ಟೊಯೋಟಾ ರೇವ್4 ಹೈಬ್ರಿಡ್ ಕಾರನ್ನು Aಕ್ರಾಸ್ ಕಾರಾಗಿ ಅನಾವರಣ ಮಾಡಿದ ಸುಜುಕಿ!

Published : Jul 18, 2020, 03:13 PM ISTUpdated : Jul 18, 2020, 03:17 PM IST
ಟೊಯೋಟಾ ರೇವ್4 ಹೈಬ್ರಿಡ್ ಕಾರನ್ನು Aಕ್ರಾಸ್ ಕಾರಾಗಿ ಅನಾವರಣ ಮಾಡಿದ ಸುಜುಕಿ!

ಸಾರಾಂಶ

ಭಾರತದಲ್ಲಿ ಮಾರುತಿ ಸುಜುಕಿ ಹಾಗೂ ಟೊಯೋಟಾ ಜೊತೆಯಾಗಿ ಹೆಜ್ಜೆ ಇಟ್ಟಿದೆ.  ಕ್ರಾಸ್ ಬ್ಯಾಡ್ಜಿಂಗ್ ಮೂಲಕ ಮಾರುತಿ ಸುಜುಕಿಯ ಬಲೆನೋ ಕಾರನ್ನು ಟೊಯೋಟಾ ಮೋಟಾರ್ ಗ್ಲಾಂಜಾ ಕಾರಾಗಿ ಬಿಡುಗಡೆ ಮಾಡಿದೆ. ಇದೀಗ ಟೊಯೋಟಾ ರೇವ್ 4 ಹೈಬ್ರಿಡ್ SUV ಕಾರನ್ನು ಸುಜುಕಿ A ಕ್ರಾಸ್ ಕಾರಾಗಿ ಬಿಡುಗಡೆ ಮಾಡುತ್ತಿದೆ. ಇದೀಗ ನೂತನ ಕಾರು ಅನಾವರಣಗೊಂಡಿದೆ.  

ಜಪಾನ್(ಜು.18) : ಭಾರತದಲ್ಲಿ ಮಾರುತಿ ಸುಜುಕಿ ಹಾಗೂ ಟೊಯೋಟಾ ಮೋಟಾರ್  ಜಂಟಿಯಾಗಿ ಕಾರ್ಯನಿರ್ವಹಿಸುತ್ತಿರುವಂತೆ, ಯುರೋಪ್ ರಾಷ್ಟ್ರದಲ್ಲೂ ಸುಜುಕಿ ಹಾಗೂ ಟೊಯೋಟಾ ಪಾಲುದಾರಾಗಿದೆ. ಕ್ರಾಸ್ ಬ್ಯಾಡ್ಜಿಂಗ್ ಮೂಲಕ ಸುಜುಕಿ ಕಾರುಗಳನ್ನು ಟೊಯೋಟಾ ತನ್ನ ಲೋಗೋಮೂಲಕ ಬಿಡುಗಡೆ ಮಾಡುತ್ತಿದ್ದರೆ, ಇತ್ತ ಟೊಯೋಟಾ ಕಾರುಗಳನ್ನು ಸುಜುಕಿ ಮೋಟಾರ್ ಬಿಡುಗಡೆ ಮಾಡುತ್ತಿದೆ. ಇದೀಗ ಟೊಯೋಟಾದ ರೇವ್ 4 ಹೈಬ್ರಿಡ್ ಕಾರನ್ನು ಮಾರುತಿ ಸುಜುಕಿ ತನ್ನ ಲೋಗೋದಡಿ ಅನಾವರಣ ಮಾಡಿದೆ.

ಟೊಯೊಟಾ ಗ್ಲಾಂಝಾ G MT ಕಾರು ಬಿಡುಗಡೆ; ಬೆಲೆ 6.98 ಲಕ್ಷ!.

ಯುರೋಪ್ ಮಾರುಕಟ್ಟೆಯಲ್ಲಿ ಸುಜುಕಿ Aಕ್ರಾಸ್ ಕಾರು ಅನಾವರಣಗೊಂಡಿದೆ. ಇದು ಹೈಬ್ರಿಡ್ SUV ಕಾರಾಗಿದೆ. ಆದರೆ ಟೊಯೋಟಾ ರೇವ್ 4 ಕಾರಿಗೂ ಸುಜುಕಿ A ಕ್ರಾಸ್ ಕಾರಿಗೂ ಕೆಲ ಬದಲಾವಣೆಗಳಿವೆ. ಸುಜಿಕ Aಕ್ರಾಸ್‌ ಕಾರಿನಲ್ಲಿ ಮುಂಭಾಗದ ಗ್ರಿಲ್ ಬದಲಾಯಿಸಲಾಗಿದೆ. ಹೆಕ್ಸಾಗೊನಲ್ ಗ್ರಿಲ್ ಹಾಗೂ ಅಪ್‌ರೈಟ್ ಫಾಗ್ ಲ್ಯಾಂಪ್ಸ್ ಬಳಸಲಾಗಿದೆ. 

ಹೊಚ್ಚ ಹೊಸ ಆಲೋಯ್ ವೀಲ್ ಬಳಸಲಾಗಿದೆ. ಆದರೆ LED ಹೆಡ್‌ಲ್ಯಾಂಪ್ಸ್ ಕ್ಲಸ್ಟರ್ ಬದಲಾವಣೆ ಮಾಡಿಲ್ಲ. ಇದು ಟೊಯೋಟಾ ರೇವ್4 ಕಾರಿನಲ್ಲಿರುವಂತೆ ಬಳಸಲಾಗಿದೆ. ಕಾರಿನ ಇಂಟಿರೀಯರ್‌ನಲ್ಲಿ ಹೆಚ್ಚಿನ ಬದಲಾವಣೆಗಳು ಮಾಡಿಲ್ಲ. ಕೇವಲ ಸುಜುಕಿ ಲೋಗೋವಿರುವ ಸ್ಟೀರಿಂಗ್ ವೀಲ್ ಹೊರತು ಪಡಿಸಿದರೆ ಇನ್ನುಳಿದಂತೆ ಎಲ್ಲಾ ವಿನ್ಯಾಸ, ಶೈಲಿ ಫೀಚರ್ಸ್, ಟೊಯೋಟಾ ರೇವ್ 4 ಕಾರಿನಂತೆ ಇದೆ.  2.4 ಲೀಟರ್ ಪೆಟ್ರೋಲ್ ಎಂಜಿನ್ ಹಾಗೂ ಎಲೆಕ್ಟ್ರಿಕ್ ಮೋಟರ್ ಹೊಂದಿದೆ.

PREV
click me!

Recommended Stories

ನಿಯಮಗಳ ಪಾಲಿಸದ ಸ್ಲೀಪರ್ ಬಸ್‌ ಸ್ಥಗಿತ: ಎನ್‌ಎಚ್‌ಆರ್‌ಸಿ
Tata Sierra vs Maruti Grand Vitara : ಯಾವ SUV ಉತ್ತಮ ಎಂಜಿನ್ ಹೊಂದಿದೆ? ಬೆಲೆ, ವೈಶಿಷ್ಟ್ಯ ತಿಳಿಯಿರಿ