ರೆನಾಲ್ಟ್ ಕ್ವಿಡ್ ಕಾರು ಜನಪ್ರಿಯವಾದ ಬೆನ್ನಲ್ಲೇ ಇದೀಗ ಬರೋಬ್ಬರಿ 5 ಕಾರುಗಳನ್ನು ಬಿಡುಗಡೆ ಮಾಡಲು ರೆನಾಲ್ಟ್ ಮುಂದಾಗಿದೆ. ಭಾರತದಲ್ಲಿ ಬಿಡುಗಡೆಯಾಗಲಿರುವ ಕಡಿಮೆ ಬೆಲೆಯ ರೆನಾಲ್ಟ್ ಕಾರು ಯಾವುದು? ಇಲ್ಲಿದೆ ಮಾಹಿತಿ.
ನವದೆಹಲಿ(ಏ.19): ರೆನಾಲ್ಟ್ ಕಾರು ಕಂಪನಿಯ ಡಸ್ಟರ್ ಕಾರು ಭಾರತದಲ್ಲಿ SUV ಕಾರುಗಳಲ್ಲಿ ಸಂಚಲನ ಮೂಡಿಸಿತ್ತು. ಡಸ್ಟರ್ ಕಾರಿನ ಬಳಿಕ ರೆನಾಲ್ಟ್ ಕಡಿಮೆ ಸಣ್ಣ ಹಾಗೂ ಬೆಲೆಯ ಕಾರಿನತ್ತ ಮುಖಮಾಡಿ ಜನರ ಮೆಚ್ಚುಗೆಗೆ ಪಾತ್ರವಾಗಿದೆ. ರೆನಾಲ್ಟ್ ಕ್ವಿಡ್ ಕಾರು ಭಾರತದಲ್ಲಿ ಗರಿಷ್ಠ ಮಾರಾಟದ ದಾಖಲೆ ಬರೆದಿದೆ. ಇದೀಗ 5 ಕಾರುಗಳನ್ನು ಬಿಡುಗಡೆ ಮಾಡಲು ರೆನಾಲ್ಟ್ ಮುಂದಾಗಿದೆ. ಭಾರತದಲ್ಲಿ ಬಿಡುಗಡೆಯಾಗಲಿರುವ ರೆನಾಲ್ಟ್ ಕಾರುಗಳ ವಿವರ ಇಲ್ಲಿದೆ.
ಕ್ವಿಡ್ ಫೇಸ್‌ಲಿಫ್ಟ್:
ಸಣ್ಣ ಕಾರು ವಿಭಾಗದಲ್ಲಿ ರೆನಾಲ್ಟ್ ಕ್ವಿಡ್‌ಗೆ ಭಾರಿ ಬೇಡಿಕೆ ಇದೆ. ಇದೀಗ ರೆನಾಲ್ಟ್ ಕ್ವಿಡ್ ಫೇಸ್‌ಲಿಫ್ಟ್ ಕಾರು ಬಿಡುಗಡೆಯಾಗುತ್ತಿದೆ. ಹೆಚ್ಚುವರಿ ಫೀಚರ್ಸ್, ಕೆಲ ಬದಲಾವಣೆಯೊಂದಿಗೆ ಈ ಕಾರು ಬಿಡುಗಡೆಯಾಗುತ್ತಿದೆ. 2019ರಲ್ಲೇ ಈ ಕಾರು ಭಾರತದ ರಸ್ತೆಗಿಳಿಯಲಿದೆ.
undefined
ಕ್ವಿಡ್ ಎಲೆಕ್ಟ್ರಿಕ್:
ರೆನಾಲ್ಟ್ ಕಾರು ಭಾರತದಲ್ಲಿ ಎಲೆಕ್ಟ್ರಿಕ್ ಕಾರು ಬಿಡುಗಡೆ ಮಾಡಲು ಭರ್ಜರಿ ತಯಾರಿ ನಡೆಸುತ್ತಿದೆ. ರೆನಾಲ್ಟ್ ಕ್ವಿಡ್ ಎಲೆಕ್ಟ್ರಿಕ್ ಕಾರು ಒಂದು ಬಾರಿ ಚಾರ್ಜ್‌ಗೆ 250 ಕಿ.ಮೀ ಪ್ರಯಾಣ ಮಾಡಬಹುದು. ಇತ್ತೀಚೆಗಿನ ಶಾಂಘೈ ಮೋಟಾರ್ಸ್ ಶೋನಲ್ಲಿ ಈ ಕಾರನ್ನು ಅನಾವರಣ ಮಾಡಲಾಗಿತ್ತು. 2021ರಲ್ಲಿ ಈ ಕಾರು ಭಾರತದಲ್ಲಿ ಬಿಡುಗಡೆಯಾಗಲಿದೆ.
ಟ್ರೈಬರ್:
ರೆನಾಲ್ಟ್ ಕ್ವಿಡ್ ರೀತಿಯಲ್ಲೇ ಕಡಿಮೆ ಬೆಲೆಗೆ MPV ಕಾರು ಬಿಡುಗಡೆ ಮಾಡಲು ರೆನಾಲ್ಟ್ ಮುಂದಾಗಿದೆ. ಟೊಯೊಟಾ ಇನೋವಾ, ಮಾರುತಿ ಎರ್ಟಿಗಾ ಸೇರಿದಂತೆ MPV ಕಾರುಗಳಿಗೆ ಪೈಪೋಟಿ ನೀಡಲು ರೆನಾಲ್ಟ್ ಸಜ್ಜಾಗಿದೆ. ವಿಶೇಷ ಅಂದರೆ ಇದು ಅತ್ಯಂತ ಕಡಿಮೆ ಬೆಲೆಯ MPV ಕಾರು ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಲಿದೆ ಎಂದು ಕಂಪನಿ ಹೇಳಿದೆ. ಈ ವರ್ಷದ ಅಂತ್ಯದಲ್ಲಿ ಈ ಕಾರು ಬಿಡುಗಡೆಯಾಗಲಿದೆ.
ರೆನಾಲ್ಟ್ HBC:
ಭಾರತದಲ್ಲಿ SUV ಕಾರುಗಳಿಗೆ ಭಾರಿ ಬೇಡಿಕೆ ಇದೆ. ಇದೀಗ ಮಾರುತಿ ಬ್ರೆಜಾ, ಫೋರ್ಡ್ ಇಕೋಸ್ಪೋರ್ಟ್, ಟಾಟಾ ನೆಕ್ಸಾನ್ ಸೇರಿದಂತೆ ಹಲವು ಕಾರಗಳು ಮಾರುಕಟ್ಟೆಯಲ್ಲಿದೆ. ಇದಕ್ಕೆ ಪ್ರತಿಸ್ಪರ್ಧಿಯಾಗಿ ರೆನಾಲ್ಟ್ ಕಡಿಮೆ ಬೆಲೆಯಲ್ಲಿ HBC ಕಾರು ಬಿಡುಗಡೆ ಮಾಡುತ್ತಿದೆ. 2020ರಲ್ಲಿ ಈ ಕಾರು ಬಿಡುಗಡೆಯಾಗಲಿದೆ.