ಅತ್ಯಂತ ಕಡಿಮೆ ಬೆಲೆಯ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ!

By Web Desk  |  First Published Feb 25, 2019, 3:27 PM IST

ಅವನ್ ಮೋಟಾರ್ಸ್ ನೂತನ XERO PLUS ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ ಮಾಡಿದೆ. ಇದು ಭಾರತದ ಅತ್ಯಂತ ಕಡಿಮೆ ಬೆಲೆಯ ಸ್ಕೂಟರ್ ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿದೆ. ಇಲ್ಲಿದೆ ಅವನ್ ಮೋಟಾರ್ಸ್ ಬಿಡುಗಡೆ ಮಾಡಿರುವ ನೂತನ ಸ್ಕೂಟರ್ ವಿವರ.


ಮುಂಬೈ(ಫೆ.25): ಪುಣೆ ಮೂಲದ ಅವನ್ ಮೋಟಾರ್ಸ್ ಭಾರತದ ಅತ್ಯಂತ ಕಡಿಮೆ ಬೆಲೆಯ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ ಮಾಡಿದೆ. ಅವನ್ ಮೋಟಾರ್ಸ್ ನೂತನ ಕ್ಸಿರೋ ಪ್ಲಸ್(XERO PLUS)ಎಲೆಕ್ಟ್ರಿಕ್ ಸ್ಕೂಟರ್ ಭಾರತದ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. ಎರಡು ಲಿಥಿಂಯ- ಇಯಾನ್ ಬ್ಯಾಟರಿ ಪ್ಯಾಕ್ ಹೊಂದಿರುವ ನೂತನ ಕಾರು ಭಾರತದಲ್ಲಿ ಸಂಚಲನ ಮೂಡಿಸಲಿದೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: ಮಾರುತಿ ಸುಜುಕಿ ಬಿಡುಗಡೆ ಮಾಡುತ್ತಿದೆ ಅತ್ಯಂತ ಕಡಿಮೆ ಬೆಲೆ ಎಲೆಕ್ಟ್ರಿಕ್ ಕಾರು

Latest Videos

undefined

ನೂತನ ಅವನ್ XERO PLUS ಸ್ಕೂಟರ್ ಬೆಲೆ 47,000 ರೂಪಾಯಿ. ಒಂದು ಬಾರಿ ಚಾರ್ಜ್ ಮಾಡಿದರೆ 110 ಕಿ.ಮೀ ಪ್ರಯಾಣ ಮಾಡಬಹುದು. ಎರಡು ಬ್ಯಾಟರಿ ಇರುವುದರಿಂದ ಒಂದು ಬ್ಯಾಟರಿ ಗರಿಷ್ಠ 60 ಕಿ.ಮೀ ಪ್ರಯಾಣ ಒದಗಿಸಲಿದೆ. ಎರಡು ಬ್ಯಾಟರಿಗಳಿಂದ ಒಟ್ಟು 110 ಕಿ.ಮೀ ಪ್ರಯಾಣ ರೇಂಜ್ ನೀಡಲಿದೆ.

 

Go the extra mile with the Xero+. Ride up to 110 km on every charge. pic.twitter.com/5MLsjYqBSX

— Avan Motors India (@IndiaAvan)

 

ಇದನ್ನೂ ಓದಿ: ರಿಜಿಸ್ಟ್ರೇಶನ್, ರೋಡ್ ಟ್ಯಾಕ್ಸ್ ಇಲ್ಲ- ಎಲೆಕ್ಟ್ರಿಕ್ ಕಾರಿಗೆ ಕೇಂದ್ರದ ಬಂಪರ್ ಗಿಫ್ಟ್!

ಬಿಳಿ, ನೀಲಿ ಹಾಗೂ ಕೆಂಪು ಬಣ್ಣಗಳಲ್ಲಿ ನೂತನ ಅವನ್ XERO PLUS ಸ್ಕೂಟರ್ ಲಭ್ಯವಿದೆ. ಇದರ ಗರಿಷ್ಠ ವೇಗ 35 kmph.ಮುಂಭಾಗದ ಚಕ್ರ ಡಿಸ್ಕ್ ಬ್ರೇಕ್ ಹೊಂದಿದ್ದರೆ,  ರೇರ್ ಡ್ರಮ್ ಬ್ರೇಕ್ ಸಿಸ್ಟಮ್ ಹೊಂದಿದೆ. ಸುಲಭ ಚಾರ್ಜಿಂಗ್ ವ್ಯವಸ್ಥೆ ಹೊಂದಿದೆ. ಚಾರ್ಜಿಂಗ್ ಸ್ಟೇಶನ್‌ಗಳಲ್ಲಿ ಚಾರ್ಜ್ ಮಾಡಬಹುದು. ಇನ್ನು ಬ್ಯಾಟರಿ ತೆಗೆದು ಮನೆಯಲ್ಲಿರೋ ಪ್ಲಗ್ ಮೂಲಕವೂ ಚಾರ್ಜ್ ಮಾಡೋ ಸೌಲಭ್ಯವಿದೆ.

click me!