ಒಂದೇ ತಿಂಗಳಲ್ಲಿ ರಾಯಲ್ ಎನ್‌ಫೀಲ್ಡ್‌ಗೆ ಜಾವಾ ನೀಡಿತು 13 ಹೊಡೆತ!

By Web Desk  |  First Published Jan 1, 2019, 8:21 PM IST

ಜಾವಾ ಮೋಟರ್ ಬೈಕ್ ಮತ್ತೆ ಭಾರತದಲ್ಲಿ ಬಿಡುಗಡೆಯಾಗುತ್ತಿದ್ದಂತೆ, ರಾಯಲ್ ಎನ್‌ಫೀಲ್ಡ್ ಬೈಕ್‌ಗೆ ಪೈಪೋಟಿ ಆರಂಭಗೊಂಡಿತು. ಕಳೆದ ನವೆಂಬರ್‌ನಲ್ಲಿ ಜಾವಾ ಬಿಡುಗಡೆಯಾಗಿದೆ. ಒಂದೇ ತಿಂಗಳಲ್ಲಿ ರಾಯಲ್ ಎನ್‌ಫೀಲ್ಡ್‌ಗೆ 13 ಹೊಡೆತ ನೀಡಿದೆ.
 


ನವದೆಹಲಿ(ಜ.01): ಭಾರತ ಬೈಕ್ ಮಾರುಕಟ್ಟೆ ಅಗ್ರಜ ರಾಯಲ್ ಎನ್‌ಫೀಲ್ಡ್ ಬೈಕ್ ಯುವಕರ ನೆಚ್ಚಿನ ಬೈಕ್ ಅನ್ನೋದರಲ್ಲಿ ಯಾವುದೇ ಅನುಮಾನವಿಲ್ಲ. ಆದರೆ ಜಾವಾ ಮೋಟಾರ್ ಬೈಕ್ ಬಿಡುಗಡೆಯಾದ ಬಳಿಕ ರಾಯಲ್ ಎನ್‌ಫೀಲ್ಡ್‌ಗೆ ತೀವ್ರ ಪೈಪೋಟಿ ಎದುರಾಗಿದೆ. 

ಇದನ್ನೂ ಓದಿ: 2019ರಲ್ಲಿ ಮರೆಯಾಗಲಿರುವ ಭಾರತದ 6 ಕಾರುಗಳು!

Tap to resize

Latest Videos

undefined

ಡಿಸೆಂಬರ್, 2018ರ ರಾಯಲ್ ಎನ್‌‌ಫೀಲ್ಡ್ ಮಾರಾಟದಲ್ಲಿ ಇಳಿಕೆಯಾಗಿದೆ. ಇದು ಜಾವಾ ಬೈಕ್ ಬಿಡುಗಡೆಯಾದ ಎಫೆಕ್ಟ್ ಎಂದೇ ಹೇಳಲಾಗುತ್ತಿದೆ. ಡಿಸೆಂಬರ್‌ನಲ್ಲಿ ಶೇಕಡಾ 13 ರಷ್ಟು ಮಾರಾಟದಲ್ಲಿ ಇಳಿಕೆಯಾಗಿದೆ ಎಂದು ರಾಯಲ್ ಎನ್‌ಫೀಲ್ಡ್ ಹೇಳಿದೆ.

ಇದನ್ನೂ ಓದಿ: 2019ರಲ್ಲಿ ಬಿಡುಗಡೆಯಾಗಲಿರುವ ಕಡಿಮೆ ಬೆಲೆ ಕಾರುಗಳು!

2017ರ ಡಿಸೆಂಬರ್‌ನಲ್ಲಿ 66,968 ರಾಯಲ್ ಎನ್‌ಫೀಲ್ಡ್ ಬೈಕ್ ಮಾರಾಟವಾಗಿತ್ತು. ಆದರೆ 2018ರ ಡಿಸೆಂಬರ್‌ನಲ್ಲಿ 56,026 ಬೈಕ್ ಮಾರಾಟವಾಗಿದೆ. ಈ ಮೂಲಕ 13% ಮಾರಾಟ ಇಳಿಕೆಯಾಗಿದೆ. ಆದರೆ ಡಿಸೆಂಬರ್‌ನಲ್ಲಿ ವಿದೇಶಗಳಿಗೆ ರಫ್ತು ಆಗಿರೋ ಬೈಕ್ ಪ್ರಮಾಣದಲ್ಲಿ ಏರಿಕೆಯಾಗಿದೆ. ಶೇಕಡಾ 41 ರಷ್ಟು ಏರಿಕೆ ಕಂಡಿದೆ ಎಂದು ಕಂಪೆನಿ ವರದಿ ಬಿಡುಗಡೆ ಮಾಡಿದೆ.
ಆಟೋಮೊಬೈಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ:

click me!