ಸ್ವಿಟ್ಜರ್‌ಲೆಂಡ್ ಮೂಲಕ ಬಹುದೊಡ್ಡ ಎಲೆಕ್ಟ್ರಿಕ್ ಬಸ್ ತಯಾರಕ ಕಂಪನಿ ಇದೀಗ ದಕ್ಷಿಣ ಭಾರತದಲ್ಲಿ ಉತ್ಪದಾನೆ ಘಟಕ ಸ್ಥಾಪಿಸಲು ಮುಂದಾಗಿದೆ. ಈ ಕುರಿತ ಹೆಚ್ಚಿನ ವಿವರ ಇಲ್ಲಿದೆ.
ತಿರುವನಂತಪುರಂ(ಮೇ.26): ಮಾಲಿನ್ಯ ತಡೆಗಟ್ಟಲು, ಇಂಧನ ಆಮದು ಕಡಿಮೆ ಮಾಡಲು ಭಾರತ ಎಲೆಕ್ಟ್ರಿಕ್ ವಾಹನದತ್ತ ಚಿತ್ತ ಹರಿಸಿದೆ. ಇದಕ್ಕಾಗಿ ಕೇಂದ್ರ ಸರ್ಕಾರ FAME ಯೋಜನೆ ಕೂಡ ಜಾರಿ ಮಾಡಿದೆ. 2022ರ ವೇಳೆಗೆ ಎಲೆಕ್ಟ್ರಿಕ್ ವಾಹನ ಬಲಕೆ ಹೆಚ್ಚಿಸಲು ಹಲವು ಕಾರ್ಯತಂತ್ರ ರೂಪಿಸಿದೆ. ಇದೀಗ ಸ್ವಿಟ್ಜರ್‌ಲೆಂಡ್‌ನ ಬಹುದೊಡ್ಡ ಎಲೆಕ್ಟ್ರಿಕ್ ಬಸ್ ಕಂಪನಿ ದಕ್ಷಿಣ ಭಾರತದಲ್ಲಿ ಉತ್ಪಾದನಾ ಘಟಕ ಸ್ಥಾಪಿಸಲು ಮುಂದಾಗಿದೆ.
ಇದನ್ನೂ ಓದಿ: 2019ರ ಜೂನ್-ಜುಲೈನಲ್ಲಿ ಬಿಡುಗಡೆಯಾಗುತ್ತಿದೆ 4 ಕಾರು- ಇಲ್ಲಿದೆ ವಿವರ!
undefined
ಸ್ವಿಸ್ ಮೂಲದ ಮೇಜರ್ ಹೆಸ್ AG ಎಲೆಕ್ಟ್ರಿಕ್ ಬಸ್ ಕಂಪನಿ ಇದೀಗ ಕೇರಳ ಸರ್ಕಾರದ ಜೊತೆ ಮಾತುಕತೆ ನಡೆಸಿದೆ. ಕೇರಳ ಸರ್ಕಾರ ಈಗಾಗಲೇ ಎಲೆಕ್ಟ್ರಿಕ್ ಬಸ್ ಬಳಕೆ ಮಾಡಲು ಯೋಜನೆ ರೂಪಿಸಿದೆ. ಪ್ರಾಯೋಗಿಕವಾಗಿ ಕೆಲವೆಡೆ ಎಲೆಕ್ಟ್ರಿಕ್ ಬಸ್ ಸೇವೆ ಜಾರಿಗೊಳಿಸಿದೆ. ಇದನ್ನರಿತ ಸ್ವಿಸ್ ಕಂಪನಿ ಇದೀಗ ಕೇರಳದಲ್ಲೇ ಎಲೆಕ್ಟ್ರಿಕ್ ಬಸ್ ಉತ್ಪಾದನಾ ಘಟಕ ಜಾರಿ ಮಾಡಲು ಮುಂದಾಗಿದೆ.
ಇದನ್ನೂ ಓದಿ: ಕಡಿಮೆ ಬೆಲೆಯ ಟಾಟಾ ಮಿನಿ ಟ್ರಕ್ ಬಿಡುಗಡೆ!
ಸ್ವಿಸ್ ಕಂಪನಿಯ ಎಲೆಕ್ಟ್ರಿಕ್ ಬಸ್ ಘಟಕದಿಂದ ಸ್ಥಳೀಯರಿಗೆ ಉದ್ಯೋಗ ಅವಕಾಶ ಕೂಡ ಸಿಗಲಿದೆ. ಕೇರಳ ರಾಜ್ಯ ಸಾರಿಗೆ ಇಲಾಖೆ ಸಂಪೂರ್ಣ ಎಲೆಕ್ಟ್ರಿಕ್ ಬಸ್ ಬಳಕೆ ಮಾಡಲು ನಿರ್ಧರಿಸಿದೆ. ಇದಕ್ಕಾಗಿ ಮಹತ್ವದ ಹೆಜ್ಜೆ ಇಟ್ಟಿದೆ. ಇದಕ್ಕಾಗಿ ಬರೋಬ್ಬರಿ 3000 ಎಲೆಕ್ಟ್ರಿಕ್ ಬಸ್ ಖರೀದಿಗೆ ಮುಂದಾಗಿದೆ. ಈ ಮೂಲಕ ನಿರ್ವಹಣಾ ವೆಚ್ಚ ಕಡಿಮೆ ಮಾಡಲು ಸರ್ಕಾರ ಮುಂದಾಗಿದೆ.