ರಾಯಲ್ ಎನ್‌ಫೀಲ್ಡ್ ಪ್ರತಿಸ್ಪರ್ಧಿ, ಮ್ಯಾಶ್ ಡೆಸರ್ಟ್ ಫೋರ್ಸ್ 400 ಬೈಕ್ ಬಿಡುಗಡೆ!

Suvarna News   | Asianet News
Published : May 08, 2020, 09:34 PM ISTUpdated : May 08, 2020, 09:36 PM IST
ರಾಯಲ್ ಎನ್‌ಫೀಲ್ಡ್ ಪ್ರತಿಸ್ಪರ್ಧಿ, ಮ್ಯಾಶ್ ಡೆಸರ್ಟ್ ಫೋರ್ಸ್ 400 ಬೈಕ್ ಬಿಡುಗಡೆ!

ಸಾರಾಂಶ

ಮೊದಲ ನೋಟಕ್ಕೆ ರಾಯಲ್ ಎನ್‌ಫೀಲ್ಡ್ ಡಸರ್ಟ್ ಸ್ಟ್ರೋಮ್ 500 ಶೈಲಿಯನ್ನೇ ಹೋಲುತ್ತಿದೆ. ಟ್ಯಾಂಕ್, ಸೀಟ್ ವಿನ್ಯಾಸದಲ್ಲಿ ಕೊಂಚ ಬದಲಾವಣೆ ಹೊರತು ಪಡಿಸಿದೆ ಈ ನೂತನ ಬೈಕ್ ರಾಯಲ್ ಎನ್‌ಫೀಲ್ಡ್ ಎಂದರೆ ಅಚ್ಚರಿಯಿಲ್ಲ. ಆದರೆ ಇದು ರಾಯಲ್ ಎನ್‌ಫೀಲ್ಡ್‌ಗೆ ಪ್ರತಿಸ್ಪರ್ಧಿಯಾಗಿ ಬಿಡುಗಡೆಯಾಗಿರುವ ಮ್ಯಾಶ್ ಡೆಸರ್ಟ್ ಫೋಸ್ಟ್ 400 ಬೈಕ್. 

ಫ್ರಾನ್ಸ್(ಮೇ.06); ರಾಯಲ್ ಎನ್‌ಫೀಲ್ಡ್ ಬೈಕ್ ಯಶಸ್ಸಿನ ಬಳಿಕ ಹಲವು ಕಂಪನಿಗಳು ಪ್ರತಿಸ್ಪರ್ಧಿಯಾಗಿ ಹೊಸ ಹೊಸ ಬೈಕ್ ಬಿಡುಗಡೆ ಮಾಡಿದೆ. ಆದರೆ ರಾಯಲ್ ಎನ್‌ಫೀಲ್ಡ್ ರೀತಿಯ ಯಶಸ್ಸು ಸಿಕ್ಕಿಲ್ಲ. ಇದೀಗ ರಾಯಲ್ ಎನ್‌ಫೀಲ್ಡ್ ಬೈಕ್‌ನ್ನೇ ಹೊಲುವ ನೂತನ ಮ್ಯಾಶ್ ಡೆಸರ್ಟ್ ಫೋರ್ಸ್ 400 ಬೈಕ್ ಬಿಡುಗಡೆಯಾಗಿದೆ. ಮೊದಲ ನೋಟಕ್ಕೆ ಈ ಬೈಕ್ ರಾಯಲ್ ಎನ್‌ಫೀಲ್ಡ್ ರೀತಿಯೇ ಕಾಣಿತ್ತಿದೆ.

ರಾಯಲ್ ಎನ್‌ಫೀಲ್ಡ್ ಮೆಟೊರ್ 350 ಬೈಕ್ ಬಿಡುಗಡೆ ರೆಡಿ, ಬೆಲೆ ಬಹಿರಂಗ!

ಮ್ಯಾಶ್ ಡೆಸರ್ಟ್ ಫೋರ್ಸ್ 400 ಬೈಕ್ ಬಿಡುಗಡೆಯಾಗಿರುವುದು ಫ್ರಾನ್ಸ್‌ನಲ್ಲಿ. ಆಟೋಮೊಬೈಲ್ ಇಂಡಸ್ಟ್ರಿಯಲ್ಲಿ ಫ್ರಾನ್ಸ್ ವಿಶ್ವದಲ್ಲೇ ಹೆಸರುಗಳಿಸಿದೆ. ಪಿಎಸ್ಎ ಗ್ರೂಪ್, ರೆನಾಲ್ಟ್, ಬುಗಾಟಿ ಸೇರಿದಂತೆ ಹಲವು ಕಂಪನಿಗಳ ಉಗಮ ಫ್ರಾನ್ಸ್. ಆದರೆ ದ್ವಿಚಕ್ರವಾಹನಗಲ್ಲಿ ಫ್ರಾನ್ಸ್ ಹೆಚ್ಚು ಗಮನಸೆಳೆದಿಲ್ಲ. ಇದೀಗ ಮ್ಯಾಶ್ ಮೋಟಾರ್ಸ್ ವಿಶ್ವದಲ್ಲೇ ಸದ್ದು ಮಾಡತ್ತಿದೆ. ರಾಯಲ್ ಎನ್‌ಫೀಲ್ಡ್‌ಗೆ ಪ್ರತಿ ಸ್ಪರ್ಧಿಯಾಗಿ ಬೈಕ್ ಬಿಡುಗಡೆ ಮಾಡಿ, ಹೊಸ ಸಂಚಲನ ಮೂಡಿಸಿದೆ.

ರಾಯಲ್‌ ಎನ್‌ಫೀಲ್ಡ್ ಫೊಟೊನ್ ಎಲೆಕ್ಟ್ರಿಕ್ ಬೈಕ್ ಬಿಡುಗಡೆಗೆ ರೆಡಿ!

ಮ್ಯಾಶ್ ಮೋಟಾರ್ಸ್ ಬಿಡುಗಡೆ ಮಾಡಿರುವ ನೂತನ ಡಸರ್ಟ್ ಫೋರ್ಸ್ 400 ಬೈಕ್, 1950ರಲ್ಲಿ ಅಮೆರಿಕಾ  ಮಿಲಿಟರಿ ಬಳಸಿದ ವಿಂಟೇಜ್  ಬೈಕ್ ಶೈಲಿಯಿಂದ ಸ್ಪೂರ್ತಿ ಪಡೆದು ತಯಾರಿಸಲಾಗಿದೆ. ಇದು ಲಿಮಿಟೆಡ್ ಎಡಿಶನ್ ಆಗಿದ್ದು ಕೇವಲ 103 ಬೈಕ್‌ಗಳು ಲಭ್ಯವಿದೆ. ಇದರ ಬೆಲೆ 4,995 ಫ್ರಾನ್ಸ್ ಯುರೋ. ಅಂದರೆ ಭಾರತದ ರೂಪಾಯಿಗಳಲ್ಲಿ 4.10 ಲಕ್ಷ ರೂಪಾಯಿ. 

13 ಲೀಟರ್ ಇಂಧರ ಸಾಮರ್ಥ್ಯ ಹೊಂದಿರುವ ಈ ಬೈಕ್ 26.6bhp ಪವರ್ ಹಾಗೂ 30 nm ಪೀಕ್ ಟಾರ್ಕ ಉತ್ಪಾದಿಸ ಬಲ್ಲ ಸಾಮರ್ಥ್ಯ ಹೊಂದಿದೆ. ಈ ಬೈಕ್ ರಾಯಲ್ ಎನ್‌ಫೀಲ್ಡ್, ಜಾವಾ, ಬೆನೆಲಿ ಇಂಪಿರಿಯೆಲ್ 400 ಬೈಕ್‌ಗೆ ಪ್ರತಿಸ್ಪರ್ಧಿಯಾಗಿ ಮಾರುಕಟ್ಟೆಗೆ ಪ್ರವೇಶಿಸಿದೆ.

PREV
click me!

Recommended Stories

ನಿಯಮಗಳ ಪಾಲಿಸದ ಸ್ಲೀಪರ್ ಬಸ್‌ ಸ್ಥಗಿತ: ಎನ್‌ಎಚ್‌ಆರ್‌ಸಿ
Tata Sierra vs Maruti Grand Vitara : ಯಾವ SUV ಉತ್ತಮ ಎಂಜಿನ್ ಹೊಂದಿದೆ? ಬೆಲೆ, ವೈಶಿಷ್ಟ್ಯ ತಿಳಿಯಿರಿ