ಶಬರಿಮಲೆಗೆ ತೆರಳೋ ಯಾತ್ರಾರ್ಥಿಗಳಿಗೆ ಮಾಲಿನ್ಯ ರಹಿತ ಇ ಬಸ್ ಸೇವೆ ಲಭ್ಯವಿದೆ. ಮಾಲಿನ್ಯ ಹಾಗೂ ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆಯಿಂದ ಎಲೆಕ್ಟ್ರಿಕ್ ವಾಹನಕ್ಕೆ ಹೆಚ್ಚು ಒತ್ತು ನೀಡಲಾಗಿತ್ತಿದೆ. ಇದೀಗ ದಕ್ಷಿಣ ಭಾರತದಲ್ಲಿ ಇ ಬಸ್ ವಾಣಿಜ್ಯ ಸೇವೆ ಆರಂಭಿಸಿದೆ.
ತಿರುವನಂತಪುರಂ(ನ.19): ದಕ್ಷಿಣ ಭಾರತದಲ್ಲಿ ಮೊತ್ತ ಮೊದಲ ಎಲೆಕ್ಟ್ರಿಕ್ ಬಸ್ ಸೇವೆ ಆರಂಭಗೊಂಡಿದೆ. ಪವಿತ್ರ ಕ್ಷೇತ್ರ ಶಬರಿಮಲೆಯಲ್ಲಿ ಇ ಬಸ್ ಸೇವೆ ಕಾರ್ಯರಂಭ ಮಾಡಿದೆ. ಹೀಗಾಗಿ ಶಬರಿಮಲೆ ತೆರಳೋ ಯಾತ್ರಾರ್ಥಿಗಳು ಇನ್ಮುಂದೆ ಮಾಲಿನ್ಯ ರಹಿತ ಬಸ್‌ನಲ್ಲಿ ಪ್ರಯಾಣಿಸಬುಹುದು.
ಒಲೆಕ್ಟ್ರಾ ಬಿವೈಡಿ ಕಂಪೆನಿ ತಯಾರಿಸಿರುವ ಇಬಸ್ ಕೆ17 ಮಾಡೆಲ್ ಬಸ್ ಶಬರಿಮಲೆಯಲ್ಲಿ ಸೇವೆ ಆರಂಭಿಸಿದೆ. ಕಳೆದೊಂದು ವರ್ಷ ಒಲೆಕ್ಟ್ರಾ ಬಿವೈಡಿ ಕಂಪೆನಿಯ ಇದೆ ಮಾಡಲೆ ಬಸ್ ಹಿಮಾಚಲ ಪ್ರದೇಶದ ಕುಲು-ಮನಾಲಿ-ರೋಹ್ಟಂಗ್ ರಸ್ತೆಗಳಲ್ಲಿ ಸೇವೆ ಆರಂಭಿಸಿತ್ತು. ಇದೀಗ ಕೇರಳದಲ್ಲಿ ಮಾಲಿನ್ಯ ರಹಿತಿ ಸೇವೆಗೆ ಮುಂದಾಗಿದೆ.
undefined
ವಿಶೇಷ ಅಂದರೆ ಈ ಎಲೆಕ್ಟ್ರಿಕ್ ಬಸ್ ಸಂಪೂರ್ಣವಾಗಿ ಭಾರತದಲ್ಲೇ ತಯಾರಿಸಲಾಗಿದೆ. ಒಲೆಕ್ಟ್ರಾ ಗ್ರೀನ್‌ಟೆಕ್ ಸಂಸ್ಥೆ ಹಾಗೂ ಬಿವೈಡಿ ಆಟೋ ಇಂಡಸ್ಟ್ರಿ ಕಂಪೆನಿ ಜೊತೆಗಿನ ಸಹಯೋಗದೊಂದಿಗೆ ಈ ಎಲೆಕ್ಟ್ರಿಕ್ ಬಸ್ ತಯಾರಿಸಲಾಗಿದೆ. 32+1(ಡ್ರೈವರ್) ಜನರನ್ನ ಹೊತ್ತೊಯ್ಯುವ ಸಾಮರ್ಥ್ಯ ಹೊಂದಿರುವ ಎಲೆಕ್ಟ್ರಿಕ್ ಬಸ್ ವಾಣಿಜ್ಯ ಸೇವೆ ಆರಂಭಿಸಿದೆ.
ಒಂದು ಬಾರಿ ಚಾರ್ಜ್ ಮಾಡಿದರೆ 250 ಕಿ.ಮೀ ಪ್ರಯಾಣಿಸಬಹುದು. ಸಂಪೂರ್ಣ ಚಾರ್ಜ್ 2-3 ಗಂಟೆ ತೆಗೆದುಕೊಳ್ಳುತ್ತೆ. ಸದ್ಯ ಕೇರಳ ಸರ್ಕಾರದ ಜೊತೆಗೆ ಒಪ್ಪಂದ ಮಾಡಿಕೊಂಡಿರುವ ಒಲೆಕ್ಟ್ರಾ ಬಿವೈಡಿ ಕಂಪೆನಿ ಶೀಘ್ರದಲ್ಲೇ ದಕ್ಷಿಣ ಭಾರತದ ಇತರ ರಾಜ್ಯಗಳಲ್ಲಿ ಎಲೆಕ್ಟ್ರಿಕ್ ಬಸ್ ವಿತರಿಸಲು ಮುಂದಾಗಿದೆ.
ಬೆಂಗಳೂರು, ದೆಹಲಿ, ರಾಜ್‌ಕೋಟ್ ಸೇರಿದಂತೆ ಇತರ ಕೆಲ ನಗರಗಳಲ್ಲಿ 12 ಮೀಟರ್ ಉದ್ದದ ಇ ಬಸ್ ಕೆ9 ಬಸ್‌ಗಳ ರೋಡ್ ಟೆಸ್ಟ್ ನಡೆಸಲಾಗಿದೆ. ಹೀಗಾಗಿ ಶೀಘ್ರದಲ್ಲೇ ಬೆಂಗಳೂರಿನಲ್ಲೂ ಎಲೆಕ್ಟ್ರಿಕ್ ಬಸ್ ಸೇವೆ ಆರಂಭವಾಗೋದರಲ್ಲಿ ಯಾವುದೇ ಅನುಮಾನವಿಲ್ಲ.