ಚೆನ್ನೈ ಮೂಲದ ಬ್ಲಾಕ್‌ಸ್ಮಿತ್ ಎಲೆಕ್ಟ್ರಿಕ್ ಕ್ರೂಸರ್ ಬೈಕ್ ಸದ್ಯದಲ್ಲೇ ಬಿಡುಗಡೆ !

By Web Desk  |  First Published Jun 30, 2019, 9:05 PM IST

ಚೆನ್ನೈ ಮೂಲದ ಬ್ಲಾಕ್‌ಸ್ಮಿತ್ ಮೋಟಾರು ಕಂಪನಿ ನೂತನ ಎಲೆಕ್ಟ್ರಿಕ್ ಕ್ರೂಸರ್ ಬೈಕ್ ಬಿಡುಗಡೆ ಮಾಡಲು ಎಲ್ಲಾ ತಯಾರಿ ಮಾಡಿಕೊಂಡಿದೆ. ಈ ಬೈಕ್ ಬೆಲೆ, ವಿಶೇಷತೆ, ಮೈಲೇಜ್ ಕುರಿತ ಹೆಚ್ಚಿನ ಮಾಹಿತಿ ಇಲ್ಲಿದೆ.
 


ಚೆನ್ನೈ(ಜೂ.30): ಚೆನ್ನೈ ಮೂಲದ ಬ್ಲಾಕ್‌ಸ್ಮಿತ್ ಎಲೆಕ್ಟ್ರಿಕ್ ಮೋಟಾರು ಕಂಪನಿ  ನೂತನ ಕ್ರೂಸರ್ ಬೈಕ್ ಬಿಡುಗಡೆ ಮಾಡಲು ಸಜ್ಜಾಗಿದೆ. ಸತತ 14 ವರ್ಷಗಳ ಪ್ರಯತ್ನಗಳ ಬಳಿಕ ಇದೀಗ B2 ಕ್ರೂಸರ್ ಬೈಕ್ ತಯಾರಿಸಿದೆ. ನೂತನ ಕ್ರೂಸರ್ ಬೈಕ್ ಫೋಟೋ ಹಾಗೂ ವಿಡಿಯೋ ಬಿಡುಗಡೆ ಮಾಡಿರುವು ಬ್ಲಾಕ್‌ಸ್ಮಿತ್ ಕಂಪನಿ ಶೀಘ್ರದಲ್ಲೇ ಬೈಕ್ ಲಾಂಚ್ ಮಾಡೋ ತವಕದಲ್ಲಿದೆ.

ಇದನ್ನೂ ಓದಿ: ಹೊಸ ಅವತಾರದಲ್ಲಿ TVS Nಟಾರ್ಕ್ 125 ಸ್ಕೂಟರ್ ಬಿಡುಗಡೆ!

Tap to resize

Latest Videos

undefined

72V ಲಿಥಿಯಂ ಬ್ಯಾಟರಿ ಹೊಂದಿರುವ ಈ ಕ್ರೂಸರ್ ಬೈಕ್ ಸಂಪೂರ್ಣ ಚಾರ್ಜ್‌ಗೆ 4 ಗಂಟೆ ತೆಗೆದುಕೊಳ್ಳುತ್ತೆ. ಸಿಂಗಲ್ ಬ್ಯಾಟರಿ ಹೊಂದಿರುವ ಬೈಕ್ 120 ಕಿ.ಮೀ ಮೈಲೇಜ್ ರೇಂಜ್ ನೀಡಿದರೆ ಡಬಲ್ ಬ್ಯಾಟರಿ ಬೈಕ್ 240 ಕಿ.ಮೀ ಮೈಲೇಜ್ ರೇಂಜ್ ನೀಡಲಿದೆ. 19.44 hp ಪವರ್ ಹಾಗೂ 96 Nm ಪೀಕ್ ಟಾರ್ಕ್ ಉತ್ಪಾದಿಸಬಲ್ಲ ಎಲೆಕ್ಟ್ರಿಕ್ ಎಂಜಿನ್ ಹೊಂದಿದೆ.

ಇದನ್ನೂ ಓದಿ: ಕರ್ನಾಟಕ ಮೋಟಾರ್ ವಾಹನ ಕಾಯ್ದೆ ತಿದ್ದುಪಡಿ: ಯಾವುದಕ್ಕೆ ಎಷ್ಟು ದಂಡ..?

ಬ್ಲಾಕ್‌ಸ್ಮಿತ್ ಎಲೆಕ್ಟ್ರಿಕ್ ಕ್ರೂಸರ್ ಬೈಕ್ ಬೆಲೆ 2 ಲಕ್ಷ ರೂಪಾಯಿ. ಕೇಂದ್ರ ಸರ್ಕಾರದ FAME II ಯೋಜನೆ ಅಡಿ ಸಬ್ಸಡಿ ಮೂಲಕ ಬೆಲೆ ಕಡಿಮೆಯಾಗಲಿದೆ. ಮುಂದಿನ ವರ್ಷದ ಆರಂಭದಲ್ಲಿ ನೂತನ ಬೈಕ್ ಭಾರತದಲ್ಲಿ ಬಿಡುಗಡೆಯಾಗಲಿದೆ. ಈಗಾಗಲೇ ಬೆಂಗಳೂರು ಮೂಲದ ಎದರ್ ಎನರ್ಜಿ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ ಮಾಡಿದೆ.

 

click me!