ಭಾರತದಲ್ಲಿ ಈಗಾಗಲೇ ಹಲವು ಕೆಲ ಎಲೆಕ್ಟ್ರಿಕ್ ಕಾರುಗಳು ಬಿಡುಗಡೆಯಾಗಿವೆ. ಹ್ಯುಂಡೋ ಕೋನಾ, ಟಾಟಾ ಟಿಗೋರ್, ಮಹೀಂದ್ರ ಇ ವೇರಿಟೋ ಸೇರಿದಂತೆ ಕೆಲ ಕಾರುಗಳು ಸಂಚಲನ ಮೂಡಿಸಿದೆ. ಇದೀಗ ಹೊಸ ಕಾರೊಂದು ಭಾರತಕ್ಕೆ ಬರುತ್ತಿದೆ. ನೂತನ ಎಲೆಕ್ಟ್ರಿಕ್ ಕಾರು ವಿಶ್ವದ ಅತೀ ಕಡಿಮೆ ಬೆಲೆಯ ಎಲೆಕ್ಟ್ರಿಕ್ ಕಾರು ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿದೆ. ನೂತನ ಕಾರಿನ ವಿವರ ಇಲ್ಲಿದೆ.
ನವದೆಹಲಿ(ಜ.09): ಹ್ಯುಂಡೋ ಕೋನಾ 25 ಲಕ್ಷ ರೂಪಾಯಿ, ಟಾಟಾ ಟಿಗೋರ್ 12 ಲಕ್ಷ ರೂಪಾಯಿ, ಮಹೀಂದ್ರ ಇ ವೆರಿಟೋ 15 ಲಕ್ಷ ರೂಪಾಯಿ.. ಇದು ಭಾರತದಲ್ಲಿ ಬಿಡುಗಡೆಯಾಗಿರುವ ಕೆಲ ಎಲೆಕ್ಟ್ರಿಕ್ ಕಾರುಗಳ ಬೆಲೆ. ಬಹುತೇಕ ಎಲ್ಲಾ ಎಲೆಕ್ಟ್ರಿಕ್ ಕಾರುಗಳ ಬೆಲೆ 10 ಲಕ್ಷ ರೂಪಾಯಿಗಿಂತ ಮೇಲ್ಪಟ್ಟಿದೆ. ಇದೀಗ ಭಾರತಕ್ಕೆ ಹೊಚ್ಚ ಹೊಸ ಎಲೆಕ್ಟ್ರಿಕ್ ಕಾರು ಬರುತ್ತಿದೆ. ಇದರ ಬೆಲೆ ಕೇವಲ 6 ಲಕ್ಷ ರೂಪಾಯಿ.
ಇದನ್ನೂ ಓದಿ: ರೆನಾಲ್ಟ್ Zoe ಎಲೆಕ್ಟ್ರಿಕ್ ಕಾರು ಬಿಡುಗಡೆ ರೆಡಿ!
undefined
ಚೀನಾದ ಗ್ರೇಟ್ ವಾಲ್ ಮೋಟಾರ್ಸ್ ಈಗಾಗಲೇ ಭಾರತದಲ್ಲಿ ಕಾರು ಬಿಡುಗಡೆ ಮಾಡುವುದನ್ನು ಖಚಿತಪಡಿಸಿದೆ. ಇದೀಗ ಅತೀ ಕಡಿಮೆ ಬೆಲೆಯಲ್ಲಿ ಎಲೆಕ್ಟ್ರಿಕ್ ಕಾರು ನೀಡುವುದಾಗಿ ಹೇಳಿದೆ. ಒರಾ R1 ಎಲೆಕ್ಟ್ರಿಕ್ ಕಾರು ಭಾರತಕ್ಕೆ ಕಾಲಿಡುತ್ತಿದೆ. ನೂತನ ಕಾರು ಒಂದು ಬಾರಿ ಚಾರ್ಜ್ ಮಾಡಿದರೆ 351 ಕಿ.ಮೀ ಮೈಲೇಜ್ ನೀಡಲಿದೆ.
ಇದನ್ನೂ ಓದಿ: ಕಡಿಮೆ ಬೆಲೆ; ಟಾಟಾ ಅಲ್ಟ್ರೋಝ್ ಎಲೆಕ್ಟ್ರಿಕ್ ಕಾರು ಲಾಂಚ್ ಡೇಟ್ ಬಹಿರಂಗ!.
ಇದರ ಬೆಲೆ 6 ಲಕ್ಷ ರೂಪಾಯಿಂದ ಪ್ರಾರಂಭವಾಗಲಿದ್ದು, ಗರಿಷ್ಠ 9 ಲಕ್ಷ ರೂಪಾಯಿ. ಗ್ರೇಟರ್ ನೋಯ್ಡಾದಲ್ಲಿ ನಡೆಯಲಿರುವ ಅಟೋ ಎಕ್ಸ್ಪೋ 2020ರಲ್ಲಿ ಒರಾ R1 ಎಲೆಕ್ಟ್ರಿಕ್ ಕಾರು ಪರಿಚಯಿಸಲು ಗ್ರೇಟ್ ವಾಲ್ ಮೋಟಾರ್ಸ್ ಮುಂದಾಗಿದೆ.
ಟಾಟಾ ಮೋಟಾರ್ಸ್ ನೆಕ್ಸಾನ್ ಎಲೆಕ್ಟ್ರಿಕ್ ಕಾರು ಬಿಡುಗಡೆ ಮಾಡಲು ರೆಡಿಯಾಗಿದೆ. ಇದರ ಬೆಲೆ 15 ಲಕ್ಷ ರೂಪಾಯಿ ಎಂದು ಅಂದಾಜಿಸಲಾಗಿದೆ. ಇನ್ನು ಮಹೀಂದ್ರ KUV100 ಕಾರು ಕೂಡ ಎಲೆಕ್ಟ್ರಿಕ್ ಅವತಾರದಲ್ಲಿ ಬಿಡುಗಡೆಯಾಗಲಿದೆ. ಇದರ ಬೆಲೆ ಸರಿಸುಮಾರು 13 ಲಕ್ಷ ರೂಪಾಯಿ ಎಂದು ಅಂದಾಜಿಸಲಾಗಿದೆ.