ಪೊರ್ಶೆ ಮಕಾನ್ ಫೆಸ್‌ಲಿಫ್ಟ್ ಬಿಡುಗಡೆ; ಬೆಲೆ 70 ಲಕ್ಷ ರೂ!

By Web DeskFirst Published Jul 29, 2019, 3:03 PM IST
Highlights

ಪೊರ್ಶೆ ಮಕಾನ್ ಫೇಸ್‌ಲಿಫ್ಟ್ ಕಾರು ಬಿಡುಗಡೆಯಾಗಿದೆ. ಹೊಸ ವಿನ್ಯಾಸ, ಹೆಚ್ಚುವರಿ ಫೀಚರ್ಸ್ ಹೊಂದಿರುವ ಪೊರ್ಶೆ ಮಕಾನ್ 2 ಎಂಜಿನ್ ವೇರಿಯೆಂಟ್ ಲಭ್ಯವಿದೆ. ನೂತನ ಕಾರಿನ ಹೆಚ್ಚಿನ ಮಾಹಿತಿ ಇಲ್ಲಿದೆ.

ನವದೆಹಲಿ(ಜು.29): ದುಬಾರಿ ಹಾಗೂ ಐಷಾರಾಮಿ ಕಾರುಗಳಲ್ಲಿ ಮುಂಚೂಣಿಯಲ್ಲಿರುವ ಪೊರ್ಶೆ ಇದೀಗ ಮಕಾನ್ ಫೇಸ್‌ಲಿಫ್ಟ್ ಕಾರು ಬಿಡುಗಡೆ ಮಾಡಿದೆ. 2018ರಲ್ಲಿ ವಿಶ್ವಕ್ಕೆ ಪರಿಚಯಿಸಲಾದ ಪೊರ್ಶೆ ಮಕಾನ್ ಫೇಸ್‌ಲಿಫ್ಟ್ ಇದೀಗ ಭಾರತದಲ್ಲಿ ಬಿಡುಗಡೆಯಾಗಿದೆ. ನೂತನ ಕಾರಿನ ಬೆಲೆ 69.98 ಲಕ್ಷ ರೂಪಾಯಿಯಿಂದ ಆರಂಭಗೊಳ್ಳುತ್ತಿದೆ. ಸ್ಟಾಂಡರ್ಟ್ ವರ್ಶನ್  ಕಾರಿನ ಬೆಲೆ 85.03 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ).

 

All those who have been asking of the price point being right, yes you read that & heard that right.
Porsche Macan launches in India at 69.98* lakhs.

RT if you finally believe it. pic.twitter.com/TUtk51dq0j

— Porsche India (@Porsche_India)

ಇದನ್ನೂ ಓದಿ: ಇನೋವಾ ಹಿಂದಿಕ್ಕಿದ ಮಾರುತಿ ಎರ್ಟಿಗಾ; ಗರಿಷ್ಠ ಮಾರಾಟವಾದ MPV ಕಾರು!

ಪೊರ್ಶೆ ಮಕಾನ್ ಬೇಬಿ SUV ಕಾರು ಆಕರ್ಷಕ ವಿನ್ಯಾಸ ಹೊಂದಿದೆ. ಮುಂಭಾಗದಲ್ಲಿ ಕೊಂಚ ಅಗಲವಾಗಿದ್ದು, ರೆಟ್ರೋ ಶೈಲಿಯನ್ನು ನೆನಪಿಸುವಂತಿದೆ. ನೂತನ ಗ್ರಿಲ್ ಈ ಕಾರಿಗೆ ಸ್ಪೋರ್ಟ್ ಲುಕ್ ನೀಡಿದೆ. LED ಶೈಲಿಯಲ್ಲೂ ಬದಲಾವಣೆ ಮಾಡಲಾಗಿದೆ. 4 ಹೊಸ ಬಣ್ಣಗಳಲ್ಲಿ ನೂತನ ಕಾರು ಲಭ್ಯವಿದೆ. 10.9 ಇಂಚಿನ ಇನ್ಫೋಟೈನ್‌ಮೆಂಟ್ ಡಿಸ್‌ಪ್ಲೆ ಹಾಗೂ ಡ್ಯಾಶ್‌ಬೋರ್ಡ್ ಕಾರಿನ ಒಳ ವಿನ್ಯಾಸದ ಅಂದವನ್ನು ಹೆಚ್ಚಿಸಿದೆ.

ಇದನ್ನೂ ಓದಿ: ವಾಹನ ರಿಜಿಸ್ಟ್ರೇಶನ್ ಶುಲ್ಕ ಏರಿಕೆ; ಕಾರು, ಬೈಕ್ ಈಗ ದುಬಾರಿ!

ಪೊರ್ಶೆ ಮಕಾನ್ ಫೇಸ್‌ಲಿಫ್ಟ್ ಕಾರಿನಲ್ಲಿ 2 ಎಂಜಿನ್ ವೇರಿಯೆಂಟ್ ಲಭ್ಯವಿದೆ. 2.0 ಲೀಟರ್ ಟರ್ಬೋ ಪೆಟ್ರೋಲ್ ಮೋಟಾರ್ ವೇರಿಯೆಂಟ್, 247 bhp ಪವರ್ ಹಾಗೂ  370 Nm ಪೀಕ್ ಟಾರ್ಕ್ ಉತ್ಪಾದಿಸಲಿದೆ. 3.0-ಲೀಟರ್ V6 ಎಂಜಿನ್ ವೇರಿಯೆಂಟ್, 345 bhp ಪವರ್ ಹಾಗೂ 480 Nm ಪೀಕ್ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ.  ಎರಡೂ ವೇರಿಯೆಂಟ್ ಕಾರುಗಳು 7-ಸ್ಪೀಡ್ ಡ್ಯುಯೆಲ್ ಕ್ಲಚ್ ಆಟೋಮ್ಯಾಟಿಕ್  ಹೊಂದಿದೆ.


 

click me!