PureEV ETrance ಎಲೆಕ್ಟ್ರಿಕ್ ಸ್ಕೂಟರ್ ಲಾಂಚ್: ಆಕ್ಟಿವಾ ಸೇರಿದಂತೆ ಎಲ್ಲಾ ಸ್ಕೂಟರ್‌ಗಿಂತ ಕಡಿಮೆ ಬೆಲೆ!

By Suvarna News  |  First Published Aug 22, 2020, 2:42 PM IST

ಮೇಡ್ ಇನ್ ಇಂಡಿಯಾ PUR ಎನರ್ಜಿ ಮತ್ತೊಂದು ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ ಮಾಡಿದೆ. ಈ ಸ್ಕೂಟರ್ ಕಡಿಮೆ ಬೆಲೆ ಹೊಂದಿದ್ದು, ಒಂದು ಬಾರಿ ಚಾರ್ಜ್ ಮಾಡಿದರೆ 65 ಕಿ.ಮೀ ಪ್ರಯಾಣದ ರೇಂಜ್ ನೀಡಲಿದೆ. ನೂತನ ಸ್ಕೂಟರ್ ಕುರಿತ ಹೆಚ್ಚಿನ ಮಾಹಿತಿ ಇಲ್ಲಿದೆ.


ಹೈದರಾಬಾದ್(ಆ.22): ಹೈದರಾಬಾದ್ ಮೂಲದ PUR ಎನರ್ಜಿ ಇದೀಗ ನೂತನ PureEV ETrance ಪ್ಲಸ್ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ ಮಾಡಿದೆ. ಸದ್ಯ ಯಾವುದೇ ಪೆಟ್ರೋಲ್ ಸ್ಕೂಟರ್ ಬೆಲೆ 80,000 ರೂಪಾಯಿಗಿಂತ ಹೆಚ್ಚಿದೆ. ಆದರೆ PureEV ETrance ಪ್ಲಸ್ ಎಲೆಕ್ಟ್ರಿಕ್ ಸ್ಕೂಟರ್ ಬೆಲೆ 56,999 ರೂಪಾಯಿ(ಎಕ್ಸ್ ಶೋ ರೂಂ).

ದೆಹಲಿಯಲ್ಲಿ ಬಿಡುಗಡೆಯಾಗುತ್ತಿದೆ ಬೆಂಗಳೂರಿನ ಎದರ್ ಎಲೆಕ್ಟ್ರಿಕ್ ಸ್ಕೂಟರ್!.

Latest Videos

undefined

ನೂತನ ಸ್ಕೂಟರ್‌ಗೆ 1.25KWH ಪೊರ್ಟೇಬಲ್ ಬ್ಯಾಟರಿ ಬಳಸಲಾಗಿದೆ. ಒಂದು ಬಾರಿ ಸಂಪೂರ್ಣ ಚಾರ್ಜ್ ಮಾಡಿದರೆ 65 ಕಿ.ಮೀ ಮೈಲೇಜ್ ನೀಡಲಿದೆ. ಆದರೆ ಸಂಪೂರ್ಣ ಚಾರ್ಜ್‌ಗೆ 4 ಗಂಟೆ ಸಮಯ ತೆಗೆದುಕೊಳ್ಳಲಿದೆ. ಇನ್ನು PureEV ETrance ಪ್ಲಸ್ ಸ್ಕೂಟರ್ ಗರಿಷ್ಠ ವೇಗ 25 ಕಿ.ಮೀ.

470 ಕಿ.ಮೀ ಮೈಲೇಜ್, 15 ನಿಮಿಷದಲ್ಲಿ ಚಾರ್ಜಿಂಗ್, ಬರುತ್ತಿದೆ Evoke 6061 ಎಲೆಕ್ಟ್ರಿಕ್ ಬೈಕ್!.

4 ಬಣ್ಣಗಳಲ್ಲಿ ನೂತನ ಎಲೆಕ್ಟ್ರಿಕ್ ಸ್ಕೂಟರ್ ಲಭ್ಯವಿದೆ. ಭಾರತದ ರಸ್ತೆಗಳಿಗೆ ಅನುಗುಣವಾಗಿ ಸ್ಕೂಟರ್ ನಿರ್ಮಾಣ ಮಾಡಲಾಗಿದೆ. eABS ಬ್ರೇಕಿಂಗ್ ಸಿಸ್ಟಮ ಹೊಂಂದಿದೆ.  SOS ಇಂಡಿಕೇಟರ್ ಮೂಲಕ ಪ್ರಯಾಣದ ವೇಳೆ ಬಾಕಿ ಇರುವ ಬ್ಯಾಟರಿ ಚಾರ್ಜ್ ಹಾಗೂ ಕ್ರಮಿಸಬಲ್ಲ ದೂರದ ಬಗ್ಗೆ ಮಾಹಿತಿ ನೀಡಲಿದೆ.

ಪ್ರತಿ ನಿತ್ಯ ಬಳಕೆ, ಕಚೇರಿ ಸೇರಿದಂತೆ ಹಲವು ಉಪಯೋಗಗಳಿಗೆ PureEV ETrance ಪ್ಲಸ್ ಸ್ಕೂಟರ್ ಅತ್ಯಂತ ಸಹಾಯಕಾರಿ. ಕಡಿಮೆ ಬೆಲೆ, ಗರಿಷ್ಠ ಮೈಲೇಜ್ ನೀಡುವ ಎಲೆಕ್ಟ್ರಿಕ್ ಸ್ಕೂಟರ್ PureEV ETrance ಪ್ಲಸ್ ಭಾರತದಲ್ಲಿ ಹೊಸ ಸಂಚಲನ ಮೂಡಿಸಲಿದೆ ಎಂದು PUR ಎನರ್ಜಿ ಹೇಳಿದೆ.

click me!