BMW X7 ಕಾರಿನಲ್ಲಿ ಜಾಲಿ ರೈಡ್; ತರಕಾರಿ ಖರೀದಿ ನೆಪದಲ್ಲಿ 100 ಕಿ.ಮೀ ಪ್ರಯಾಣ!

By Suvarna News  |  First Published May 8, 2020, 5:47 PM IST

ದೇಶದಲ್ಲಿ 3ನೇ ಹಂತದಲ್ಲಿ ಲಾಕ್‌ಡೌನ್ ಜಾರಿಯಲ್ಲಿದೆ. ಆದರೆ ಕೆಲವೆಡೆ ಲಾಕ್‌ಡೌನ್ ಸಡಿಲಿಕೆ ಮಾಡಲಾಗಿದೆ. ಇದನ್ನೇ ಬಳಸಿಕೊಂಡು ಹಲವರು ಜಾಲಿ ಟ್ರಿಪ್ ಆರಂಭಿಸಿದ್ದಾರೆ. ಇಲ್ಲೊಬ್ಬ ತರಕಾರಿ ತರಲು ತನ್ನ BMW X7 ಕಾರಿನಲ್ಲಿ ಬರೋಬ್ಬರಿ  100 ಕಿ.ಮೀ ಪ್ರಯಾಣ ಮಾಡಿದ್ದಾನೆ. ಈತನ ತರಕಾರಿ ಖರೀದಿ ವಿವರ ಇಲ್ಲಿದೆ


ಮೀರತ್(ಮೇ.08): ಲಾಕ್‌ಡೌನ್ ಸಡಿಲಿಕೆಯಾದ ಬೆನ್ನಲ್ಲೇ ಹಲವರು ಸುಖಾಸುಮ್ಮನೆ ಓಡಾಟ ಆರಂಭಿಸಿದ್ದಾರೆ. ಹೀಗೆ ನೋಯ್ಡಾದಿಂದ ಸರಿಸುಮಾರು 100 ಕಿ.ಮೀ ದೂರದಲ್ಲಿರುವ ಮೀರತ್‌ಗೆ ತರಕಾರಿ ತರಲು ತನ್ನ BMW X7 ಕಾರಿನಲ್ಲಿ ಪ್ರಯಾಣಿಸಿದ್ದಾರೆ. ಕೆಲೆವಡೆ ಲಾಕ್‌ಡೌನ್ ಸಡಿಲಿಕೆ ಕಾರಣ ವಾಹನ ಓಡಾಟಕ್ಕೆ ಅವಕಾಶ ಮಾಡಿಕೊಡಲಾಗಿದೆ. ಇದನ್ನೇ ಬಳಸಿಕೊಂಡ ಈತ ತನ್ನ BMW X7 ಕಾರು ತೆಗೆದು ಜಾಲಿ ಡ್ರೈವ್‌ಗೆ ಪ್ಲಾನ್ ಮಾಡಿದ್ದಾನೆ.

ಸಿಎಂ ಹೆಸರು ಹೇಳಿ ಬೆಂಗಾವಲು ವಾಹನ ಜೊತೆ ಕೇದಾರನಾಥ್ ಪ್ರವಾಸ; ಪೊಲೀಸರ ಅತಿಥಿಯಾದ ಶಾಸಕ!

Latest Videos

undefined

ಲಾಕ್‌ಡೌನ್ ಕಾರಣ ತನ್ನ BMW X7 ಕಾರು ಚಲಾಯಿಸದೆ ಈತ ಬೇಸರಗೊಂಡಿದ್ದ. ಹೀಗಾಗಿ ಈತ BMW X7 ಕಾರು ತೆಗೆದು ಜಾಲಿ ಡ್ರೈವ್ ಹೊರಟಿದ್ದಾನೆ. ನೋಯ್ಡಾದಿಂದ ಆತನ ಪ್ರಯಾಣ ಆರಂಭಗೊಂಡಿದೆ. BMW X7 ಕಾರು, ಖಾಲಿ ರಸ್ತೆ ಇದ್ದರೆ ಕೇಳಬೇಕೆ? ಅತೀ ವೇಗದಲ್ಲಿ ಕಾರು ಚಲಾಯಿಸಿದ್ದಾನೆ. ನೋಯ್ಡಾದಿಂದ ಈತ ಮೀರತ್ ತಲುಪಿದ್ದಾನೆ. ನೋಯ್ಡಾದಿಂದ ಮೀರತ್ ನಡುವಿನ ಅಂತರ ಸರಾಸರಿ 100 ಕಿ.ಮೀ.

ಹೊಂಡಾ ಸಿಟಿ ಕಾರಿಗೆ MLA ಪಾಸ್, ಲಾಕ್‌ಡೌನ್ ಉಲ್ಲಂಘಿಸಿದ 20ರ ಯುವಕ ಕೊನೆಗೂ ಅರೆಸ್ಟ್!... 

ಮೀರತ್ ಆಗಮಿಸುತ್ತಿದ್ದಂತೆ ಪೊಲೀಸರು ತಡೆದು ನಿಲ್ಲಿಸಿದ್ದಾರೆ. ಬಳಿಕ ವಿಚಾರಣೆ ನಡೆಸಿದ್ದಾರೆ. ಈ ವೇಳೆ ತಾನು ತರಕಾರಿ ತರಲು ಆಗಮಿಸಿರುವುದಾಗಿ ಹೇಳಿದ್ದಾನೆ. ತನ್ನ ಮನೆ ಇಲ್ಲೇ ಮೀರತ್ ಮಾರ್ಕೆಟ್ ಬಳಿ ಇರುವುದಾಗಿ ಹೇಳಿದ್ದಾನೆ.   ಅನುಮಾನಗೊಂಡ ಪೊಲೀಸರು ಈತನ ವಿಳಾಸ ಪರಿಶೀಲಿಸಿದಾಗ ನೋಯ್ಡಾ ಎಂದು ತಿಳಿದಿದೆ. ಹೀಗಾಗಿ ಪೊಲೀಸರು ಸರಿಯಾಗಿ ಉತ್ತರ ನೀಡುವಂತೆ ಗದರಿಸಿದ್ದಾರೆ. ಈ ವೇಳೆ ತಾನು ನೋಯ್ಡಾದಿಂದ ಬಂದಿರುವುದಾಗಿ ಹೇಳಿದ್ದಾನೆ.

ಲಾಕ್‌ಡೌನ್ ಸಡಿಲಿಕೆ ಕಾರಣ ಈತನ BMW X7 ಕಾರನ್ನು ಸೀಝ್ ಮಾಡಿಲ್ಲ. ಆದರೆ ದಂಡ ಹಾಕಿದ್ದಾರೆ.  ಇಷ್ಟೇ ಅಲ್ಲ ಮೀರತ್‌ನಿಂದ ನೇರವಾಗಿ ನೋಯ್ಡಾಗೆ ತೆರಳಲು ಸೂಚಿಸಿದ್ದಾರೆ. ಇಷ್ಟೇ ಅಲ್ಲ ಮತ್ತೊಮ್ಮೆ ರೀತಿ ಮಾಡಿದರೆ ಕಾರು ಸೀಝ್ ಮಾಡುವುದಾಗ ಎಚ್ಚರಿಸಿದ್ದಾರೆ.

 

click me!