ರೆನಾಲ್ಟ್ ಕ್ವಿಡ್ ಬೆಲೆ ಹೆಚ್ಚಳ- ಏಪ್ರಿಲ್‌ನಿಂದ ಹೊಸ ಬೆಲೆ ಅನ್ವಯ!

By Web DeskFirst Published Mar 25, 2019, 4:44 PM IST
Highlights

ರೆನಾಲ್ಟ್ ಕ್ವಿಡ್ ಕಾರಿನ ಬೆಲೆ ಹೆಚ್ಚಳವಾಗಿದೆ.  ಏಪ್ರಿಲ್ 1 ರಿಂದ ನೂತನ ಬೆಲೆ ಜಾರಿಯಾಗಲಿದೆ. ಹಾಗಾದರೆ ಕ್ವಿಡ್ ಕಾರಿನ ಬೆಲೆ ಎಷ್ಟು ಹೆಚ್ಚಾಗಲಿದೆ. ಇಲ್ಲಿದೆ ವಿವರ.
 

ನವದೆಹಲಿ(ಮಾ.25): ಏಪ್ರಿಲ್ 1 ರಿಂದ ಬಹುತೇಕ ಕಾರು ಕಂಪನಿಗಳು ಕಾರುಗಳ ಬೆಲೆ ಹೆಚ್ಚಿಸುತ್ತಿದೆ. ಇದೀಗ ರೆನಾಲ್ಟ್ ಕೂಡ ಕಾರುಗಳ ಬೆಲೆಯನ್ನು ಹೆಚ್ಚಳ ಮಾಡುತ್ತಿದೆ. ರೆನಾಲ್ಟ್ ಸದ್ಯ ಕ್ವಿಡ್ ಕಾರಿನ ಬೆಲೆ ಹೆಚ್ಚಿಸುತ್ತಿದೆ. ಏಪ್ರಿಲ್ 1 ,2019ರಿಂದ ರೆನಾಲ್ಟ್ ಕ್ವಿಡ್ ಕಾರಿನ ಬೆಲೆ ಶೇಕಡಾ 3 ರಷ್ಟು ಹೆಚ್ಚಾಗಲಿದೆ.

ಇದನ್ನೂ ಓದಿ: ಸಣ್ಣ ಕಾರಿಗೆ ಪ್ರತಿಸ್ಪರ್ಧಿ- ಬಜಾಜ್ ಕ್ಯೂಟ್ ಕಾರಿನ ಬೆಲೆ ಬಹಿರಂಗ!

ರೆನಾಲ್ಟ್ ಕ್ವಿಡ್ ಕಾರಿನಲ್ಲಿ 0.8 ಲೀಟರ್ ಹಾಗೂ 1.0 ಲೀಟರ್ 2 ವೇರಿಯೆಂಟ್ ಕಾರುಗಳು ಲಭ್ಯವಿದೆ. ಕ್ವಿಡ್ ಕಾರಿನ ಬೆಲೆ 2.66 ಲಕ್ಷ ರೂಪಾಯಿಂದ 4.63 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ). ಇದೀಗ ಈ ಬೆಲೆ ಹೆಚ್ಚಳವಾಗಲಿದೆ. ಶೀಘ್ರದಲ್ಲೇ ನೂತನ ಬೆಲೆಯನ್ನು ಕ್ವಿಡ್ ಬಹಿರಂಗ ಪಡಿಸಲಿದೆ.

ಇದನ್ನೂ ಓದಿ: ನೀರವ್ ಮೋದಿಗೆ ಮತ್ತೊಂದು ಶಾಕ್- 11 ಕಾರು ಹರಾಜಿಗೆ!

ಸುರಕ್ಷತೆಗೂ ಆದ್ಯತೆ ನೀಡಿರುವ ರೆನಾಲ್ಟ್ ಕ್ವಿಡ್ ABS(ಆ್ಯಂಟಿ ಲಾಕ್ ಬ್ರೇಕಿಂಗ್ ಸಿಸ್ಟಮ್) ಹಾಗೂ EBD(ಎಲೆಕ್ಟ್ರಾನಿಕ್ ಬ್ರೇಕ್‌ಫೋರ್ಸ್ ಡಿಸ್ಟ್ರಿಬ್ಯೂಶನ್), ಡ್ರೈವರ್ ಏರ್‌ಬ್ಯಾಗ್, ಕೋ ಡ್ರೈವರ್ ಏರ್‌ಬ್ಯಾಗ್, ಸೀಟ್ ಬೆಲ್ಟ್ ರಿಮೈಂಡರ್, ಸ್ವೀಡ್ ಅಲರ್ಟ್ ಸೇರಿದಂತೆ ಹಲವು ಸುರಕ್ಷತಾ ಸೌಲಭ್ಯಗಳು ಬೇಸ್ ಮಾಡೆಲ್‌ನಿಂದ ಹಿಡಿದು ಟಾಪ್ ಮಾಡೆಲ್ ವರೆಗೂ ಕಡ್ಡಾಯ ಮಾಡಲಾಗಿದೆ.

click me!