ರಾಜಧಾನಿ ರಸ್ತೆಯಲ್ಲಿ ಪ್ರತಿ ದಿನ ಓಡಾಡುತ್ತಿದೆ 1.09 ಕೋಟಿ ವಾಹನ !

By Web Desk  |  First Published Feb 23, 2019, 9:15 PM IST

ವರ್ಷದಿಂದ ವರ್ಷಕ್ಕೆ ವಾಹನಗಳ ಸಂಖ್ಯೆ ಹೆಚ್ಚುತ್ತಿದೆ. ಹೀಗಾಗಿ ಮಾಲಿನ್ಯ ಸಮಸ್ಯೆ, ಟ್ರಾಫಿಕ್ ಸಮಸ್ಯೆ, ಇಂಧನ ಸಮಸ್ಯೆ, ಆರೋಗ್ಯ ಸಮಸ್ಯೆ ತೀವ್ರವಾಗಿ ತಲೆದೋರಿದೆ. ಇದರ ಬೆನ್ನಲ್ಲೇ ರಾಷ್ಟ್ರ ರಾಜಧಾನಿಯಲ್ಲಿರೋ ವಾಹನ ಸಂಖ್ಯೆ ಬಹಿರಂಗವಾಗಿದು. ಇದು ಕೂಡ ಎಚ್ಚರಿಕೆಯ ಕರೆ ಗಂಟೆ ಭಾರಿಸುತ್ತಿದೆ.


ನವದೆಹಲಿ(ಫೆ.23): ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಬರೋಬ್ಬರಿ 1.09 ಕೋಟಿ ವಾಹನಗಳು ಪ್ರತಿ ದಿನ ಓಡಾಡುತ್ತಿದೆ ಅನ್ನೋ ಅಂಕಿ ಅಂಶ ಬಯಲಾಗಿದೆ. 2018-19 ಸಾಲಿನಲ್ಲಿ ಖಾಸಿಗಿ ಸಂಸ್ಥೆ ನಡೆಸಿದ ಸಮೀಕ್ಷೆ ಬಹಿರಂಗಗೊಂಡಿದೆ. ಈ ಸರ್ವೆ ಪ್ರಕಾರ ದೆಹಲಿ ಬರೋಬ್ಬರಿ 70 ಲಕ್ಷ ದ್ವಿಚಕ್ರವಾಹನಗಳು ಓಡಾಡುತ್ತಿದೆ ಅನ್ನೋದು ಸಮೀಕ್ಷೆಯಲ್ಲಿ ಹೇಳಲಾಗಿದೆ.

ಇದನ್ನೂ ಓದಿ: ಆ್ಯಂಬುಲೆನ್ಸ್‌ ಬಂದಾಗ ಪಾಲಿಸಬೇಕಾದ ರಸ್ತೆ ನಿಯಮಗಳೇನು?

Tap to resize

Latest Videos

2017-18ರ ಸಾಲಿಗೆ ಹೋಲಿಸಿದರೆ 2018-19ರ ಸಾಲಿನಲ್ಲಿ ಕಾರು ಕೊಳ್ಳುವವರ ಸಂಖ್ಯೆ ಶೇಕಡಾ 8.13 ರಷ್ಟು ಇಳಿಕೆಯಾಗಿದೆ.  ಕಾರು ಮತ್ತು ಜೀಪುಗಳ ಸಂಖ್ಯೆ 32,46,637, ಆಟೋ ರಿಕ್ಷಾ ಸಂಖ್ಯೆ 1,13,074 ಹಾಗೂ 70,78,428 ದ್ವಿಚಕ್ರವಾಹನಗಳು ದೆಹಲಿ ರಸ್ತೆಯಲ್ಲಿ ಪ್ರತಿ ನಿತ್ಯ ಓಡಾತ್ತಿದೆ ಅನ್ನೋದು ಸಮೀಕ್ಷೆ ಹೇಳಿದೆ.

ಇದನ್ನೂ ಓದಿ: ಮಹಿಳೆಯ ಟೆಸ್ಟ್ ಡ್ರೈವ್‌ಗೆ ಶೋ ರೂಂ, ಐ20 ಕಾರು ಪುಡಿ ಪುಡಿ!

ದೆಹಲಿ ಮಾತ್ರವಲ್ಲ ಬೆಂಗಳೂರಿನಲ್ಲೂ ಗರಿಷ್ಟ  ವಾಹನಗಳಿವೆ. 2017ರ ಸರ್ವೆ ಪ್ರಕಾರ ಬೆಂಗಳೂರಿನಲ್ಲಿ 70 ಲಕ್ಷಕ್ಕೂ ಹೆಚ್ಚು ವಾಹನಗಳಿವೆ ಅನ್ನೋ ಅಂಕಿ ಅಂಶ ಬಯಲಾಗಿತ್ತು. ಇದೀಗ ಬೆಂಗಳೂರಿನಲ್ಲೂ ವಾಹನಗಳ ಸಂಖ್ಯೆ  1 ಕೋಟಿ ಗಡಿ ಮೀರಿರುವ ಎಲ್ಲಾ ಸಾಧ್ಯತೆ ಇದೆ. 

click me!