ಭಾರತದ ಮೊಬೈಲ್ ಮಾರುಕಟ್ಟೆಯನ್ನು ಚೀನಾದ ಕಂಪನಿಗಳು ಆಕ್ರಮಿಸಿಕೊಂಡಿದೆ. ಇದರಲ್ಲಿ ಶಿಓಮಿ ಮೊಬೈಲ್‌ಗೆ ಅಗ್ರಸ್ಥಾನ . ಕಡಿಮೆ ಬೆಲೆ, ಗರಿಷ್ಛ ಫೀಚರ್ಸ್, ಹೆಚ್ಚು ಆಕರ್ಷಕ ಮೊಬೈಲ್ ನೀಡಿದ ಹೆಗ್ಗಳಿಕೆಗೆ ಶಿಓಮಿಗಿದೆ. ಹೀಗಾಗಿ ಬಹುತೇಕರು ಶಿಓಮಿ ಫೋನ್ ಗ್ರಾಹಕರಾಗಿದ್ದಾರೆ. ಇದೀಗ ಶಿಓಮಿ ಮೊಬೈಲ್ ಕಂಪನಿ ಎಲೆಕ್ಟ್ರಿಕ್ ಸ್ಕೂಟರ್ ಅನಾವರಣ ಮಾಡಿದೆ. ಅದೂ ಅತ್ಯಂತ ಕಡಿಮೆ ಬೆಲೆಗೆ.
ಬೀಜಿಂಗ್(ಏ.01); ವಿಶ್ವದ ಅತೀ ದೊಡ್ಡ ಮೊಬೈಲ್ ಉತ್ಪಾದಕ ಕಂಪನಿ ಶಿಓಮಿ ಇದೀಗ ವಾಹನ ನಿರ್ಮಾಣ ಕ್ಷೇತ್ರಕ್ಕೆ ಎಂಟ್ರಿಕೊಟ್ಟಿದೆ. ಶಿಓಮಿ ಫೋನ್‌ಗಳು ಕಡಿಮೆ ಬೆಲೆ, ಗರಿಷ್ಠ ಫೀಚರ್ಸ್ ಹೆಗ್ಗಳಿಕೆ ಪಾತ್ರವಾಗಿದೆ. ಇದೀಗ ಶಿಓಮಿ ಅನಾವರಣ ಮಾಡಿರುವ ಎಲೆಕ್ಟ್ರಿಕ್ ಸ್ಕೂಟರ್ ಕೂಡ ವಿಶ್ವದ ಅತ್ಯಂತ ಕಡಿಮೆ ಬೆಲೆಯ ಬೈಕ್ ಅನ್ನೋ ಹೆಗ್ಗಳಿಗೆ ಪಾತ್ರವಾಗಿದೆ.
ಲಾಕ್‌ಡೌನ್ ನಡುವೆ ನೂತನ ಹ್ಯುಂಡೈ ವರ್ನಾ ಫೇಸ್‌ಲಿಫ್ಟ್ ಕಾರು ಬಿಡುಗಡೆ!.
undefined
ಶಿಓಮಿ ಎಲೆಕ್ಟ್ರಿಕ್ ಮೊಪೆಡ್ ಸ್ಕೂಟರ್ ಬೆಲೆ 32,000 ರೂಪಾಯಿಂದ ಆರಂಭಗೊಳ್ಳುತ್ತಿದೆ. ಎರುಡು ವೇರಿಯೆಂಟ್ ಎಲೆಕ್ಟ್ರಿಕ್ ಮೊಪೆಡ್ ಸ್ಕೂಟರ್ ಇದೀಗ ಮಾರುಕಟ್ಟೆ ಪ್ರವೇಶಿಸಲು ಸಜ್ಜಾಗಿದೆ.. A1 ಹಾಗೂ A1 ಪ್ರೊ ಎಂಬ ಎರಡು ವೇರಿಯೆಂಟ್ ಲಭ್ಯವಿದೆ. ಇದರಲ್ಲಿ A1 ಪ್ರೊ ಹೆಚ್ಚಿನ ಮೈಲೇಜ್ ರೆೇಂಜ್ ಹೊಂದಿದೆ. ವಿಶೇಷ ಅಂದರೆ ಈ ಮೊಪೆಡ್ ಸ್ಕೂಟರ್‌ನಲ್ಲಿ 6.86 ಇಂಚಿನ ಟಚ್ ಸ್ಕ್ರೀನ್ ಕೂಡ ಇದೆ. ಈ ಮೂಲಕ ನಾವಿಗೇಶನ್, 4ಜಿ ಕನೆಕ್ಷನ್ ಜೊತೆಗೆ ಬ್ಲೂಟೂಥ್ ಸೌಲಭ್ಯ ಕೂಡ ಇದೆ.
ಬಿಡುಗಡೆಗೆ ಸಜ್ಜಾಗಿದೆ ರಾಯಲ್ ಎನ್‌ಫೀಲ್ಡ್ ಮೆಟೊರ್ 350 ಬೈಕ್!.
123 ಡಿಗ್ರಿ HD ಕ್ಯಾಮರ ಕೂಡ ಈ ಸ್ಕೂಟರ್‌ಲ್ಲಿದೆ. ಈ ಮೂಲಕ ಸತತ 90 ನಿಮಿಷಗಳ ಕಾಲ ರೈಡ್‌ಗಳನ್ನು ರೆಕಾರ್ಡ್ ಮಾಡಿ ಬ್ಲೂಟೂಥ್ ಅಥವಾ ಡೇಟಾ ಕನೆಕ್ಷನ್ ಮೂಲಕ ತಮ್ಮ ಮೊಬೈಲ್‌ಗೆ ವರ್ಗಾಯಿಸಬಹುದು. A1 ಮೊಬೆಲ್ ಸ್ಕೂಟರ್ ಸಂಪೂರ್ಣ ಚಾರ್ಜ್‌ಗೆ 60 ಕಿ.ಮೀ ಮೈಲೇಜ್ ನೀಡಲಿದೆ. ಇನ್ನು A1 ಪ್ರೊ ಮೊಪೆಡ್ ಸ್ಕೂಟರ್ ಸಂಪೂರ್ಣ ಚಾರ್ಜ್ 75 ಕಿ.ಮೀ ಮೈಲೇಜ್ ನೀಡಲಿದೆ. ಗರಿಷ್ಠ ವೇಗ 25 kmph.
ಮನೆಯಲ್ಲಿರುವ ಸಾಕೆಟ್ ಮೂಲಕ ಮೊಪೆಡ್ ಸ್ಕೂಟರ್ ಬ್ಯಾಟರಿ ಚಾರ್ಜ್ ಮಾಡಬಹುದು. ಸಾಮಾನ್ಯ ಸಾಕೆಟ್ ಮೂಲಕ ಚಾರ್ಜಿಂಗ್ ಮಾಡಿದರೆ 7.5 ಗಂಟೆಯಲ್ಲಿ ಬ್ಯಾಟರಿ ಸಂಪೂರ್ಣ ಚಾರ್ಜ್ ಆಗಲಿದೆ. ಲಿಥಿಯಮ ಹಾಗೂ ಐಯನ್ ಬ್ಯಾಟರಿ ಹೊಂದಿರುವ ಶಿಓಮಿ ಸ್ಕೂಟರ್ ಇದೀಗ ಚೀನಾ ಮಾರುಕಟ್ಟೆ ಪ್ರವೇಶಸಿದೆ. ಚೀನಾದಲ್ಲಿ ಕೊರೋನಾ ವೈರಸ್ ತೀವ್ರತೆ ಕಡಿಮೆಯಾಗುತ್ತಿದ್ದಂತೆ ಶಿಓಮಿ ಸ್ಕೂಟರ್ ಅನಾವರಣ ಮಾಡಿದೆ.