ಗ್ರಾಹಕರಿಗೆ SWIGGY ಬಂಪರ್ ಕೊಡುಗೆ; ಪಿಕಪ್ ಮತ್ತು ಡ್ರಾಪ್ ಸೇವೆ ಆರಂಭ!

By Web Desk  |  First Published Sep 4, 2019, 9:19 PM IST

ಫುಡ್ ಡೆಲಿವರಿ ಮೂಲಕ ದೇಶದ ಗಮನಸೆಳೆದಿರುವ ಸ್ವಿಗ್ಗಿ ಇದೀಗ ಗ್ರಾಹಕರಿಗೆ ಬಂಪರ್ ಕೊಡುಗೆ ನೀಡುತ್ತಿದೆ. ಸ್ವಿಗ್ಗಿ ನೂತನ ಸ್ವಿಗ್ಗಿ ಗೋ ನೂತನ ಆ್ಯಪ್ ಮೂಲಕ ಹೊಸ ಸೇವೆ ಆರಂಭಿಸುತ್ತಿದೆ. ಈ ಸೇವೆ ಬೆಂಗಳೂರಿನಲ್ಲಿ ಆರಂಭವಾಗುತ್ತಿರುವುದು ವಿಶೇಷ. ಸ್ವಿಗ್ಗಿ ಗೋ ಸೇವೆಯ ವಿವರ ಇಲ್ಲಿದೆ.


ಬೆಂಗಳೂರು(ಸೆ.04):  ವರ್ಷದ ಆರಂಭದಲ್ಲಿ ಸ್ವಿಗ್ಗಿ ಸ್ಟೋರ್ಸ್ ಆರಂಭಿಸಿದ ಸ್ವಿಗ್ಗಿ ಫುಡ್ ಡೆಲಿವರಿ ಇದೀಗ ಹೊಸ ಸೇವೆ ಆರಂಭಿಸಿದೆ.  ಇದೀಗ, ಸ್ವಿಗ್ಗಿ ಗೋ ಎಂಬ ಹೊಸ ಸೌಲಭ್ಯವನ್ನು ಆರಂಭಿಸುವ ಮೂಲಕ ಗ್ರಾಹಕರಿಗೆ ಹೋಲಿಕೆಗೂ ನಿಲುಕದ ಆರಾಮದಾಯಕತೆಯ ಸೇವೆ ನೀಡುತ್ತಿದೆ.  ಬೆಂಗಳೂರಿನಾದ್ಯಂತ ಈ ಸೇವೆ ಆರಂಭವಾಗಿದ್ದು, ನಗರದ ಯಾವುದೇ ಮೂಲೆಗೂ ಪ್ಯಾಕೇಜ್‍ಗಳನ್ನು ತಲುಪಿಸುವಂಥ ತಕ್ಷಣ ಪಿಕಪ್ ಮತ್ತು ಡ್ರಾಪ್ ಸೇವೆ ಆಗಿದೆ.  ಸ್ವಿಗ್ಗಿ ಸ್ಟೋರ್‌ಗಳಂತೆ  ಸ್ವಿಗ್ಗಿ ಗೋ ಎನ್ನುವುದು ಕೂಡ ಸ್ವಿಗ್ಗಿ ಅಪ್ಲಿಕೇಷನ್‍ನ ಭಾಗವೇ ಆಗಿದೆ.

ಇದನ್ನೂ ಓದಿ: ಪ್ಲಾಸ್ಟಿಕ್ ಬೇಡ, ಬಾಳೆ ಎಲೆ ಬಳಸಿ: ತುಳುನಾಡಿನ ಶಾಸಕರ ಮನವಿಗೆ ಸೈ ಎಂದ ಸ್ವಿಗ್ಗಿ!

Tap to resize

Latest Videos

undefined

ನಗರದಲ್ಲಿರುವ ಪ್ರತಿಯೊಬ್ಬ ಗ್ರಾಹಕನಿಗೂ ಡೆಲಿವರಿಯನ್ನು ಸುಲಭವಾಗಿಸುವ ಭರವಸೆಯ ಮೂಲಕ, ಸ್ವಿಗ್ಗಿ ಗೋ ಸೇವೆಯನ್ನು ಲಾಂಡ್ರಿಯನ್ನು ಒಯ್ಯಲು, ರವಾನಿಸಲು, ಮರೆತುಹೋಗಿರುವ ಕೀಲಿಕೈಗಳನ್ನು ಸೂಕ್ತ ಮಾಲೀಕನಿಗೆ ತಲುಪಿಸಲು, ಮನೆಯಿಂದ ಕಚೇರಿಗೆ ಊಟದ ಬಾಕ್ಸ್ ತೆಗೆದುಕೊಂಡು ಹೋಗಲು ಅಥವಾ ಕ್ಲೈಂಟ್‍ಗಳಿಗೆ ಕಡತಗಳು ಅಥವಾ ಪಾರ್ಸೆಲ್‍ಗಳನ್ನು ತಲುಪಿಸಲು ಹೀಗೆ ನಾನಾ ಉದ್ದೇಶಗಳಿಗಾಗಿ ಬಳಸಬಹುದಾಗಿದೆ. ಗ್ರಾಹಕರಿಗೆ ಆರಾಮದಾಯಕತೆ ಒದಗಿಸಲು ಮತ್ತು ಅವರ ಸಮಯವನ್ನು ಉಳಿಸುವತ್ತ ಸ್ವಿಗ್ಗಿ ಗಮನ ನೆಟ್ಟಿದೆ, ಬಲಿಷ್ಠವಾದ ಇನ್-ಹೌಸ್ ತಂತ್ರಜ್ಞಾನ ಮತ್ತು ದೇಶದ ಅತಿದೊಡ್ಡ ಸಕ್ರಿಯ ಡೆಲಿವರಿ ಸಂಸ್ಥೆಯಾದ ಸ್ವಿಗ್ಗಿ ಸಹಜವಾಗಿಯೇ ಅತ್ಯಂತ ಅಗ್ಗದ ದರದಲ್ಲಿ ಗ್ರಾಹಕರಿಗೆ ಅತ್ಯುತ್ತಮ ಸೇವೆಯನ್ನು ಒದಗಿಸುತ್ತಿದೆ.

ನಗರದ ಗ್ರಾಹಕರಿಗೆ ಅತ್ಯುತ್ತಮವಾದ ಆರಾಮದಾಯಕತೆಯನ್ನು ಒದಗಿಸುವ ಮೂಲಕ ಅವರ ಜೀವನ ಗುಣಮಟ್ಟವನ್ನು ಎತ್ತರಕ್ಕೇರಿಸುವುದೇ ಸ್ವಿಗ್ಗಿಯ ಧ್ಯೇಯವಾಗಿದೆ.   
ಕೇವಲ ಆಹಾರ ಮಾತ್ರವಲ್ಲದೆ, ಇತರೆ ವಸ್ತುಗಳನ್ನೂ ತಲುಪಬೇಕಾದವರಿಗೆ ತಲುಪಿಸುವಂಥ ಸ್ವಿಗ್ಗಿಯ ಸೇವೆಗೆ ಸಾಕ್ಷಿಯಾದ ದೇಶದ ಮೊದಲ ನಗರವೆಂದರೆ ಅದು ಬೆಂಗಳೂರು. 2020ರೊಳಗಾಗಿ ನಾವು ಸ್ವಿಗ್ಗಿ ಗೋ ಸೇವೆಯನ್ನು ಸುಮಾರು 300 ನಗರಗಳಿಗೆ ವಿಸ್ತರಿಸುತ್ತಿದ್ದೇವೆ ಎಂದು  ಸ್ವಿಗ್ಗಿ ಸಿಇಒ ಶ್ರೀಹರ್ಷ ಮೆಜೆಟಿ ಹೇಳಿದರು.

click me!