ರಾಯಲ್ ಎನ್‌ಫೀಲ್ಡ್ ಪ್ರತಿಸ್ಪರ್ಧಿ ಹೊಂಡಾ H'Ness CB 350 ಬೈಕ್ ಬಿಡುಗಡೆ!

Published : Sep 30, 2020, 02:28 PM ISTUpdated : Sep 30, 2020, 02:45 PM IST
ರಾಯಲ್ ಎನ್‌ಫೀಲ್ಡ್ ಪ್ರತಿಸ್ಪರ್ಧಿ ಹೊಂಡಾ H'Ness CB 350 ಬೈಕ್ ಬಿಡುಗಡೆ!

ಸಾರಾಂಶ

ರೆಟ್ರೋ ಸ್ಟೈಲ್, 350 ಸಿಸಿ ಹಾಗೂ ಅತ್ಯಾಧುನಿಕ ತಂತ್ರಜ್ಞಾನದ ಹೊಂಡಾ  H'Ness CB 350 ಬೈಕ್ ಭಾರತದಲ್ಲಿ ಬಿಡುಗಡೆಯಾಗಿದೆ. ರಾಯಲ್ ಎನ್‍‌ಫೀಲ್ಡ್ ಬೈಕ್‌ಗೆ ನೇರ ಪ್ರತಿಸ್ಪರ್ಧಯಾಗಿರುವ ನೂತನ ಬೈಕ್ ಭಾರತದಲ್ಲಿ ಹೊಸ ಅಧ್ಯಾಯ ಆರಂಭಿಸಲು ರೆಡಿಯಾಗಿದೆ.

ನವದೆಹಲಿ(ಸೆ.30); ಹೊಂಡಾ ಮೋಟರ್‌ಸೈಕಲ್ ಹಾಗೂ ಸ್ಕೂಟರ್ ಇಂಡಿಯಾ ಹೊಚ್ಚ ಹೊಸ  H'Ness CB 350 ಬೈಕ್ ಬಿಡುಗಡೆ ಮಾಡಿದೆ. ರೆಟ್ರೋ ಸ್ಟೈಲ್ ಹೊಂದಿರುವ ಪ್ರಿಮಿಯಂ ಬೈಕ್ ಇದಾಗಿದ್ದು, ಭಾರತದಲ್ಲಿ ಹೊಂಡಾದ ಅಧೀಕೃತ ಬಿಗ್‌ವಿಂಗ್ ಡೀಲರ್‌ಶಿಪ್ ಮೂಲಕ ಮಾರಾಟವಾಗಲಿದೆ. 

ಹೊಂಡಾ ಹಾರ್ನೆಟ್ 2.0 ಬೈಕ್ ಬಿಡುಗಡೆ: ಕಡಿಮೆ ಬೆಲೆಯಲ್ಲಿ 184cc ಬೈಕ್!.

ನೂತನ ಹೊಂಡಾ   H'Ness CB 350 ಬೈಕ್ ನೇರವಾಗಿ ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 350, ಬೆನೆಲಿ ಇಂಪರಿಯಲ್ 400, ಜಾವಾ ಹಾಗೂ ಶೀಘ್ರದಲ್ಲೇ ಬಿಡುಗಡೆಯಾಗಲಿರುವ ರಾಯಲ್ ಎನ್‌ಫೀಲ್ಡ್ ಮೆಟೊರ್ 350 ಬೈಕ್‌ಗೆ ಪ್ರತಿಸ್ಪರ್ಧಿಯಾಗಿದೆ. ಜಪಾನ್ ಹೊಂಡಾ ಘಟಕದಿಂದ ಎಂಜಿನ್ ಸೇರಿದಂತೆ ಕೆಲ ಭಾಗಗಳನ್ನು ಆಮದು ಮಾಡಿಕೊಂಡು ಭಾರತದಲ್ಲಿ ನೂತನ ಬೈಕ್ ಉತ್ಪಾದನೆ ಮಾಡಲಾಗಿದೆ.

TVS ಅಪಾಚೆ ಪ್ರತಿಸ್ಪರ್ಧಿ, ಹೊಂಡಾ X-Blade ಬೈಕ್ ಬಿಡುಗಡೆ!

ನೂತನ ಬೈಕ್ ಬೆಲೆ 1.90 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ) ಎಂದು ಅಂದಾಜಿಸಲಾಗಿದೆ.  ನೂತನ ಹೊಂಡಾ   H'Ness CB 350 ಬೈಕ್  DLX ಹಾಗೂ DLX Pro ಎಂಬ ಎರಡು ವೇರಿಯೆಂಟ್‌ಗಳಲ್ಲಿ ಲಭ್ಯವಿದೆ. ಹೊಂಡಾ ಸ್ಮಾರ್ಟ್‌ಫೋನ್ ವಾಯ್ಸ್ ಕಂಟ್ರೋಲ್ ಸಿಸ್ಟಮ್, LED ಲೈಟ್ಸ್, ಡ್ಯುಯೆಲ್ ಚಾನೆಲ್ ABS, 19 ಇಂಚಿನ ಅಲೋಯ್ ವೀಲ್, ಟ್ಯೂಬ್‌ಲೆಸ್ ಟೈಯರ್ ಸೇರಿದಂತೆ ಹಲವು ಫೀಚರ್ಸ್ ಈ ಬೈಕ್‌ನಲ್ಲಿದೆ.

ಹೊಂಜಾ H'Ness CB 350 ಬೈಕ್ 348.36 cc, ಸಿಂಗಲ್ ಸಿಲಿಂಡರ್, ಏರ್ ಕೂಲ್ಡ್ ಎಂಜಿನ್ ಹೊಂದಿದೆ.  20.8 bhp ಪವರ್( @5,500 rpm) 30 Nm ಪೀಕ್ ಟಾರ್ಕ್(@  3,000 rpm) ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ. 
 

PREV
click me!

Recommended Stories

ಚಾಲನೆಯಲ್ಲಿದ್ದಾಗಲೇ ಪ್ರಜ್ಞೆ ಕಳೆದುಕೊಂಡ ಚಾಲಕ: ವಿಮಾನ ಟೇಕಾಫ್‌ದಂತೆ ಮೇಲೇರಿದ ಮರ್ಸಿಡಿಸ್: ವೀಡಿಯೋ
ಕಾಂತಾರ ನಟನಿಗೆ ದೈವದ ಅಭಯ, 1.5 ಕೋಟಿ ರೂ ವೆಲ್‌ಫೈರ್ ಕಾರಿನಲ್ಲಿ ಕಾಣಿಸಿಕೊಂಡ ರಿಷಬ್ ಶೆಟ್ಟಿ