ಸರ್ಕಾರಕ್ಕೆ 51 ವಿಂಗರ್ ಆ್ಯಂಬುಲೆನ್ಸ್ ನೀಡಿದ ಟಾಟಾ ಮೋಟಾರ್ಸ್!

Published : Sep 26, 2020, 04:03 PM IST
ಸರ್ಕಾರಕ್ಕೆ 51 ವಿಂಗರ್ ಆ್ಯಂಬುಲೆನ್ಸ್ ನೀಡಿದ ಟಾಟಾ ಮೋಟಾರ್ಸ್!

ಸಾರಾಂಶ

ಕೊರೋನಾ ವೈರಸ್ ವಕ್ಕರಿಸಿದ ಬಳಿಕ ದೇಶದ ಹಲವೆಡೆ ಸೋಂಕಿತರ ಆಸ್ಪತ್ರೆ ದಾಖಲಿಸಲು, ಇತರ ಆರೋಗ್ಯ ಸಮಸ್ಯೆಯಿಂದ ಆಸ್ಪತ್ರೆ ದಾಖಲಾಗಲು ಬಯಸುವವರಿಗೆ ಆ್ಯಂಬುಲೆನ್ಸ್ ಸಿಗುವುದೇ ಸವಾಲಾಗಿದೆ. ಈ ಸಂಕಷ್ಟ ಅರಿತ ಟಾಟಾ ಮೋಟಾರ್ಸ್ ಇದೀಗ 51 ವಿಂಗರ್ ಆ್ಯಂಬುಲೆನ್ಸ್ ವಾಹನವನ್ನು ಸರ್ಕಾರಕ್ಕ ಹಸ್ತಾಂತರಿಸಿದೆ.

ಪುಣೆ(ಸೆ.26):  ಕೊರೋನಾ ವಕ್ಕರಿಸಿದ ಬಳಿಕ ವೈದ್ಯಕೀಯ ಕ್ಷೇತ್ರದಲ್ಲಿರುವ ಕುಂದು ಕೊರತೆಗಳ ಸರಿದೂಗಿಸುವ ಪ್ರಯತ್ನಗಳು ನಡೆಯುತ್ತಿದೆ. ಆದರೆ ಬೆಡ್ ಕೊರತೆ, ಆ್ಯಂಬುಲೆನ್ಸ್ ಕೊರತೆಯಿಂದ ಹಲವರು ತೀವ್ರ ಸಂಕಷ್ಟ ಅನುಭವಿಸಿದ್ದಾರೆ. ಈ ಸಮಸ್ಯೆ ಅರಿತ ಟಾಟಾ ಮೋಟಾರ್ಸ್ ತನ್ನ ವಿಂಗರ್ ವಾಹನವನ್ನು ಆ್ಯಂಬುಲೆನ್ಸ್ ಆಗಿ ಪರಿವರರ್ತಿಸಿ ಮಹಾರಾಷ್ಟ್ರ ಸರ್ಕಾರಕ್ಕೆ ಹಸ್ತಾಂತರಿಸಿದೆ. 

ಮತ್ತೆ ನೆರವು ನೀಡಿದ ಟಾಟಾ, 20 ಆ್ಯಂಬುಲೆನ್ಸ್, 100 ವೆಂಟಿಲೇಟರ್ ಹಸ್ತಾಂತರ!..

ಟಾಟಾ ಮೋಟಾರ್ಸ್ 51 ವಿಂಗರ್ ಆ್ಯಂಬುಲೆನ್ಸ್ ವಾಹನವನ್ನು ಪುಣೆಯಲ್ಲಿ ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರಿಗೆ ಹಸ್ತಾಂತರಿಸಲಾಯಿತು. ಪುಣೆಯಲ್ಲಿ ಹೆಚ್ಚುತ್ತಿರುವ ಕೊರೋನಾ ವೈರಸ್ ಕಾರಣ ಪದೇ ಪದೇ ಆ್ಯಂಬುಲೆನ್ಸ್ ಸಮಸ್ಯೆ ಎದರುಗಾತ್ತಿದೆ ಕೋವಿಡ್ 19 ಸೋಂಕಿತರನ್ನು ಆಸ್ಪತ್ರೆಗೆ ದಾಖಿಸಲು ನೆರವಾಗಲು ಟಾಟಾ ಮೋಟಾರ್ಸ್ ಆ್ಯಂಬುಲೆನ್ಸ್ ನೀಡಿದೆ.

65 ಟಾಟಾ ನೆಕ್ಸಾನ್ ಎಲೆಕ್ಟ್ರಿಕ್ ಕಾರು ಬುಕ್ ಮಾಡಿದ ಸರ್ಕಾರ!

ಪುಣೆಯ ಎಲ್ಲಾ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಟಾಟಾ ವಿಂಗರ್ ಆ್ಯಂಬುಲೆನ್ಸ್ ನಿಯೋಜಿಸಲಾಗುವುದು. ಈ ಮೂಲಕ ಯಾರಿಗೂ ಯಾವುದೇ ಸಮಸ್ಯೆ ಬರದ ರೀತಿ ನೋಡಿಕೊಳ್ಳಲಾಗುವುದು ಎಂದು ಪುಣೆ ಜಿಲ್ಲಾ ಪರಿಷದ್ ಹೇಳಿದೆ. 

ವಿಂಗರ್ ವಾಹನವನ್ನು ಆ್ಯಂಬುಲೆನ್ಸ್ ಆಗಿ ಪರಿವರ್ತಿಸಲಾಗಿದೆ. BS6 ವಿಂಗರ್ ವಾಹನವನ್ನು 2020ರ ಆಟೋ ಎಕ್ಸ್ಪೋದಲ್ಲಿ ಅನಾರಣ ಮಾಡಲಾಗಿತ್ತು. ಬಳಿಕ ಕರೋನಾ ವೈರಸ್ ವಕ್ಕರಿಸಿತು. ಈ ವೇಳೆ ಟಾಟಾ ಮೋಟಾರ್ಸ್ ಮಹಾರಾಷ್ಟ್ರ, ಪುಣೆ ಸೇರಿದಂತೆ ಹಲವು ಭಾಗಗಳಲ್ಲಿ ಆ್ಯುಂಬುಲೆನ್ಸ್ ನೀಡಿದೆ. ಇನ್ನು ಪ್ರಧಾನಿ ಕೇರ್ ಫಂಡ್ ಸೇರಿದಂತೆ ಕೊರೋನಾ ವೈರಸ್ ಸಾಂಕ್ರಾಮಿಕ ರೋಗ ಪರಿಹಾರಕ್ಕೆ ಟಾಟಾ ಗ್ರೂಪ್ ಸಮೂಹ 1500 ಕೋಟಿ ರೂಪಾಯಿ ನೀಡಿದೆ.

PREV
click me!

Recommended Stories

ಚಾಲನೆಯಲ್ಲಿದ್ದಾಗಲೇ ಪ್ರಜ್ಞೆ ಕಳೆದುಕೊಂಡ ಚಾಲಕ: ವಿಮಾನ ಟೇಕಾಫ್‌ದಂತೆ ಮೇಲೇರಿದ ಮರ್ಸಿಡಿಸ್: ವೀಡಿಯೋ
ಕಾಂತಾರ ನಟನಿಗೆ ದೈವದ ಅಭಯ, 1.5 ಕೋಟಿ ರೂ ವೆಲ್‌ಫೈರ್ ಕಾರಿನಲ್ಲಿ ಕಾಣಿಸಿಕೊಂಡ ರಿಷಬ್ ಶೆಟ್ಟಿ