ಬಿಡುಗಡೆಗೆ ಸಜ್ಜಾಗಿದೆ ರಾಯಲ್ ಎನ್‌ಫೀಲ್ಡ್ ಮೆಟೊರ್ 350 ಬೈಕ್!

Suvarna News   | Asianet News
Published : Mar 29, 2020, 04:37 PM ISTUpdated : Mar 29, 2020, 05:03 PM IST
ಬಿಡುಗಡೆಗೆ ಸಜ್ಜಾಗಿದೆ ರಾಯಲ್ ಎನ್‌ಫೀಲ್ಡ್ ಮೆಟೊರ್ 350 ಬೈಕ್!

ಸಾರಾಂಶ

ರಾಯಲ್ ಎನ್‌ಫೀಲ್ಡ್ ನೂತನ ಮೆಟೊರ್ 350 ಬಿಡುಗಡೆ ಮಾಡಲು ಸಜ್ಜಾಗಿದೆ. ಸದ್ಯ ಕೊರೋನಾ ವೈರಸ್ ಆರ್ಭಟ ತಣ್ಣಗಾದಂತೆ ನೂತನ ಬೈಕ್ ಮಾರುಕಟ್ಟೆ ಪ್ರವೇಶಿಸಲಿದೆ. ಈ ಬೈಕ್ ಬಿಡುಗಡೆಯಾಗುತ್ತಿದ್ದಂತೆ ರಾಯಲ್‌ ಎನ್‌ಫೀಲ್ಡ್ ಪ್ರತಿಷ್ಠಿತ ಬೈಕ್‌ ಉತ್ಪಾದನೆ ನಿಲ್ಲಿಸಲಿದೆ.   

ಚೆನ್ನೈ(ಮಾ.29): ರಾಯಲ್ ಎನ್‌ಫೀಲ್ಡ್ 2020ರ ಆರಂಭದಲ್ಲಿ ರೆಟ್ರೋ ಸ್ಟೈಲ್ ಬೈಕ್ ಬಿಡುಗಡೆ ಮಾಡುವುದಾಗಿ ಹೇಳಿತ್ತು. ಇದೇ ಪ್ರಕಾರ ಕಂಪನಿ ನೂತನ ರಾಯಲ್ ‌ಎನ್‌ಫೀಲ್ಡ್ ಮೆಟೊರ್ 350 ಬೈಕ್ ರೆಡಿ ಮಾಡಿದೆ. ಆದರೆ ಕೊರೋನಾ ವೈರಸ್‌ನಿಂದಾಗಿ ಮುಂದಿನ ತಿಂಗಳು ಬಿಡುಗಡೆಯಾಗಬೇಕಿದ್ದ ಬೈಕ್ ಇದೀಗ ತಡವಾಗಿ ಲಾಂಚ್ ಆಗಲಿದೆ. ಆದರೆ ಬೈಕ್ ಎಲ್ಲಾ ಪರೀಕ್ಷೆಗಳಲ್ಲಿ ಯಶಸ್ವಿಯಾಗಿದ್ದು, ಬಿಡುಗಡೆಗೆ ಕಾಯುತ್ತಿದೆ.

TVS XL100 BS6 ಎಂಜಿನ್ ಮೊಪೆಡ್ ಬಿಡುಗಡೆ; ಭಾರತದ ಕಡಿಮೆ ಬೆಲೆ ದ್ವಿಚಕ್ರವಾಹನ!.

ರಾಯಲ್ ‌ಎನ್‌ಫೀಲ್ಡ್  ಥಂಡರ್‌ಬರ್ಡ್ ಬೈಕ್‌ಗೆ ಬದಲಾಗಿ ರಾಯಲ್ ‌ಎನ್‌ಫೀಲ್ಡ್ ಮೆಟೊರ್ 350 ಬೈಕ್ ಬಿಡುಗಡೆಯಾಗುತ್ತಿದೆ. ಮೆಟೊರ್ 350 ಬೈಕ್ ಬಿಡುಗಡೆಯಾಗುತ್ತಿದ್ದಂತೆ ಥಂಡರ್‌ಬರ್ಡ್ ಬೈಕ್ ಉತ್ಪಾದನೆ ಸ್ಥಗಿತಗೊಳ್ಳಲಿದೆ. ನೂತನ ಮೆಟೊರ್ 350 ಬೈಕ್ ಟಿವಿ ಜಾಹೀರಾತು ಶೂಟಿಂಗ್ ಕೂಡ ಮುಗಿಸಿದೆ. ಈ ವೇಳೆ ಹಳದಿ ಕಲರ್ ಬೈಕ್ ಎಲ್ಲರ ಗಮನಸೆಳೆದಿದೆ. 

BS6 ಎಂಜಿನ್ ಹೊಂದಿರುವ ಮೆಟೊರ್ ಬೈಕ್ 346 cc ಏರ್ ಕೂಲ್ಡ್, ಸಿಂಗಲ್ ಸಿಲಿಂಡರ್ ಎಂಜಿನ್ ಹೊಂದಿದೆ. 19.8 bhp ಪವರ್ ಹಾಗೂ 28 nm ಪೀಕ್ ಟಾರ್ಕ್ ಉತ್ಪಾದಿಸ ಬಲ್ಲ ಸಾಮರ್ಥ್ಯ ಹೊಂದಿದೆ. 5 ಸ್ಪೀಡ್ ಮಾನ್ಯುಯೆಲ್ ಟ್ರಾನ್ಸ್‌ಮಿಶನ್ ಹೊಂದಿದೆ.

ಥಂಡರ್‌ಬರ್ಡ್ ಶೈಲಿಯನ್ನೇ ಹೋಲುವು ನೂತನ ಮೆಟೊರ್ 350 ಬೈಕ್ ಆಕರ್ಷಕ ಬಣ್ಣಗಳಲ್ಲೂ ಲಭ್ಯವಿದೆ. ನೂತನ ಬೈಕ್ ಬೆಲೆ ಕುರಿತು ಮಾಹಿತಿ ಬಹಿರಂಗವಾಗಿಲ್ಲ. 
 

PREV
click me!

Recommended Stories

ಚಾಲನೆಯಲ್ಲಿದ್ದಾಗಲೇ ಪ್ರಜ್ಞೆ ಕಳೆದುಕೊಂಡ ಚಾಲಕ: ವಿಮಾನ ಟೇಕಾಫ್‌ದಂತೆ ಮೇಲೇರಿದ ಮರ್ಸಿಡಿಸ್: ವೀಡಿಯೋ
ಕಾಂತಾರ ನಟನಿಗೆ ದೈವದ ಅಭಯ, 1.5 ಕೋಟಿ ರೂ ವೆಲ್‌ಫೈರ್ ಕಾರಿನಲ್ಲಿ ಕಾಣಿಸಿಕೊಂಡ ರಿಷಬ್ ಶೆಟ್ಟಿ