ರಸ್ತೆ ಸುರಕ್ಷೆತೆ ಕುರಿತು ಸುಜುಕಿ ಮೋಟಾರ್ ಇಂಡಿಯಾ ಹಲವು ಅಭಿಯಾನ ಮಾಡಿದೆ. ಇದೀಗ ಸೂರತ್ ಟ್ರಾಫಿಕ್ ಪೊಲೀಸರಿಗೆ 5 ಸುಜುಕಿ ಜಿಕ್ಸರ್ ಬೈಕ್ ನೀಡೋ ಮೂಲಕ ಮತ್ತೊಂದು ಹೆಜ್ಜೆ ಇಟ್ಟಿದೆ. ಈ ಕುರಿತ ಹೆಚ್ಚಿನ ವಿವರ ಇಲ್ಲಿದೆ.
ಸೂರತ್(ಜ.10): ಪೊಲೀಸ್ ವ್ಯವಸ್ಥೆ ಬಲಪಡಿಸಲು ಆಯಾ ರಾಜ್ಯಗಳು ಹೆಚ್ಚಿನ ಶ್ರಮ ವಹಿಸುತ್ತಿದೆ. ಪೊಲೀಸರಿಗೆ ಹೊಸ ಹಾಗೂ ಆಧುನಿಕ ವಾಹನಗಳನ್ನು ನೀಡುತ್ತಿದೆ. ಇದೀಗ ಸುಜುಕಿ ಇಂಡಿಯಾ ಸೂರತ್ ಪೊಲೀಸರಿಗೆ ಜಿಕ್ಸರ್ ಬೈಕ್ ನೀಡೋ ಮೂಲಕ ಪೊಲೀಸರಿಗೆ ನೆರವಾಗಿದೆ.
ಇದನ್ನೂ ಓದಿ: 10 ಸಾವಿರ ರೂಗೆ ಬುಕ್ ಮಾಡಿ ಜಾವಾ ಪೆರಾಕ್ ಬೈಕ್!
undefined
ಸೂರತ್ ಪೊಲೀಸ್ ಕಮೀಷನ್ ಆರ್ ಬಿ ಬ್ರಹ್ಮಭಟ್ ಅವರಿಗೆ 5 ಸುಜುಕಿ ಜಿಕ್ಸರ್ SF 250 ಮಾಡಿಫಿಕೇಶ್ ಬೈಕ್ ಕೀ ಹಸ್ತಾಂತರಿಸಲಾಗಿದೆ. ಗುರುಗಾಂವ್ ಪೊಲೀಸರ ಬಳಿಕ ಇದೀಗ ಸೂರತ್ ಪೂಲೀಸರು ಕೂಡ ಸುಜುಕಿ ಜಿಕ್ಸರ್ SF 250 ಬೈಕ್ ಬಳಕೆ ಮಾಡಿದ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
is proud to add 5 motorcycles to the Surat traffic police fleet to assist them in traffic operations. SMIPL Representative handed over the keys to Mr. R B Brahmbhatt, Commissioner of Police, Surat as part of our initiative of . pic.twitter.com/vWJJhfGnw5
— Suzuki Motorcycle India (@suzuki2wheelers)ಇದನ್ನೂ ಓದಿ: ಹೊಸ ವರ್ಷಕ್ಕೆ 60 ವರ್ಷ ಹಳೇ ರಾಯಲ್ ಎನ್ಫೀಲ್ಡ್ ಶೆರ್ಪಾ ಬೈಕ್ ಮತ್ತೆ ಬಿಡುಗಡೆ!
ಸೂರತ್ ಪೊಲೀಸರಿಗೆ ನೀಡಲಾಗಿರುವ ಸುಜುಕಿ ಜಿಕ್ಸರ್ SF 250 ಬೈಕ್ 49cc, ಸಿಂಗಲ್ ಕಾಲ್ ಆಯಿಲ್ ಕೂಲಿಂಗ್ ಸಿಸ್ಟಮ್, 4 ಸ್ಟ್ರೋಕ್, ಫ್ಯುಯೆಲ್ ಇಂಜೆಕ್ಷನ್ ಎಂಜಿನ್ ಹೊಂದಿದೆ. 26.5ps ಪವರ್ ಹಾಗೂ 22.6Nm ಪೀಕ್ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ.
6 ಸ್ಪೀಡ್ ಗೇರ್ ಬಾಕ್ಸ್ ಹಾಗೂ ಡ್ಯುಯೆಲ್ ಚಾನೆಲ್ ABS ಹೊಂದಿದೆ. ಪೊಲೀಸರಿಗೆ ನೀಡಲಾಗಿರುವ ಬೈಕ್ನಲ್ಲಿ ಕೆಲ ಫೀಚರ್ಸ್ ಸೇರಿಸಲಾಗಿದೆ. ವಾಕಿ ಟಾಕ್, ಪೊಲೀಸ್ ಸೈರನ್, ಲೈಟ್ ಸೇರಿದಂತೆ ಹಲವು ಹೆಚ್ಚುವರಿ ಫೀಚರ್ಸ್ ಸೇರಿಸಲಾಗಿದೆ.