ಟಾಟಾ ಹ್ಯಾರಿಯರ್ XT+ ವೇರಿಯೆಂಟ್ ಬಿಡುಗಡೆ ಮಾಡಿದ ಟಾಟಾ ಮೋಟಾರ್ಸ್!

By Suvarna NewsFirst Published Sep 4, 2020, 8:34 PM IST
Highlights

ಟಾಟಾ ಮೋಟಾರ್ಸ್ ತನ್ನ ಕಾರುಗಳನ್ನು ಅಪ್‌ಗ್ರೇಡ್ ಮಾಡಿ ಹೆಚ್ಚುವರಿ ಫೀಚರ್ಸ್‌ನೊಂದಿಗೆ ಬಿಡುಗಡೆ ಮಾಡುತ್ತಿದೆ. ನೆಕ್ಸಾನ್ ಹೊಸ ವೇರಿಯೆಂಟ್ ಬಿಡುಗಡೆ ಮಾಡಿದ ಬೆನ್ನಲ್ಲೇ ಇದೀಗ ಹ್ಯಾರಿಯರ್ XT+ ವೇರಿಯೆಂಟ್ ಲಾಂಚ್ ಮಾಡಿದೆ.  ಟಾಟಾ ಹ್ಯಾರಿರ್ಸ್ XT+ ಕಾರಿನ ಬೆಲೆ ಹಾಗೂ ವಿಶೇಷತೆ ಇಲ್ಲಿದೆ.

ಮುಂಬೈ(ಸೆ.04): ಟಾಟಾ ಮೋಟಾರ್ಸ್ 2020ರ ಫೆಬ್ರವರಿ ತಿಂಗಳಲ್ಲಿ ಟಾಟಾ ಹ್ಯಾರಿಯರ್ BS6 ಕಾರು ಬಿಡುಗಡೆ ಮಾಡಿತ್ತು. ಇದೀಗ  ಹೆಚ್ಚುವರಿ ಫೀಚರ್ಸ್‌ನೊಂದಿಗೆ ಟಾಟಾ ಹ್ಯಾರಿಯರ್ XT+ ಕಾರು ಬಿಡುಗಡೆ ಮಾಡಿದೆ. ಕಳೆದ 15 ತಿಂಗಳಲ್ಲಿ ಟಾಟಾ ಹ್ಯಾರಿಯರ್ SUV ಸೆಗ್ಮೆಂಟ್ ಪೈಕಿ ಗರಿಷ್ಠ ಮಾರಾಟ ಕಂಡಿದೆ. ಇದೀಗ ಮತ್ತಷ್ಟು ಹೊಸತನಗಳೊಂದಿಗೆ ಕಾರು ಮಾರುಕಟ್ಟೆ ಪ್ರವೇಶಿಸಿದ್ದು, ಟಾಟಾ ಮೋಟಾರ್ಸ್ ಉತ್ಸಾಹ ಮತ್ತಷ್ಟು ಹೆಚ್ಚಿಸಿದೆ.

ಅತ್ಯಂತ ಸುರಕ್ಷಿತ ನೆಕ್ಸಾನ್ XM (S) ವೇರಿಯೆಂಟ್ ಲಾಂಚ್ ಮಾಡಿದ ಟಾಟಾ ಮೋಟಾರ್ಸ್!.

ಹ್ಯಾರಿಯರ್ XT+ ಆಟೋಮ್ಯಾಟಿಕ್ ಪನೊರಮಿಕ್ ಸನ್‌ರೂಫ್ ಹೊಂದಿದೆ.  ಆ್ಯಂಟಿ ಪಿಂಕ್, ರೈನ್ ಸೆನ್ಸಿಂಗ್, ಹೆಚ್ಚುವರಿ ಪಾರ್ಕಿಂಗ್ ಸೇಫ್ಟಿ, ರೋಲೋವರ್ ಸ್ಕ್ರೀನ್ ಸೇರಿದಂತೆ ಹಲವು ಹೆಚ್ಚುವರಿ ಫೀಚರ್ಸ್ ಹೊಂದಿದೆ.  ಇನ್ನು 2.0 ಲೀಟರ್ ಡೀಸೆಲ್ ಎಂಜಿನ್, 6 ಸ್ಪೀಡ್ ಮಾನ್ಯುಯೆಲ್ ಟ್ರಾನ್ಸ್‌ಮಿಶನ್, ಪ್ರೊಜೆಕ್ಚರ್ ಹೆಡ್‌ಲ್ಯಾಂಪ್ಸ್, ಡ್ಯುಯೆಲ್ ಫಂಕ್ಷನ್ LED DRLS, R17 ಇಂಚಿನ ಅಲೋಯ್ ವೀಲ್ಹ್,  ಪ್ಲೋಟಿಂಗ್ ಐಸ್ಲಾಂಡ್ ಟಚ್‌ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್, ಪುಶ್ ಬಟನ್ ಸ್ಟಾರ್ಟ್, ಸಂಪೂರ್ಣ ಆಟೋಮ್ಯಾಟಿಕ್ ಟೆಂಪರೇಚರ್ ಕಂಟ್ರೋಲ್ ಹೊಂದಿದೆ.

ಬಿಡುಗಡೆಗೆ ಸಜ್ಜಾಗುತ್ತಿದೆ ಟಾಟಾ ಗ್ರಾವಿಟಾಸ್, ಇಲ್ಲಿದೆ 7 ಸೀಟರ್ ಕಾರಿನ ವಿಶೇಷತೆ!

ಸುರಕ್ಷತೆಗೆ ಪ್ರಮುಖ ಆದ್ಯೆತೆ ನೀಡುವ ಟಾಟಾ ಮೋಟಾರ್ಸ್ ನೂತನ ಹ್ಯಾರಿಯರ್XT+ ವೇರಿಯೆಂಟ್ ಕಾರಿನಲ್ಲಿ ರಿವರ್ಸ್ ಪಾರ್ಕಿಂಗ್ ಕ್ಯಾಮರ, ಆಟೋ ಹೆಡ್‌ಲ್ಯಾಂಪ್ಸ್, ರೆೈನ್ ಸೆನ್ಸಿಂಗ್ ವೈಪರ್ಸ್, ಡ್ಯುಯೆಲ್ ಫ್ರಂಟ್ ಏರ್‌ಬ್ಯಾಗ್ ಸೇರಿದಂತೆ ಎಲ್ಲಾ ಸುರಕ್ಷತಾ ಫೀಚರ್ಸ್ ಈ ಕಾರಿನಲ್ಲಿದೆ. ನೂತನ ಕಾರಿನ ಬೆಲೆ 16.99 ಲಕ್ಷ ರೂಪಾಯಿಯಿಂದ ಆರಂಭಗೊಳ್ಳುತ್ತಿದೆ.

click me!