ಮಾರುತಿ ಎರ್ಟಿಗಾ ಇದೀಗ 1.5 ಲೀಟರ್ ಡೀಸೆಲ್ ಎಂಜಿನ್ ಕಾರು ಬಿಡುಗಡೆಯಾಗಿದೆ. ಈ ಕಾರಿನ ವಿಶೇಷತೆ ಏನು? ಎಂಜಿನ್ ಸಾಮರ್ಥ್ಯ ಹೇಗಿದೆ? ಕಾರಿನ ಬೆಲೆ ಎಷ್ಟು? ಈ ಎಲ್ಲಾ ಮಾಹಿತಿಗಳು ಇಲ್ಲಿದೆ.
ನವದೆಹಲಿ(ಏ.30): 2019ರ ಸಾಲಿನಲ್ಲಿ ಮಾರುತಿ ಸುಜುಕಿ ಸಂಸ್ಥೆ 2 ಹಳೇ ಕಾರುಗಳನ್ನು ಹೊಸ ಅವತಾರದಲ್ಲಿ ಬಿಡುಗಡೆ ಮಾಡಿದೆ. ಮಾರುತಿ ವ್ಯಾಗನ್ಆರ್ ಹಾಗೂ ಮಾರುತಿ ಎರ್ಟಿಗಾ ಕಾರುಗಳನ್ನು ಕೆಲ ಬದಲಾವಣೆಯೊಂದಿಗೆ ಬಿಡುಗಡೆ ಮಾಡಲಾಗಿದೆ. ಗ್ರಾಹಕರಿಂದ ನೂತನ ಕಾರುಗಳಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇದೀಗ ಮಾರುತಿ ಎರ್ಟಿಗಾ 1.5 ಲೀಟರ್ ಡೀಸೆಲ್ ಎಂಜಿನ್ ಕಾರು ಬಿಡುಗಡೆಯಾಗಿದೆ.
3 ವೆರಿಯೆಂಟ್‌ಗಳಲ್ಲಿ ಮಾರುತಿ ಎರ್ಟಿಗಾ ಡೀಸೆಲ್ ಕಾರು ಬಿಡುಗಡೆಯಾಗಿದೆ. VDI, ZDI ಹಾಗೂ ZDI+ ವೇರಿಯೆಂಟ್‌ಗಳಲ್ಲಿ ನೂತನ ಕಾರು ಲಭ್ಯವಿದೆ. 1498 cc, 4 ಸಿಲಿಂಡರ್, ಟರ್ಬೋಚಾರ್ಜಡ್ ಎಂಜಿನ್, 94 bhp ಪವರ್ (@4000 rpm) ಹಾಗೂ 225 Nm ಪೀಕ್ ಟಾರ್ಕ್(@ 1500 - 2500 rpm) ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ.
undefined
ನೂತನ ಎರ್ಟಿಗಾ 1.5 ಲೀಟರ್ ಡೀಸೆಲ್ ಕಾರಿನ ಬೆಲೆ ಇಲ್ಲಿದೆ:
ವೇರಿಯೆಂಟ್ | ಬೆಲೆ(ಎಕ್ಸ್ ಶೋ ರೂಂ) |
ಮಾರುತಿ ಎರ್ಟಿಗಾ VDI | 9.86 ಲಕ್ಷ ರೂ |
ಮಾರುತಿ ಎರ್ಟಿಗಾZDI | 9.86 ಲಕ್ಷ ರೂ |
ಮಾರುತಿ ಎರ್ಟಿಗಾZDI+ | 11.20 ಲಕ್ಷ ರೂ |