ಫಾಸ್ಟ್ ಟ್ಯಾಗ್ ಖಾತೆಯಿಂದ ಹೋಯ್ತು 600 ರೂ; ಯಾರಿಗೆ ಹೇಳೋಣ ಪ್ಲಾಬ್ಲೆಮ್?

By Suvarna News  |  First Published Dec 28, 2019, 7:55 PM IST

ವಾಹನಗಳಿಗೆ ಫಾಸ್ಟ್ ಟ್ಯಾಗ್ ಕಡ್ಡಾಯ ನಿಯಮ ದೇಶದೆಲ್ಲೆಡೆ ಜಾರಿಯಾಗಿದೆ. ಇದೀಗ ಇದೇ ಫಾಸ್ಟ್ ಟ್ಯಾಗ್ ಖಾತೆಯಿಂದ ಇದ್ದಕ್ಕಿದ್ದಂತೆ ಹಣ ಮಂಗಮಾಯವಾಗಿದೆ. ಕಾರು ಮಾಲೀಕ ಕಾರಿನಲ್ಲೇ ಕುಳಿತಿರುವಾಗ ನಿಮ್ಮ ಕಾರು ರಾಷ್ಟ್ರೀಯ ಹೆದ್ದಾರಿ ಟೋಲ್ ಗೇಟ್ ಪ್ರವೇಶಿಸಿದೆ ಎಂಬ ಸಂದೇಶ ಹಾಗೂ ಖಾತೆಯಲ್ಲಿದ್ದ ಅಷ್ಟೂ ಹಣ ಕಡಿತವಾಗಿರುವ ಘಟನೆ ನಡೆದಿದೆ. ಈ ಸಂದರ್ಭದಲ್ಲಿ ಏನು ಮಾಡಬೇಕು ? ಇಲ್ಲಿದೆ ವಿವರ.  
 


ಕೋಲ್ಕತಾ(ಡಿ.28): ಕೇಂದ್ರ ಸರ್ಕಾರ ಟೋಲ್ ಶುಲ್ಕ ಪಾವತಿಸಲು ಫಾಸ್ಟ್ ಟ್ಯಾಗ್ ಕಡ್ಡಾಯ ಮಾಡಿದೆ. ಫಾಸ್ಟ್ ಟ್ಯಾಗ್ ಇಲ್ಲದಿದ್ದರೆ ಸರದಿ ಸಾಲಿನಲ್ಲಿ ನಿಂತು ದುಬಾರಿ ಶುಲ್ಕ ನೀಡಿ ಮುಂದೆ ಸಾಗಬೇಕು. ಹೀಗೆ ಕಡ್ಡಾಯವಾದ ಬಳಿಕ ಫಾಸ್ಟ್ ಟ್ಯಾಗ್ ಬಳಸಿದ ವೈದ್ಯರಿಗೆ ಅಚ್ಚರಿ ಎದುರಾಗಿದೆ. ಟೋಲ್ ಶುಲ್ಕ ಕೇವಲ 40 ರೂಪಾಯಿ ಇದ್ದರೂ, ಖಾತೆಯಿಂದ 600 ರೂಪಾಯಿ ಕಡಿತವಾಗೋ ಮೂಲಕ ಪೇಚಿಗೆ ಸಿಲುಕಿದ ಘಟನೆ ನಡೆದಿದೆ.

ಇದನ್ನೂ ಓದಿ: ವಾಹನ ಸವಾರರೇ ಎಚ್ಚರ: ಫಾಸ್ಟ್ಯಾಗ್ ದುರುಪಯೋಗ ಪತ್ತೆ..!

Tap to resize

Latest Videos

ಕೋಲ್ಕತಾದ ವೈದ್ಯರೊಬ್ಬರಿಗೆ ಕುಳಿತಲ್ಲೇ ಫಾಸ್ಟ್ ಟ್ಯಾಗ್ ಶಾಕ್ ನೀಡಿದೆ. ಕೋಲ್ಕತಾ ನಗರದಲ್ಲಿದ್ದ ವೈದ್ಯರ ಮೊಬೈಲ್‌ಗೆ ಒಂದರ ಮೇಲೊಂದರಂತೆ ಎರಡು ಸಂದೇಶ ಬಂದಿದೆ. ನಿಮ್ಮ ಕಾರು NH2 ದನ್ಕುನಿ ಹಾಗೂ ಪಾಲ್ಶಿಟ್ ಟೋಲ್ ಗೇಟ್ ಕ್ರಾಸ್ ಆಗಿದೆ. ಇದರ ಶುಲ್ಕ ಕಡಿತಗೊಂಡಿದೆ ಎಂಬ ಸಂದೇಶ ಬಂದಿದೆ. ಈ ವೇಳೆ ವೈದ್ಯರು ಕೋಲ್ಕತಾ ನಗರದಲ್ಲೇ ಇದ್ದರು. ಕೆಲ ಹೊತ್ತಲ್ಲೇ ಮತ್ತೊಂದು ಸಂದೇಶ ಬಂದಿದೆ. ಇದು ವೈದ್ಯರನ್ನು ಚಿಂತೆಗೀಡು ಮಾಡಿದೆ. 

ಇದನ್ನೂ ಓದಿ: ಕಾರಿನ ಫಾಸ್ಟ್‌ಟ್ಯಾಗ್‌ ತೋರಿಸಿ ಟೋಲ್‌ ದಾಟಲು ಲಾರಿ ಯತ್ನ!

ನಿಮ್ಮ ಖಾತೆಯಲ್ಲಿ ಉಳಿದಿರುವ ಹಣ ಮೈನಸ್ 602 ರೂ. ಈ ಸಂದೇಶ ವೈದ್ಯರನ್ನು ಇನ್ನಲ್ಲದ ಸಂಕಷ್ಟಕ್ಕೆ ಸಿಲುಕಿಸಿತು.  ನಗರದಲ್ಲಿನ ಟೋಲ್ ಗೇಟ್ ಬಳಿಕ ವೈದ್ಯರಿಗೆ ಖಾತೆಯಲ್ಲಿ ಹಣವಿಲ್ಲದ ಕಾರಣ ಮುಂದೆ ಸಾಗಲು ಸಾಧ್ಯವಾಗಲಿಲ್ಲ. ಬಳಿಕ ನಗದು ಹಣ ನೀಡಿ ತೆರಳುವ ಲೇನ್ ಮೂಲಕ ತೆರಳಿ ಸರದಿ ಸಾಲಿನಲ್ಲಿ ಹಣ ನೀಡಿ ಮುಂದೆ ಸಾಗಿದ್ದಾರೆ. ಈ ಕುರಿತು ಟೋಲ್ ಗೇಲ್‌ನಲ್ಲಿ ವಿಚಾರಿಸಿದ್ದಾರೆ. ಬಳಿಕ ಗ್ರಾಹಕರ ಕಚೇರಿಗೆ ಕರೆ ಮಾಡಿ ದೂರು ದಾಖಲಿಸಿದ್ದಾರೆ.

ಇದನ್ನೂ ಓದಿ: ಮಂಗಳೂರು: ಫಾಸ್ಟ್‌ಟ್ಯಾಗ್ ಇಲ್ಲದೆಯೂ ನೀವಿಲ್ಲಿ ಸಂಚರಿಸಬಹುದು..!.

ವೈದ್ಯರ ರೀತಿಯಲ್ಲಿ ಹಲವು ದೂರುಗಳು ದಾಖಲಾಗಿತ್ತು. ಹೀಗಾಗಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ(NHAI) ತನಿಖೆ ನಡೆಸಿತು. ಡಿಸೆಂಬರ್ 24ರಂದು ಹಲವರ ಫಾಸ್ಟ್ ಟ್ಯಾಗ್ ಖಾತೆಯಿಂದ ಹಣ ಕಡಿತವಾಗಿದೆ. ಫಾಸ್ಟ್ ಟ್ಯಾಗ್ ಟಾಟಾ ಎಂಟ್ರಿಯಲ್ಲಿನ ದೋಷದಿಂದ ಈ ರೀತಿ ಆಗಿದೆ ಎಂದು  NHAI ತಿಳಿಸಿದೆ. ಇಷ್ಟೇ ಅಲ್ಲ, ಹಣ ಕಳೆದುಕೊಂಡವರು ತಮ್ಮ ತಮ್ಮ ಫಾಸ್ಟ್ ಟ್ಯಾಗ್ ಕಂಪನಿಗಳಿಗೆ ದೂರು ನೀಡಿ ಹಣ ವಾಪಾಸ್ ಪಡೆಯಬಹುದು ಎಂದಿದೆ.

ಕೆಲವು ಬಾರಿ ಫಾಸ್ಟ್ ಟ್ಯಾಗ್ ಖಾತೆಯಲ್ಲಿ ಈ ರೀತಿ ದೋಷಗಳು ಸಂಭವಿಸುವ ಸಾಧ್ಯತೆ ಇದೆ. ಇಂತಹ ಸಂದರ್ಭದಲ್ಲಿ ಗ್ರಾಹಕರು ಫಾಸ್ಟ್ ಟ್ಯಾಗ ಹೆಲ್ಪ್ ಲೈನ್ ನಂಬರ್‌ಗೆ ಕರೆ ಮಾಡಿ ಹಣ ಮರಳಿ ಪಡೆಯಬಹುದು. ತಮ್ಮ ತಮ್ಮ ಫಾಸ್ಟ್ ಟ್ಯಾಗ್ ಗ್ರಾಹಕರ ಕಚೇರಿಗೆ ದೂರು ನೀಡಿದರೆ, ಹಣ ಮರಳಿ ಪಡೆಯಬಹುದು.

ಫಾಸ್ಟ್ ಟ್ಯಾಗ್ ಹೆಲ್ಪ್ ಲೈನ್ ನಂಬರ್:
ಐಸಿಐಸಿ ಬ್ಯಾಂಕ್: 18602100104
ಎಕ್ಸಿಸ್ ಬ್ಯಾಂಕ್: 18001035577
ಐಡಿಎಫ್‌ಸಿ ಬ್ಯಾಂಕ್: 18002669970
ಎಸ್‌ಬಿಐ:1800110018
ಹೆಚ್‌ಡಿಎಫ್‌ಸಿ: 18001201243
ಸಿಂಡಿಕೇಟ್: 18004250585
ಪೇಟಿಎಂ:18001026480
ಕರೂರ್ ವೈಶ್ಯಾ:18001021916
ಪಿಎನ್‌ಬಿ: 08067295310

ಇಂಡಿನ್ ಹೈವೇ ಮ್ಯಾನೇಜ್ಮೆಂಟ್ ಕಂಪನಿ ಲಿಮಿಟೆಡ್: 1033

click me!