ಬಜಾಜ್ ಪ್ಲಾಟಿನ ಬೈಕ್ ಮೇಲೆ 2.87 ಲಕ್ಷ ಕಿ.ಮೀ ರೈಡ್-ದಾಖಲೆ ಬರೆದ ರೈತ!

By Web Desk  |  First Published May 20, 2019, 11:57 AM IST

15ಕ್ಕೂ ಹೆಚ್ಚು ರಾಜ್ಯದಲ್ಲಿ ಪ್ರವಾಸ, ಹಿಮಾಚಲ ಪ್ರದೇಶ ಹಾಗೂ ಜಮ್ಮ ಮತ್ತು ಕಾಶ್ಮೀರ ಕಣಿವೆಯಲ್ಲೂ ಸಂಚಾರ, ಬರೋಬ್ಬರಿ 2.87 ಲಕ್ಷ ಕಿಲೋ ಮೀಟರ್ ರೈಡ್. ಇದು 110 ಸಿಸಿ ಬಜಾಜ್ ಪ್ಲಾಟಿನಂ ಬೈಕ್‌ನಲ್ಲಿ. ಇಷ್ಟೇಲ್ಲಾ ಸಾಧನೆ ಮಾಡಿದ್ದು ರೈತ್ ಅನ್ನೋದು ಮತ್ತೊಂದು ವಿಶೇಷ.


ಸತಾರ(ಮೇ.20): ಲಾಂಗ್ ಬೈಕ್ ರೈಡ್ ಬಯಸುವವರು ಹೆಚ್ಚಿನ ಸಿಸಿ ಎಂಜಿನ್ ಹೊಂದಿರುವ ಬೈಕ್ ಬಳಸುತ್ತಾರೆ. ಇಂತಹ ಬೈಕ್‌ಗಳಿಗೆ ಮಾತ್ರ ಲಾಂಗ್ ರೈಡ್ ಹಾಗೂ ಯಾವುದೇ ಪ್ರದೇಶದಲ್ಲಿ ಸಂಚರಿಸುವ ಸಾಮರ್ಥ್ಯ ಹೊಂದಿರುತ್ತೆ. ಇನ್ನುಳಿದಂತೆ ಕಡಿಮೆ ಸಿಸಿ ಎಂಜಿನ್ ಹೊಂದಿರುವ ಬೈಕ್‌ಗಳು ದಿನ ನಿತ್ಯದ ಬಳಕೆಗೆ ಸೂಕ್ತ. ಹೀಗಾಗಿಯೇ ಹೆಚ್ಚಿನವರು ರಾಯಲ್ ಎನ್‌ಫೀಲ್ಡ್ ಸೇರಿದಂತೆ ಗರಿಷ್ಠ ಸಾಮರ್ಥ್ಯದ ಬೈಕ್ ಬಳಕೆ ಮಾಡುತ್ತಾರೆ. ಆದರೆ ಇಲ್ಲೊಬ್ಬ ರೈತ್, ಬಜಾಜಾ ಪ್ಲಾಟಿನಂ ಬೈಕ್‍‌ನಲ್ಲಿ ಕಾಶ್ಮೀರದಿಂದ, ಕರ್ನಾಟಕ ಸೇರಿದಂತೆ 15ಕ್ಕೂ ಹೆಚ್ಚು  ರಾಜ್ಯಗಳಲ್ಲಿ ಪ್ರವಾಸ ಮಾಡಿ ದಾಖಲೆ ಬರೆದಿದ್ದಾರೆ.

ಇದನ್ನೂ ಓದಿ: ಮಿಂಚಿ ಮರೆಯಾದ ಭಾರತದ 10 ಜಾವಾ-ಯೆಝೆಡಿ ಬೈಕ್!

Latest Videos

ಮಹಾರಾಷ್ಟ್ರದ ಸತಾರ ಜಿಲ್ಲೆಯ ಕೊರೆಗಾಂವ್ ಹಳ್ಳಿಯ ವಿಕಾಸ್ ಜಗನ್ನಾಥ್ ಶಿಂದೆ ಹೊಸ ದಾಖಲೆ ಬರೆದಿದ್ದಾರೆ. ತಮ್ಮ ಬಜಾಜ್ ಪ್ಲಾಟಿನಂ ಬೈಕ್‌ನಲ್ಲಿ ಬರೋಬ್ಬರಿ 2,87,000 ಕಿ.ಮೀ ರೈಡ್ ಮಾಡಿದ್ದಾರೆ. ಬಜಾಜ್ ಪ್ಲಾಟಿನಂ ಬೈಕ್ ಕೇವಲ 110 ಸಿಸಿ ಬೈಕ್. ನಗರ ಪ್ರದೇಶಗಳಲ್ಲಿ ಅಥವಾ ಹಳ್ಳಿಗಳಲ್ಲಿ ದಿನನಿತ್ಯದ ಬಳಕೆಗಾಗಿ  ಈ ಬೈಕ್ ಬಳಸುತ್ತಾರೆ. ಕಾರಣ ಗರಿಷ್ಠ ಮೈಲೇಜ್ ಹೊಂದಿದೆ. ಆದರೆ ಲಾಂಗ್ ರೈಡ್ ಮಾತ್ರ ಕಷ್ಟ ಸಾಧ್ಯ. ಜಗನ್ನಾಥ್  ಈ ಎಲ್ಲಾ ಲೆಕ್ಕಾಚಾರಗಳನ್ನೇ ಬುಡಮೇಲು ಮಾಡಿದ್ದಾರೆ.

ಇದನ್ನೂ ಓದಿ: ಜೂನ್‌ನಲ್ಲಿ ಬಿಡುಗಡೆಯಾಗುತ್ತಿದೆ KTM RC 125 ಬೈಕ್- ಬೆಲೆ ಎಷ್ಟು?

2015ರಲ್ಲಿ ವಿಕಾಸ್ ಜಗನ್ನಾಥ್ ಬಜಾಜ್ ಪ್ಲಾಟಿನಂ ಬೈಕ್ ಖರೀದಿಸಿದ್ದಾರೆ. ಗುಜರಾತ್, ರಾಜಸ್ಥಾನ, ದೆಹಲಿ, ಹರ್ಯಾಣ, ಜಮ್ಮು ಮತ್ತು ಕಾಶ್ಮೀರ, ಹಿಮಾಚಲ್ ಪ್ರದೇಶ, ಉತ್ತರ ಪ್ರದೇಶ, ಮಧ್ಯಪ್ರದೇಶ, ಉತ್ತರಖಂಡ, ಬಿಹಾರ್, ಜಾರ್ಖಂಡ್, ಚತ್ತೀಸ್‌ಘಡ, ಪಶ್ಚಿಮ ಬಂಗಾಳ, ಕರ್ನಾಟಕ ಹಾಗೂ ನಾರ್ಥ್ ಈಸ್ಟ್ ರಾಜ್ಯಗಳಲ್ಲಿ ವಿಕಾಸ್ ಜಗನ್ನಾಥ್  ತಮ್ಮ ಪ್ಲಾಟಿನಂ ಬೈಕ್ ಮೇಲೆ ಸವಾರಿ ಮಾಡಿದ್ದಾರೆ.

ಜಗನ್ನಾಥ್‌ಗೆ ನಿಜಕ್ಕೂ ಸವಾಲು ಎದುರಾಗಿದ್ದು ಹಿಮಾಚಲ ಪ್ರದೇಶದ ಕುಲು ಮನಾಲಿಯಲ್ಲಿ. ಅತ್ಯಂತ ಎತ್ತರ ಪ್ರದೇಶವಾದ ಕರ್ದುಂಗ್ ತೆರಳಲು ಕುಲು ಅಧಿಕಾರಿಗಳು ನಿಕಾಕರಿಸಿದರು. ಕಾರಣ ಇಲ್ಲೀವರೆಗೆ ಕರ್ದುಂಗಾ ಬೆಟ್ಟ ಏರಲು  ಯಾರೂ ಕೂಡ 110 ಸಿಸಿ ಬೈಕ್ ಬಳಸಿಲ್ಲ. ಹೀಗಾಗಿ ಈ ಬೈಕ್ ಮೇಲೆ ಸವಾರಿ ಮಾಡೋದು ಅಪಾಯ ಎಂದಿದ್ದಾರೆ. ಇದಕ್ಕೆ ಉತ್ತರಿಸಿದ ಜಗನ್ನಾಥ್ ಮಹಾರಾಷ್ಟ್ರದಿಂದ ಇದೇ ಬೈಕ್‌ನಲ್ಲಿ ಇಲ್ಲಿಗೆ ಬಂದಿದ್ದೇನೆ, ಇದೀಗ ಅನುಮತಿ ನೀಡಿದರೆ ಹೋಗುತ್ತೇನೆ, ಇತರ ಬೈಕ್ ಬಳಸಿ ಸವಾರಿ ಮಾಡುವುದಿಲ್ಲ ಎಂದಿದ್ದಾರೆ.

ಇದನ್ನೂ ಓದಿ: ಬೈಕನ್ನೇ ದೇವರಂತೆ ಪೂಜಿಸುವ ಬುಲೆಟ್ ಬಾಬಾ ಮಂದಿರ!

ಬಳಿಕ ಅಧಿಕಾರಿಗಳು ಅನುಮತಿ ನೀಡಿದ್ದಾರೆ. ಇಷ್ಟೇ ಅಲ್ಲ ಯಾವುದೇ ಅಪಾಯ ಮೈಮೇಲೆ  ಎಳೆದುಕೊಳ್ಳಬೇಡಿ ಎಂದು ಸೂಚಿಸಿದ್ದಾರೆ. ವಿಕಾಸ್ ಜಗನ್ನಾಥ್ ಅನಮತಿ ಪಡೆದು ಕರ್ದುಂಗಾ ಬೆಟ್ಟವನ್ನು ಏರಿದ್ದಾರೆ. ಈ ಮೂಲಕ ದಾಖಲೆ ಬರೆದಿದ್ದಾರೆ.  ಇಲ್ಲೀವರೆಗೆ ಬಜಾಜ್ ಪ್ಲಾಟಿನಂ ಬೈಕ್ ಯಾವುದೇ ಸಮಸ್ಯೆ ನೀಡಿಲ್ಲ ಎಂದಿದ್ದಾರೆ. ಸರ್ವೀಸ್, ಆಯಿಲ್ ಬದಲಾವಣೆ, ಹಾಗೂ ಹಲವು ಟೈಯರ್ ಬದಲಾಯಿಸಿದ್ದೇನೆ ಎಂದು ಜಗನ್ನಾಥ್ ತಮ್ಮ ಪ್ಲಾಟನಂ ಬೈಕ್ ಮೇಲೆ ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ.

click me!