ಸುಜುಕಿ-ಟೊಯೊಟಾ ಬಿಡುಗಡೆ ಮಾಡುತ್ತಿದೆ ನೂತನ ಎಲೆಕ್ಟ್ರಿಕ್ ಕಾರು!

By Web Desk  |  First Published Oct 22, 2019, 6:16 PM IST

ಮಾರುತಿ ಸುಜುಕಿ ಹಾಗೂ ಟೊಯೊಟಾ ಜಂಟಿಯಾಗಿ ಕಾಂಪಾಕ್ಟ್ ಎಲೆಕ್ಟ್ರಿಕ್ ಕಾರು ಬಿಡುಗಡೆ ಮಾಡುತ್ತಿದೆ. ಸಣ್ಣ ಎಲೆಕ್ಟ್ರಿಕ್ ಕಾರು ವಿಭಾಗದಲ್ಲಿ ಹೊಸ ಸಂಚಲನ ಮೂಡಿಸುವ ಸಾಧ್ಯತೆ ಇದೆ.


ನವದೆಹಲಿ(ಅ.22): ಮಾರುತಿ ಸುಜುಕಿ ಶೀಘ್ರದಲ್ಲೇ ವ್ಯಾಗನ್ಆರ್ ಎಲೆಕ್ಟ್ರಿಕ್ ಕಾರು ಬಿಡುಗಡೆ ಮಾಡುತ್ತಿದೆ. ಇದರ ಬೆನ್ನಲ್ಲೇ ಸುಜುಕಿ ಹಾಗೂ ಟೊಯೊಟಾ ಜೊತೆಯಾಗಿ ಸಣ್ಣ ಎಲೆಕ್ಟ್ರಿಕ್ ಕಾರು ಬಿಡುಗಡೆ ಮಾಡಲು ಮುಂದಾಗಿದೆ. ಈ ಮೂಲಕ ಮಹೀಂದ್ರ E2 ಕಾರಿಗೆ ಪೈಪೋಟಿ ನೀಡಲು ಸಜ್ಜಾಗಿದೆ. ಕಡಿಮೆ ಬೆಲೆ, ಗರಿಷ್ಠಲ ಮೈಲೇಜ್ ಸೇರಿದಂತೆ ಹಲವು ವಿಶೇಷತೆಗಳೊಂದಿಗೆ ಈ ಕಾರು ಬಿಡುಗಡೆಯಾಗುತ್ತಿದೆ.

ಇದನ್ನೂ ಓದಿ: ಬೆಂಗಳೂರಿನ ಅಲ್ಟ್ರಾವೊಯಿಲೆಟ್ ಕಂಪನಿಯಿಂದ ಶೀಘ್ರದಲ್ಲೇ ಎಲೆಕ್ಟ್ರಿಕ್ ಬೈಕ್ ಬಿಡುಗಡೆ!

Tap to resize

Latest Videos

undefined

ಜಪಾನ್ ಮೂಲಗ ಸುಜುಕಿ ಹಾಗೂ ಟೊಯೊಟಾ ಜಂಟಿಯಾಗಿ ಕಾಂಪಾಕ್ಟ್ ಎಲೆಕ್ಟ್ರಿಕ್ ಕಾರು ಬಿಡುಗಡೆ ಮಾಡುತ್ತಿದೆ. ಸುಜುಕಿ -ಟೊಯೊಟಾ ಕಂಪನಿ ನೂತನ ಕಾರು ಶೀಘ್ರದಲ್ಲೇ ಬಿಡುಗಡೆ ಮಾಡುವುದಾಗಿ ಹೇಳಿದೆ. BEV ಸಣ್ಣ ಕಾರು ಉತ್ಪಾದನೆಗೆ 2017ರಲ್ಲಿ ಸುಜುಕಿ-ಟೊಯೊಟಾ ಒಪ್ಪಂದ ಮಾಡಿಕೊಂಡಿದೆ.

ಇದನ್ನೂ ಓದಿ: ಕೈನೆಟಿಕ್ ಸಫರ್ ಎಲೆಕ್ಟ್ರಿಕ್ ರಿಕ್ಷಾ ಬಿಡುಗಡೆ!

ಮಾರುತಿ ಸುಜುಕಿಯ ವ್ಯಾಗನ್ಆರ್ ಎಲೆಕ್ಟ್ರಿಕ್ ಕಾರಿಗೆ 12 ಲಕ್ಷ ರೂಪಾಯಿ ಬೆಲೆ ನಿಗದಿ ಮಾಡಲಾಗಿದೆ. ಆದರೆ ಸಣ್ಣ ಕಾಂಪಾಕ್ಟ್ ಕಾರು 5 ರಿಂದ 8 ಲಕ್ಷ ರೂಪಾಯಿ ಎಂದು ಅಂದಾಜಿಸಲಾಗಿದೆ. ಕಡಿಮೆ ಬೆಲೆ ಹೆಚ್ಚು ಮೈಲೇಜ್ ಅನ್ನೋ ಮಾಹಿತಿಯನ್ನು ಕಂಪನಿ ಬಹಿರಂಗ ಪಡಿಸಿದೆ. ಆದರೆ ನಿಖರ ಮಾಹಿತಿ ನೀಡಿಲ್ಲ.

click me!