ಸಿಎಂ ಹೆಸರು ಹೇಳಿ ಬೆಂಗಾವಲು ವಾಹನ ಜೊತೆ ಕೇದಾರನಾಥ್ ಪ್ರವಾಸ; ಪೊಲೀಸರ ಅತಿಥಿಯಾದ ಶಾಸಕ!

By Suvarna News  |  First Published May 6, 2020, 6:25 PM IST

ಲಾಕ್‌ಡೌನ್ ನಿಯಮವನ್ನು ಪಾಲಿಸಿ, ಜನರಿಗೆ ತಿಳಿ ಹೇಳಬೇಕಾದ ಶಾಸಕರೇ ನಿಯಮ ಉಲ್ಲಂಘಿಸಿದರೆ ಕೊರೋನಾ ನಿಯಂತ್ರಣ ಹೇಗೆ ಸಾಧ್ಯ? ಕಾರಿಗೆ ಶಾಸಕರ ಪಾಸ್ ಅಂಟಿಸಿ ತಿರುಗಾಡಿದ ಘಟನೆ ಕೇಳಿದ್ದೇವೆ. ಇದೀಗ ಸ್ವತಃ ಶಾಸಕನೇ ಮುಖ್ಯಮಂತ್ರಿ ಹೆಸರು ಹೇಳಿಕೊಂಡು ಕೇದಾನಾಥ್ ಪ್ರವಾಸ ಹೊರಟ ಘಟನೆ ನಡೆದಿದೆ. ಅದೂ ಕೂಡ ಬೆಂಗಾವಲು ವಾಹನಗಳ ಜೊತೆಗೆ. ಶಾಸಕನ ದರ್ಪದ ಸ್ಟೋರಿ ಇಲ್ಲಿದೆ.


ಉತ್ತರ ಪ್ರದೇಶ(ಮೇ.06): ಕೊರೋನಾ ವೈರಸ್ ನಿಯಂತ್ರಣಕ್ಕೆ ಲಾಕ್‌ಡೌನ್ ಹೇರಲಾಗಿತ್ತು. ಕೈಯಲ್ಲಿ ದುಡ್ಡಿಲ್ಲದೆ, ತಿನ್ನಲು ಆಹಾರವಿಲ್ಲದ ಕೂಲಿ ಕಾರ್ಮಿಕರು ನಿಯಮ ಉಲ್ಲಂಘನೆಯಾದರೂ ಪರವಾಗಿಲ್ಲ ತಮ್ಮ ತಮ್ಮ ಊರಿಗೆ ತೆರಳುವ ಪ್ರಯತ್ನ ಮಾಡಿದ್ದಾರೆ. ಇದು ಅಪರಾಧವಲ್ಲ ಬಿಡಿ. ಆದರೆ ತಪ್ಪೆಗೆ ಮನೆಯಲ್ಲಿರಬೇಕಾದ ಶಾಸಕನೋರ್ವ ತನ್ನ ಅಧಿಕಾರ ಬಳಸಿದ್ದು ಮಾತ್ರವಲ್ಲ ಮುಖ್ಯಮಂತ್ರಿ ಹೆಸರು ಹೇಳಿ ಕೇದಾರನಾಥ್ ಪ್ರವಾಸಕ್ಕೆ ಹೊರಟಿದ್ದ. ಲಾಕ್‌ಡೌನ್ ನಿಯಮ ಗಾಳಿಗೆ ತೂರಿದ ಈ ಶಾಕರ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ.

ಹೊಂಡಾ ಸಿಟಿ ಕಾರಿಗೆ MLA ಪಾಸ್, ಲಾಕ್‌ಡೌನ್ ಉಲ್ಲಂಘಿಸಿದ 20ರ ಯುವಕ ಕೊನೆಗೂ ಅರೆಸ್ಟ್!

Latest Videos

undefined

ಉತ್ತರ ಪ್ರದೇಶದ ಶಾಸಕ ಅಮನ್ ಮಾನಿ ತ್ರಿಪಾಠಿ ಲಾಕ್‌ಡೌನ್ ಸಮಯದಲ್ಲಿ ಒಂದು ಭರ್ಜರಿ ಐಡಿಯಾ ಮಾಡಿದ್ದಾನೆ. ಎಷ್ಟು ದಿನ ಲಾಕ್‌ಡೌನ್ ಅಂತಾ ಮನೆಯಲ್ಲೇ ಕಳೆಯುವುದು. ಜೀವನದಲ್ಲಿ ಒಂದು ಥ್ರಿಲ್ ಬೇಕು ಎಂದು ಬೆಂಗಾವಲು ವಾಹನ ಹಾಗೂ ಕುಟುಂಬ ಸದಸ್ಯರನ್ನೂ ಒಟ್ಟುಗೂಡಿಸಿದ್ದಾನೆ. ಇಷ್ಟೇ ಅಲ್ಲ ತಮ್ನ ಫಾರ್ಚನರ್ ಕಾರು ತೆಗೆದು ಕೇದರಾನಾಥ್ ಹಾಗೂ ಬದ್ರಿನಾಥ್ ಪ್ರವಾಸ ಹೊರಟಿದ್ದಾನೆ.

ಕಳೆದ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಅಮನ್ ಮಾನಿ ತ್ರಿಪಾಠಿ, ಉತ್ತರ ಪ್ರದೇಶದಿಂದ ಪ್ರವಾಸ ಆರಂಭಿಸಿದ್ದಾನೆ. ಪೊಲೀಸರು ಶಾಸಕರ ಕಾರು, ಸ್ವತಃ ಶಾಸಕರೇ ಕಾರಿನಲ್ಲಿದ್ದಾರೆ. ಹೀಗಿರುವಾಗ ಹಲವು ಚೆಕ್ ಪೋಸ್ಟ್‌ಗಳಲ್ಲಿ ಪೊಲೀಸರು ಮರು ಮಾತನಾಡದೇ ಬಿಟ್ಟಿದ್ದಾರೆ. ಇನ್ನು ಕೆಲವೆಡೆ  ಉತ್ತರಖಂಡ ಹೆಚ್ಚುವರಿ ಕಾರ್ಯದರ್ಶಿ ಒಮ್ ಪ್ರಕಾಶ್ ನೆರವು ಬಳಸಿಕೊಂಡಿದ್ದಾನೆ.

ಲಾಕ್‌ಡೌನ್ ವೇಳೆ BMW ಕಾರಿನಲ್ಲಿ ಜಾಲಿ ರೈಡ್, ಓವರ್ ಬಿಲ್ಡಪ್ ನೀಡಿ ಅರೆಸ್ಟ್ ಆದ ಯುವಕ!

ಬೆಂಗಾವಲು ವಾಹನ ಸೇರಿದಂತೆ ಒಟ್ಟು 11 ಮಂದಿಯ ಪ್ರವಾಸ ಆರಂಭಗೊಂಡಿದೆ. ಉತ್ತರಖಂಡ ತಲುಪಿದ ಅಮನ್ ಮಾನಿಯನ್ನು ಉತ್ತರ ಖಂಡ ಪೊಲೀಸರು ನಿಲ್ಲಿಸಿ ಪ್ರಶ್ನಿಸಿದ್ದಾರೆ. ಈ ವೇಳೆ ಈ ಶಾಸಕ ತಾನು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ತಂದೆ ಕಳೆದ ತಿಂಗಳು ವಿಧಿವಶರಾಗಿದ್ದಾರೆ. ಹೀಗಾಗಿ ಅವರಿಗೆ ಪ್ರಾರ್ಥನೆ ಸಲ್ಲಿಸಲು ಕೇದಾರನಾಥ್ ಹಾಗೂ ಬದ್ರಿನಾಥಕ್ಕೆ ತೆರಳುವುದಾಗಿ ಹೇಳಿದ್ದಾನೆ. ಈತನ ಕತೆಯನ್ನು ಪೊಲೀಸರು ನಂಬಿಲ್ಲ. ಅಷ್ಟರಲ್ಲೇ ಬೆಂಗಾವಲು ಪಡೆಯಲ್ಲಿದ್ದ ಕುಟುಂಬ ಸದಸ್ಯರ ಜೊತೆ ಸೇರಿ ಗೂಂಡಾಗಿರಿ ಮಾಡಲು ಯತ್ನಿಸಿದ್ದಾನೆ.

ಈ ಶಾಸಕನ ಬಳಿ 3 ಕಾರುಗಳಲ್ಲಿ 9 ಮಂದಿ ತೆರಳಬಲ್ಲ ಪಾಸ್ ಕೂಡ ಇತ್ತು. ಇದನ್ನು ಬಳಸಿ ಕೊನೆ ಪ್ರಯತ್ನಕ್ಕೆ ಮುಂದಾಗಿದ್ದಾನೆ. ಸಿಎಂ ಯೋಗಿಆದಿತ್ಯನಾಥ್ ಅವರ ಸೂಚನೆ ಮೇರೆಗೆ ತೆರಳುತ್ತಿರುವುದಾಗಿ ಹೇಳಿದ್ದಾನೆ. ಈತನ ಕತೆ ಕ್ಷಣ ಕ್ಷಣಕ್ಕೂ ಬದಲಾಗಿದೆ. ಮಾತಿನ ವರಸೆ ಕೂಡ ಬದಲಾಗಿದೆ. ಹೀಗಾಗಿ ಉತ್ತರ ಖಂಡದ ಪೌರಿ ಜಿಲ್ಲಾ ಪೊಲೀಸರು ಶಾಸಕ ಅಮನ್ ಮಾನಿ ತ್ರಿಪಾಠಿಯನ್ನು ಅರಸ್ಟೆ ಮಾಡಿದ್ದಾರೆ. 

ಮಾದ್ಯಗಳಲ್ಲಿ ಈ ಕುರಿತು ಪ್ರಸ್ತಾವವಾಗುತ್ತಿದ್ದಂತೆ ಮುಖ್ಯಮುಂತ್ರಿ ಯೋಗಿ ಆದಿತ್ಯನಾಥ್ ಈ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ. ಈ ರೀತಿ ಯಾರಿಗೂ ಉತ್ತರ ಪ್ರದೇಶ ಸರ್ಕಾರ ಅನುಮತಿ ನೀಡಿಲ್ಲ. ಇಷ್ಟೇ ಅಲ್ಲ ಯಾವ ಸೂಚನೆಯನ್ನು ನಾನು  ನೀಡಿಲ್ಲ ಎಂದಿದ್ದಾರೆ. ಹೀಗಾಗಿ ಶಾಸಕ ಅಮನ್ ಮಾನಿ ಹಾಗೂ 11  ಮಂದಿ ಉತ್ತರ ಖಂಡದ ಪೊಲೀಸರ ಅತಿಥಿಯಾಗಿದ್ದಾನೆ. 

click me!