ರಾಯಲ್ ಎನ್‌ಫೀಲ್ಡ್ ಬುಲೆಟ್ ಬೈಕ್ ಇದೀಗ ಹೊಸ ಅವತಾರದಲ್ಲಿ ರಸ್ತೆಗಿಳಿದಿದೆ. ಕಡಿಮೆ ಬೆಲೆ ಹಾಗೂ ABS ತಂತ್ರಜ್ಞಾನದೊಂದಿಗೆ ಬುಲೆಟ್ ಮಾರುಕಟ್ಟೆ ಪ್ರವೇಶಿಸಿದೆ. ನೂತನ ಬುಲೆಟ್ 500 ವಿಶೇಷತೆ ಏನು? ಇದರ ಬೆಲೆ ಎಷ್ಟು? ಇಲ್ಲಿದೆ ವಿವರ.
ನವದೆಹಲಿ(ಜ.13): ರಾಯಲ್ ಎನ್‌ಫೀಲ್ಡ್ ಬುಲೆಟ್ 500 ಇದೀಗ ABS(ಆ್ಯಂಟಿ ಲಾಕ್ ಬ್ರೇಕಿಂಗ್ ಸಿಸ್ಟಮ್) ತಂತ್ರಜ್ಞಾನದೊಂದಿಗೆ ಬಿಡುಗಡೆಯಾಗಿದೆ. ಶೀಘ್ರದಲ್ಲೇ ಬುಲೆಟ್ 350 ಕೂಡ ABS ತಂತ್ರಜ್ಞಾನದೊಂದಿಗೆ ಮಾರುಕಟ್ಟೆಗೆ ಪ್ರವೇಶಿಸಲಿದೆ. ಕಳೆದ ತಿಂಗಳ ಬುಲೆಟ್ 350 ಹಾಗೂ 500 ಬೈಕ್‍ಗೆ ರೇರ್ ಡಿಸ್ಕ್ ಬ್ರೇಕ್ ಅಳವಡಿಸಿ ಬಿಡುಗಡೆ ಮಾಡಿತ್ತು. ಇದೀಗ ABS ಬೈಕ್ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ.
undefined
ಇದನ್ನೂ ಓದಿ: ಟಾಟಾ ಇಂಡಿಗೋ To ಮರ್ಸಡೀಸ್ ಬೆಂಝ್- ರತನ್ ಟಾಟಾ ಕಾರ್ ಕಲೆಕ್ಷನ್ ಹೇಗಿದೆ?
ನೂತನ ಬುಲೆಟ್ 500 ABS ಬೈಕ್ ಬೆಲೆ 1.86 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ). ಎಪ್ರಿಲ್ 1, 2019ಕ್ಕೆ 125 ಸಿಸಿಗಿಂತ ಹೆಚ್ಚಿನ ಎಂಜಿನ್ ಹೊಂದಿರುವ ಎಲ್ಲಾ ಬೈಕ್ ಹಾಗೂ ಸ್ಕೂಟರ್‌ಗಳು ABS ತಂತ್ರಜ್ಞಾನ ಅಳವಡಿಸುವುದು ಅನಿವಾರ್ಯವಾಗಿದೆ. ಹೀಗಾಗಿ ಇದೀಗ ರಾಯಲ್ ಎನ್‌ಫೀಲ್ಡ್ ಬುಲೆಟ್ ಅವಧಿಗೂ ಮುನ್ನ ABS ಅಳವಡಿಸಿ ಬಿಡುಗಡೆ ಮಾಡಿದೆ.
ಇದನ್ನೂ ಓದಿ: ವಾಹನ ಸವಾರರಿಗೆ ಮತ್ತೊಂದು ಶಾಕ್: ಹೀಗೆ ಮಾಡಿದ್ರೆ ಕಂಬಿ ಎಣಿಸೋದು ಗ್ಯಾರಂಟಿ
ನೂತನ ಬುಲೆಟ್ 500 ABS ಬೈಕ್‌ನಲ್ಲಿ ಹೆಚ್ಚುವರಿ ಫೀಚರ್ಸ್ ಸೇರಿಸಲಾಗಿದೆ. ಟೈಗರ್ ಐ ಲ್ಯಾಂಪ್ಸ್, ಕ್ಲಾಸಿಕ್ ರೌಂಡ್ ಹೆಡ್‌ಲ್ಯಾಂಪ್ಸ್, ಸಿಂಗಲ್ ಪೀಸ್ ಸೀಟ್ ಅಳವಡಿಸಲಾಗಿದೆ. ಡ್ಯುಯೆಲ್ ಚಾನೆಲ್ ನೂತನ ಬುಲೆಟ್ 500 ABS ಬೈಕ್ ಹೊಂದಿದೆ. ABS ತಂತ್ರಜ್ಞಾನದೊಂದಿಗೆ ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 350 ರೆಡ್ಡಿಚ್ ಎಡಿಶನ್ ಈಗಾಗಲೇ ಬಿಡುಗಡೆಯಾಗಿದೆ.