ಹೀರೋ ಸ್ಪ್ಲೆಂಡರ್‌ಗೆ 25ನೇ ವರ್ಷದ ಸಂಭ್ರಮ- ಸ್ಪೆಷಲ್ ಎಡಿಶನ್ ಬೈಕ್ ಬಿಡುಗಡೆ!

Published : May 26, 2019, 10:31 AM IST
ಹೀರೋ ಸ್ಪ್ಲೆಂಡರ್‌ಗೆ 25ನೇ ವರ್ಷದ ಸಂಭ್ರಮ- ಸ್ಪೆಷಲ್ ಎಡಿಶನ್ ಬೈಕ್ ಬಿಡುಗಡೆ!

ಸಾರಾಂಶ

ಹೀರೋ ಸ್ಪ್ಲೆಂಡರ್ ಬೈಕ್ 25 ವರ್ಷ ಪೂರೈಸಿದೆ. ಈ ಸಂಭ್ರಮಾಚರಣೆಯಲ್ಲಿ ಹೀರೋ ಮೋಟಾರ್ ಸ್ಪೆಷಲ್ ಎಡಿಶನ್ ಬೈಕ್ ಬಿಡುಗಡೆ ಮಾಡಿದೆ.  ನೂತನ  ಬೈಕ್ ವಿಶೇಷತೆ ಹಾಗೂ ಬೆಲೆ ಮಾಹಿತಿ ಇಲ್ಲಿದೆ.

ನವದಹೆಲಿ(ಮೇ.26): ಭಾರತದಲ್ಲಿ ಗರಿಷ್ಠ ಮಾರಾಟ ದಾಖಲೆ ಹೊಂದಿರುವ ಹೀರೋ ಸ್ಪ್ಲೆಂಡರ್‌ ಬೈಕ್ 25ನೇ ವರ್ಷ ಪೂರೈಸಿದೆ. ಕಳೆದ 25 ವರ್ಷಗಳಿಂದ ಸ್ಪ್ಲೆಂಡರ್‌ ಬೈಕ್ ಹಲವು ಬದಲಾವೆ ಮೂಲಕ ಬಿಡುಗಡೆಯಾಗಿದೆ. ಕಡಿಮೆ ಬೆಲೆ, ಗರಿಷ್ಠ ಮೈಲೇಜ್ ಹಾಗೂ ಆಕರ್ಷಕ ವಿನ್ಯಾಸದಿಂದ ಗ್ರಾಹಕರ ಗಮನಸೆಳೆದಿದೆ. 25 ವರ್ಷ ಪೂರೈಸಿದ ಬೆನ್ನಲ್ಲೇ ಹೀರೋ ಸ್ಪೆಷಲ್ ಎಡಿಶನ್ ಸ್ಪ್ಲೆಂಡರ್‌ ಬೈಕ್ ಬಿಡುಗಡೆ ಮಾಡಿದೆ.

ಇದನ್ನೂ ಓದಿ: ರಾಯಲ್ ಎನ್‌ಫೀಲ್ಡ್ ಪ್ರತಿಸ್ಪರ್ಧಿ-ಬರುತ್ತಿದೆ ಸುಜುಕಿ ಇಂಟ್ರುಡರ್ 250!

ಸ್ಪೆಷಲ್ ಎಡಿಶನ್ ಸ್ಪ್ಲೆಂಡರ್‌ ಬೈಕ್ ಬೆಲೆ 56,600 ರೂಪಾಯಿ(ಎಕ್ಸ್ ಶೋ ರೂಂ). ಸ್ಪೆಷಲ್ ಎಡಿಶನ್ ಬೈಕ್ ಸ್ಪ್ಲೆಂಡರ್‌ ಪ್ಲಸ್ ಬೈಕ್‌ ಅಪಗ್ರೇಡ್ ಮೂಲಕ ಬಿಡುಗಡೆಯಾಗಿದೆ. ನೂತನ ಸ್ಪೆಷಲ್ ಎಡಿಶನ್ ಸ್ಪ್ಲೆಂಡರ್‌ ಬೈಕ್ ಸೆಲ್ಫ್ ಸ್ಟಾರ್ಟ್ ಸೇರಿದಂತೆ ಹಲವು ಫೀಚರ್ಸ್ ಸೇರಿಸಲಾಗಿದೆ. ಹೀಗಾಗಿ  ಸ್ಪ್ಲೆಂಡರ್‌ ಪ್ಲಸ್ ಬೈಕ್ ಬೆಲೆಗಿಂತ 2000 ರೂಪಾಯಿ ಹೆಚ್ಚಾಗಿದೆ.

ಇದನ್ನೂ ಓದಿ: ಮಿಂಚಿ ಮರೆಯಾದ ಭಾರತದ 10 ಜಾವಾ-ಯೆಝೆಡಿ ಬೈಕ್!

ನೂತನ ಬೈಕ್ ಆಕರ್ಷಕ ಬಣ್ಣದಲ್ಲಿ ಬಿಡುಗಡೆಯಾಗಿದೆ. ಆದರೆ ಎಂಜಿನ್‌ನಲ್ಲಿ ಯಾವುದೇ ಬದಲಾವಣೆ ಇಲ್ಲ 97 cc ಸಿಂಗಲ್ ಸಿಲಿಂಡರ್ ಎಂಜಿನ್ ಹೊಂದಿದ್ದು, 8.36 PS ಪವರ್ ಹಾಗೂ 8.05 Nm ಪೀಕ್ ಟಾರ್ಕ್ ಉತ್ಪಾದಿಸಲಿದೆ. ಹ್ಯಾಲೋಜಿನ್ ಹೆಡ್‌ಲ್ಯಾಂಪ್ಸ್, ಟೆಲಿಸ್ಕೋಪಿಕ್ ಫೋರ್ಕ್, ಇಂಟೆಗ್ರೆಟೆಡ್ ಬ್ರೇಕ್ ಸಿಸ್ಟಮ್ ಹೊಂದಿದೆ.
 

PREV
click me!

Recommended Stories

ಚಾಲನೆಯಲ್ಲಿದ್ದಾಗಲೇ ಪ್ರಜ್ಞೆ ಕಳೆದುಕೊಂಡ ಚಾಲಕ: ವಿಮಾನ ಟೇಕಾಫ್‌ದಂತೆ ಮೇಲೇರಿದ ಮರ್ಸಿಡಿಸ್: ವೀಡಿಯೋ
ಕಾಂತಾರ ನಟನಿಗೆ ದೈವದ ಅಭಯ, 1.5 ಕೋಟಿ ರೂ ವೆಲ್‌ಫೈರ್ ಕಾರಿನಲ್ಲಿ ಕಾಣಿಸಿಕೊಂಡ ರಿಷಬ್ ಶೆಟ್ಟಿ