ಸುಜುಕಿ ಮೋಟಾರ್ಸ್‌ನಿಂದ ಸರ್ಪ್ರೈಸ್- ಮೇ.20ಕ್ಕೆ ಹೊಸ ವಾಹನ ಬಿಡುಗಡೆ!

Published : Apr 30, 2019, 04:08 PM ISTUpdated : Apr 30, 2019, 04:19 PM IST
ಸುಜುಕಿ ಮೋಟಾರ್ಸ್‌ನಿಂದ ಸರ್ಪ್ರೈಸ್- ಮೇ.20ಕ್ಕೆ ಹೊಸ ವಾಹನ ಬಿಡುಗಡೆ!

ಸಾರಾಂಶ

ಸುಜುಕಿ ಗ್ರಾಹಕರ ಕುತೂಹಲ ಡಬಲ್ ಮಾಡಿದೆ. ಮೇ.20ಕ್ಕೆ ಹೊಸ ವಾಹನ ಬಿಡುಗಡೆ ಮಾಡುತ್ತಿದೆ. ಆದರೆ ಇದು ಸ್ಕೂಟರ್ ಅಥವಾ ಬೈಕ್ ಅನ್ನೋದನ್ನು ಬಹಿರಂಗ ಪಡಿಸಿಲ್ಲ. ಟೀಸರ್ ಬಿಡುಗಡೆ ಮಾಡೋ ಮೂಲಕ ಸಣ್ಣ ಸುಳಿವು ನೀಡಿದೆ. ಹಾಗಾದರೆ ಮೇ.20ಕ್ಕೆ ಬಿಡುಗಡೆಯಾಗೋ ವಾಹನ ಯಾವುದು? ಇಲ್ಲಿದೆ ವಿವರ.

ನವದೆಹಲಿ(ಏ.30): ಸುಜುಕಿ ಮೋಟಾರ್ಸ್ ಸರ್ಪ್ರೈಸ್ ನೀಡಲು ರೆಡಿಯಾಗಿದೆ. ಮೇ.20ಕ್ಕೆ ನೂತನ ಬೈಕ್ ಅಥವಾ ಸ್ಕೂಟರ್ ಬಿಡುಗಡೆ ಮಾಡುವುದಾಗಿ ಸುಜುಕಿ ಟು ವೀಲ್ಹರ್ ಸಂಸ್ಥೆ ಘೋಷಿಸಿದೆ. ಈಗಾಗಲೇ ಟೀಸರ್ ಬಿಡುಗಡೆ ಮಾಡೋ ಮೂಲಕ ಸುಜುಕಿ ಜನರ ಕುತೂಹಲವನ್ನು ಇಮ್ಮಡಿಗೊಳಿಸಿದೆ.  ಶ್ರೇಷ್ಠತೆಗೆ ಸಾಕ್ಷಿಯಾಗಿ  ಎಂದು ಸುಜುಕಿ ಹೇಳಿದೆ.

ಇದನ್ನೂ ಓದಿ: ಹೊಸ ಅವತಾರದಲ್ಲಿ ಯಮಹಾ R15 V3 ಬೈಕ್!

ಸುಜುಕಿ ಬಿಡುಗಡೆ ಮಾಡಲಿರುವ ನೂತನ ಬೈಕ್ ನೂತನ ಜಿಕ್ಸರ್ 250 ಅಥವಾ ಆಕ್ಸೆಸ್ 125 ಸ್ಕೂಟರ್ ಎಂದು ಅಂದಾಜಿಸಲಾಗಿದೆ. ನೂತನ ಜಿಕ್ಸ್ 250 ಬೈಕ್ ಟ್ವಿನ್ ಮೋಟಾರ್ ಎಂಜಿನ್ ಹೊಂದಿದೆ.   250cc, ಸಿಂಗಲ್ ಸಿಲಿಂಡರ್,  ಏರ್‌ಕೂಲ್ಡ್, 20PS to 22PS ಪವರ್ ಹೊಂದಿದೆ. ಇನ್ನೂ ABS ತಂತ್ರಜ್ಞಾನ ಹೊಂದಿದೆ.  ನೂತನ ಜಿಕ್ಸರ್ 250 ಬೆಲೆ  1.4  ಲಕ್ಷ ರೂಪಾಯಿ(ಎಕ್ಸ್ ಶೋ ರೂಂ).

ಇದನ್ನೂ ಓದಿ: ಮಾರುತಿ ಸುಜುಕಿ ಎರ್ಟಿಗಾ 1.5 L ಡೀಸೆಲ್ ಕಾರು ಬಿಡುಗಡೆ!

ಮೇ.20ರಂದು ಬಿಡುಗಡೆಯಾಗಲಿರುವ ಬೈಕ್ ಒಂದು ವೇಳೆ ನ್ಯೂ ಜನರೇಶನ್ ಆಕ್ಸೆಸ್ ಸ್ಕೂಟರ್ ಆಗಿರುವ ಸಾಧ್ಯತೆಯನ್ನೂ ತಳ್ಳಿಹಾಕುವಂತಿಲ್ಲ. ನೂತನ ಆಕ್ಸೆಸ್ ಸ್ಕೂಟರ್ LED ಹೆಡ್‌ಲ್ಯಾಂಪ್ಸ್, ಡಿಜಿಟಲ್ ಇನ್ಸ್‌ಟ್ರುಮೆಂಟ್ ಕ್ಲಸ್ಟರ್  ಕನ್ಸೋಲ್ ಹೊಂದಿದೆ. ಈ ಎರಡು ವಾಹನಗಳನ್ನು ಬಿಟ್ಟು ಬೇರೊಂದು ವಾಹನ ಬಿಡುಗಡೆ ಮಾಡುತ್ತಾ ಅನ್ನೋದು ಸದ್ಯ ಕಾಡುತ್ತಿರುವ ಪ್ರಶ್ನೆ.

PREV
click me!

Recommended Stories

ಕಾಂತಾರ ನಟನಿಗೆ ದೈವದ ಅಭಯ, 1.5 ಕೋಟಿ ರೂ ವೆಲ್‌ಫೈರ್ ಕಾರಿನಲ್ಲಿ ಕಾಣಿಸಿಕೊಂಡ ರಿಷಬ್ ಶೆಟ್ಟಿ
ನಿಯಮಗಳ ಪಾಲಿಸದ ಸ್ಲೀಪರ್ ಬಸ್‌ ಸ್ಥಗಿತ: ಎನ್‌ಎಚ್‌ಆರ್‌ಸಿ