ನು ಹೆಚ್ಚಿಸುವುದರ ಜೊತೆಗೆ ಕಡಿಮೆ ಕಾರ್ಯಾಚರಣೆ ವೆಚ್ಚಗಳನ್ನೂ ನೀಡುತ್ತದೆ. 

ಸರ್ಕಾರಕ್ಕೆ 51 ವಿಂಗರ್ ಆ್ಯಂಬುಲೆನ್ಸ್ ನೀಡಿದ ಟಾಟಾ ಮೋಟಾರ್ಸ್!..

Tap to resize

Latest Videos

ಸಿಗ್ನಾ 5525.S, 4x2 ಪ್ರೈಮ್ ಮೂವರ್ ಕಮ್ಮಿನ್ಸ್ 6.7 ಲೀ ಇಂಜಿನ್‍ನ ಶಕ್ತಿಯನ್ನು ಪಡೆದಿದ್ದು  250BH  ಪವರ್ ಮತ್ತು 950ಓm ದಲ್ಲಿ. 1000-1800 ಆರ್‍ಪಿಎಮ್ ವರೆಗಿನ ಶ್ರೇಣಿಯಲ್ಲಿ ಮಟ್ಟಸ ಟಾರ್ಕ್ ಹೊಂದಿ ನಿತ್ರಾಣರಹಿತ ಚಾಲನೆಯನ್ನು ಒದಗಿಸುವುದರ ಜೊತೆಗೆ ಹೆಚ್ಚಿನ ಟ್ರಿಪ್‍ಗಳು ಹಾಗು ಅಧಿಕ ಆದಾಯಕ್ಕಾಗಿ ಕಡಿಮೆ ಟರ್ನ್‍ಅರೌಂಡ್ ಸಮಯ ಒದಗಿಸುತ್ತದೆ. ಡ್ರೈವ್‍ಟ್ರೇನ್‍ಅನ್ನು ಉದ್ಯಮದಲ್ಲಿ ಸಾಬೀತಾದ ಉ1150 9-ವೇಗಗಳ ಗೇರ್ ಬಾಕ್ಸ್, 430ಮಿ.ಮೀ ವ್ಯಾಸ, ಆರ್ಗ್ಯಾನಿಕ್ ಕ್ಲಚ್, ಮತ್ತು ಭಾರೀ ಶಕ್ತಿಯ ಖಂ110ರೇರ್ ಆಕ್ಸಿಲ್‍ನೊಂದಿಗೆ ವಿನ್ಯಾಸಗೊಳಿಸಲಾಗಿದ್ದು ಇದು ವರ್ಧಿತ ಎಳೆಯುವ ಶಕ್ತಿ ನೀಡುವುದರ ಜೊತೆಗೆ ಕಠಿಣ ಪರಿಸರಗಳು ಹಾಗು ವಿವಿಧ ಪ್ರಯೋಗಗಳಿಗಾಗಿ ವಿನ್ಯಾಸಗೊಳಿಸಲಾಗಿದೆ.

ಭಾರತದ ಅತೀ ದೊಡ್ಡ ಟಿಪ್ಪರ್ ಟ್ರಕ್ ಸಿಗ್ನಾ 4835 TK ಬಿಡುಗಡೆ ಮಾಡುತ್ತಿದೆ ಟಾಟಾ ಮೋಟಾರ್ಸ್

ಸಿಗ್ನಾ 5525.S, 4x2ದ ಪರಿಚಯದೊಂದಿಗೆ ಟಾಟಾ ಮೋಟರ್ಸ್ ಅತ್ಯಂತ ವ್ಯಾಪಕ ಶ್ರೇಣಿಯ ಉತ್ಪನ್ನಗಳೊಂದಿಗೆ ಭಾರತೀಯ ವಾಣಿಜ್ಯ ವಾಹನ ಉದ್ದಿಮೆಯಲ್ಲಿ ಅಗ್ರಮಾನ್ಯವಾಗಿರುವ ತನ್ನ ಧ್ಯೇಯವನ್ನು ಮುಂದುವರಿಸುತ್ತಿದ್ದು, ತನ್ನ ಗ್ರಾಹಕರು ಅಧಿಕ ಆದಾಯ ಉತ್ಪಾದನೆ ಹಾಗು ಕಡಿಮೆ ಕಾರ್ಯಾಚರಣೆ ವೆಚ್ಚ ಎರಡರಲ್ಲೂ ತಮ್ಮ ಒಟ್ಟಾರೆ ಲಾಭವನ್ನು ಸುಧಾರಿಸಿಕೊಳ್ಳುವುದಕ್ಕೆ ವರ್ಗದಲ್ಲೇ ಅತ್ಯುತ್ತಮವಾದ ಪರಿಹಾರಗಳನ್ನು ಒದಗಿಸುತ್ತಿದೆ. ನಮ್ಮ ಸನ್ಮಾನ್ಯ ಗ್ರಾಹಕರಿಗೆ ಅತ್ಯುತ್ತಮ ಉತ್ಪನ್ನ ಕೊಡುಗೆಗಳನ್ನು ನೀಡುವ  ನಮ್ಮ ಸತತ ಪ್ರಯತ್ನದ ಫಲವಾಗಿ ಅವರಿಗೆ 4x2 ಪ್ರೈಮ್ ಮೂವರ್‍ನ್ಬಲ್ಲಿ 55-ಟನ್ ಜಿಸಿಡಬ್ಲ್ಯು ಒದಗಿಸುತ್ತಿರುವಂತಹ ಪ್ರಪ್ರಥಮ ಉತ್ಪಾದಕ ಸಂಸ್ಥೆ ಆಗಿದ್ದೇವೆ. ನಮ್ಮ ‘6ರ ಶಕ್ತಿ’ ಸಿದ್ಧಾಂತದೊಂದಿಗೆ ನಾವು ವರ್ಗದಲ್ಲೇ ಅತ್ಯುತ್ತಮವಾದ ಉತ್ಪನ್ನಗಳು ಹಾಗು ಪರಿಹಾರಗಳನ್ನು ಒದಗಿಸುವುದನ್ನು ಮುಂದುವರಿಸಲಿದ್ದು, ಕಾರ್ಗೋ ಹಾಗು ಕನ್ಸ್ಟ್ರಕ್ ವರ್ಗಗಳೆರಡರಲ್ಲೂ ನಮ್ಮ ಅಗ್ರಸ್ಥಾನವನ್ನು ಇನ್ನಷ್ಟು ಬಲಪಡಿಸಿಕೊಳ್ಳಲಿದ್ದೇವೆ. ಈ ಹೊಸ ವಾಹನಗಳ ಪೈಕಿಮ್ ಪ್ರತಿಯೊಂದು ವಾಹನವೂ ಫ್ಯಾಕ್ಟರಿಯಲ್ಲೇ ಅಳವಡಿಸಲಾಗಿರುವ ಟಾಟಾ ಮೋಟರ್ಸ್‍ನ ಡಿಜಿಟಲ್ ಪರಿಹಾರಗಳೊಂದಿಗೆ ಬರುತ್ತಿದ್ದು ಗರಿಷ್ಟ ಫ್ಲೀಟ್ ನಿರ್ವಹಣೆ, ಫ್ಲೀಟ್ ಎಡ್ಜ್, ಒದಗಿಸಿ ಫ್ಲೀಟ್‍ನ ಉತ್ಪಾದಕತೆಯನ್ನು ವರ್ಧಿಸುವುದರ ಜೊತೆಗೆ ಗ್ರಾಹಕ ಲಾಭವನ್ನೂ ಹೆಚ್ಚಿಸಲಿವೆ ಎಂದು  ಟಾಟಾ ಮೋಟರ್ಸ್‍ನ ಮಧ್ಯಮ ಹಾಗು ಭಾರೀ ವಾಣಿಜ್ಯ ವಾಹನದ ಉತ್ಪನ್ನ ವಿಭಾಗದ ಉಪಾಧ್ಯಕ್ಷ  ಆರ್.ಟಿ. ವಾಸನ್ ಹೇಳಿದ್ದಾರೆ.

ಹೊಸ ಮಾದರಿಯೂ, ದೇಶದ ಅತ್ಯಧಿಕ ಮಾರಾಟವಾಗುವ ಮಧ್ಯಮ ಹಾಗು ಭಾರೀ ವಾಣಿಜ್ಯ ವಾಹನಗಳಲ್ಲಿರುವ ಕ್ಯಾಬಿನ್ ಆಗಿ ಸುಪ್ರಸಿದ್ಧವಾದ ಸಿಗ್ನಾ ಕ್ಯಾಬಿನ್‍ನೊಂದಿಗೆ ಲಭ್ಯವಾಗಲಿದ್ದು, 3-ಮಾರ್ಗದ ಯಾಂತ್ರಿಕವಾಗಿ ಸರಿಪಡಿಸಿಕೊಳ್ಳಬಹುದಾದ ಚಾಲನಾ ಸೀಟ್, ವಿಶಾಲವಾದ ಸ್ಲೀಪರ್ ಬರ್ತ್, ಟಿಲ್ಟ್ ಮತ್ತು ಟೆಲಿಸ್ಕೋಪಿಕ್ ಸ್ಟೀರಿಂಗ್ ಸಿಸ್ಟಮ್ ಮತ್ತು ಸಾಕಷ್ಟು ಉಪಯುಕ್ತವಾದ ಸ್ಥಳಗಳನ್ನು ಒದಗಿಸುತ್ತದೆ. ಸಿಗ್ನಾ 5525.S, 4x2ದ ತೂಗುವ ಕ್ಯಾಬಿನ್ ಕಡಿಮೆ ಎನ್‍ವಿಹೆಚ್ ಗುಣವಿಶೇಷತೆಗಳನ್ನು ಖಾತರಿಪಡಿಸಿ, ಕಠಿಣ ಪರಿಸರಗಳಲ್ಲೂ ಆರಾಮದಾಯಕವಾದ ಚಾಲನೆ ಒದಗಿಸುತ್ತದೆ. ಶಕ್ತಿಶಾಲಿಯಾದ ಹವಾನಿಯಂತ್ರಣ ವ್ಯವಸ್ಥೆಯು ಜೊತೆಗೆ ಸೂಕ್ತವಾದ ವಾಯು ತಾಪಮಾನದ ಸೆನ್ಸಾರ್ ಸರ್ವಋಟುಗಳಲ್ಲೂ ಆರಾಮದಾಯಕ ಚಾಲನೆ ಹಾಗು ಕಡಿಮೆ ಇಂಧನ ಬಳಕೆಯನ್ನು ಖಾತರಿಪಡಿಸುತ್ತದೆ. ಕ್ರ್ಯಾಶ್ ಪರೀಕ್ಷೆ ಮಾಡಲಾದ ಕ್ಯಾಬಿನ್, ಎತ್ತರದ ಸೀಟಿಂಗ್ ಸ್ಥಾನ, ದೊಡ್ಡ ಹಗಲು ಬೆಳಕಿಗೆ ತೆರೆದುಕೊಳ್ಳುವ ಕಿಟಕಿ, ಹಿಂಬದಿ ವ್ಯೂ ಮಿರರ್, ಬ್ಲೈಡ್ ಸ್ಪಾಟ್ ಮಿರರ್, ಗಟ್ಟಿಯಾದ ಉಕ್ಕಿನ 3-ಪೀಸ್‍ಗಳ ಬಂಪರ್-ಇವೆಲ್ಲವೂ ಅತ್ಯಂತ ಸುರಕ್ಷಿತ ಚಾಲನೆಯನ್ನು ಒದಗಿಸುತ್ತವೆ. ಇವೆಲ್ಲಕ್ಕಿಂತ ಹೆಚ್ಚಿಗೆ, ಇಂಜಿನ್ ಬ್ರೇಕ್ ಹಾಗು ಐಸಿಜಿಟಿ ಬ್ರೇಕ್‍ನಂತಹ ಹೊಸ ತಂತ್ರಜ್ಞಾನಗಳಿರುವ ಆಧುನಿಕ ಅಂಶಗಳು ಹೆಚ್ಚಿನ ವಾಹನ ನಿಯಂತ್ರಣ ಒದಗಿಸುವುದರ ಜೊತೆಗೆ ನಿರ್ವಹಣಾ ವೆಚ್ಚಗಳನ್ನೂ ಕಡಿಮೆಗೊಳಿಸುತ್ತದೆ. ಗರಿಷ್ಟ ಫ್ಲೀಟ್ ನಿರ್ವಹಣೆಗಾಗಿ ಟಾಟಾ ಮೋಟರ್ಸ್‍ನ ಫ್ಲೀಟ್ ಎಡ್ಜ್‍ನ ಸಾಧಾರಣ ಅಳವಡಿಕೆ ಹೊಂದಿರುವ ಅದು ಅಪ್‍ಟೈಮ್ ಹೆಚ್ಚಿಸುವುದರ ಜೊತೆಗೆ ಮಾಲೀಕತ್ವದ ಒಟ್ಟೂ ವೆಚ್ಚವನ್ನು ಕಡಿಮೆ ಮಾಡುತ್ತದೆ.

ಸಿಗ್ನಾ 5525.S, 4x2, ಅಧುನಿಕವಾದ ಮತ್ತು ವ್ಯಾಪಕ ಶ್ರೇಣಿಯ ಸಂಪೂರ್ಣ ನಿರ್ಮಿತ ಪರಿಹಾರಗಳೊಂದಿಗೆ ಬರುತ್ತಿದ್ದು ಗ್ರಾಹಕರಿಗೆ, ಉತ್ತಮ ಹಣಕಾಸು ಉಳಿತಾಯ, ಡೆಲಿವರಿ ದಿನದಿಂದ ಗಳಿಕೆ, ರಾಷ್ಟ್ರವ್ಯಾಪಿಯಾಗಿರುವ ಸರ್ವಿಸ್ ವಾರಂಟಿ ಹಾಗು ಹೆಚ್ಚಿನ ಮರುಮಾರಾಟ ಮೌಲ್ಯ ಮೊದಲಾದ ಅನೇಕ ಲಾಭಗಳಿರುವ ಏಕನಿಲುಗಡೆ ಪರಿಹಾರವಾಗಿರುವುದರಿಂದ, ಗ್ರಾಹಕರಿಗೆ ಒಟ್ಟಾರೆ ಉತ್ತಮ ಮೌಲ್ಯವರ್ಧನೆ ಒದಗಿಸುತ್ತದೆ.

ಟಾಟಾ ಮೋಟರ್ಸ್ ಮಧ್ಯಮ ಹಾಗು ಭಾರೀಗಾತ್ರದ ವಾಣಿಜ್ಯ ವಾಹನ ಟ್ರಕ್‍ಗಳ ಇಡೀ ಶ್ರೇಣಿಯು, ಉದ್ಯಮದಲ್ಲೇ ಅತ್ಯುತ್ತಮವಾದ 6ವರ್ಷಗಳು/6 ಲಕ್ಷ ಕಿಲೋಮೀಟರ್ ವಾರಂಟಿಯೊಂದಿಗೆ ಬರುತ್ತದೆ. ಟಾಟಾ ಮೋಟರ್ಸ್ ಪ್ರತಿಯೊಂದು ಮಧ್ಯಮ ಹಾಗು ಭಾರೀ ಗಾತ್ರದ ವಾಣಿಜ್ಯ ವಾಹನದೊಂದಿಗೆ, ವಾಣಿಜ್ಯ ವಾಹನ ಚಾಲಕರ ಕ್ಷೇಮಾಭಿವೃದ್ಧಿ, ಅಪ್‍ಟೈಮ್ ಖಾತರಿ, ಆನ್-ಸೈಟ್ ಸರ್ವಿಸ್, ಮತ್ತು ಗ್ರಾಹಕ ಅಗತ್ಯಕ್ಕೆ ತಕ್ಕ ವಾರ್ಷಿಕ ನಿರ್ವಹಣೆ ಮತ್ತು ಫ್ಲೀಟ್ ನಿರ್ವಹಣೆ ಪರಿಹಾರಗಳಿಗೆ ಸಂಸ್ಥೆಯ ಬದ್ಧತೆಯಾದ  ಸಂಪೂರ್ಣ ಸೇವಾ 2.0 ಮತ್ತು ಟಾಟಾ ಸಮರ್ತ್ ಎಂಬ ಸೇವೆಗಳನ್ನೂ ಒದಗಿಸುತ್ತಿದೆ. 

click me!