ಭಾರತದಲ್ಲಿ ಮೊಟ್ಟ ಮೊದಲ ಬಾರಿಗೆ ವಿಂಟೇಜ್ ಕಾರು ಹರಾಜು!

Published : Nov 19, 2018, 11:48 AM IST
ಭಾರತದಲ್ಲಿ ಮೊಟ್ಟ ಮೊದಲ ಬಾರಿಗೆ ವಿಂಟೇಜ್ ಕಾರು ಹರಾಜು!

ಸಾರಾಂಶ

ಭಾರತದಲ್ಲಿ ಇದೇ ಮೊದಲ ಬಾರಿಗೆ ಹಳೇ ವಿಂಟೇಜ್ ಕಾರುಗಳ ಹರಾಜು ನಡೆಯುತ್ತಿದೆ. ಇದೆ ನವೆಂಬರ್ 20 ಹಾಗೂ 21 ರಂದು ಹರಾಜು ನಡೆಯಲಿದೆ. ಹರಾಜಿನಲ್ಲಿರೋ ಕಾರುಗಳು ಯಾವುದು? ಇಲ್ಲಿದೆ ಹೆಚ್ಚಿನ ವಿವರ.

ಮುಂಬೈ(ನ.19): ವಿದೇಶಗಳಲ್ಲಿ ಹಳೆ ವಿಂಟೇಜ್ ಕಾರುಗಳ ಹರಾಜು ನಡೆಯುತ್ತಲೇ ಇರುತ್ತೆ. ಆದರೆ ಭಾರತದಲ್ಲಿ ಇದು ತೀರಾ ವಿರಳ. ಇದೀಗ ಮೊಟ್ಟ ಮೊದಲ ಬಾರಿಗೆ ಹಳೇ ಕ್ಲಾಸಿಕ್ ಹಾಗೂ ವಿಂಟೇಜ್ ಕಾರುಗಳ ಹರಾಜು ನಡೆಯಲಿದೆ. ವಿಶೇಷ ಅಂದರೆ ಆನ್‌ಲೈನ್ ಮೂಲಕ ಹರಾಜು ನಡೆಯಲಿದೆ.

ನವೆಂಬರ್ 20 ಹಾಗೂ 21 ರಂದು ಆನ್‌ಲೈನ್ ಮೂಲಕ ವಿಂಟೇಜ್ ಕಾರುಗಳ ಹರಾಜು ನಡೆಯಲಿದೆ. ಹರಾಜಿನಲ್ಲಿ ಭಾರತದಲ್ಲಿ ಬಳಕೆಯಾದ ಹಳೇ 10 ಕಾರುಗಳನ್ನ ಇಡಲಾಗಿದೆ. ಮುಂಬೈನ ಆಷ್ಠಗುರು ಆಕ್ಷನ್ ಹೌಸ್ ಈ ಹರಾಜು ನಡೆಸಲಿದೆ.

ಅಷ್ಠಗುರು(www.astaguru.com) ವೆಬ್‌ಸೈಟ್ ಮೂಲಕ ಹಳೇ ವಿಂಟೇಜ್ ಕಾರುಗಳ ಹರಾಜು ನಡೆಯಲಿದೆ. 1936 ಕ್ರಿಸ್ಲರ್ ಏರ್‌ಸ್ಟ್ರೀಮ್, 1947 ರೋಲ್ಸ್ ರಾಯ್ಸ್, 1963 ಫಿಯೆಟ್ 1100, 1960 ಹಿಂದೂಸ್ತಾನ್ ಅಂಬಾಸಿಡರ್, 1969 ಫೋಕ್ಸ್‌ವ್ಯಾಗನ್ ಬೆಂಟ್ಲಿ, ಮರ್ಸಡೀಸ್ ಬೆಂಜ್ 170s 1957 ಸ್ಟುಡ್‌ಬೇಕರ್ ಸೇರಿದಂತೆ ಹಲವು ವಿಂಟೇಜ್ ಕಾರುಗಳು ಹರಾಜಿಗೆ ಇಡಲಾಗಿದೆ.

PREV
click me!

Recommended Stories

ಇದು ಬರೀ ಡಿಸೆಂಬರ್‌ ಅಲ್ಲ, ಕಾರ್‌ ಡಿಸ್ಕೌಂಟ್‌ ಡಿಸೆಂಬರ್‌; ಈ ಐದು ಕಾರ್‌ಗಳಿಗೆ ಇದೆ ಭರ್ಜರಿ ಆಫರ್‌!
ಚಾಲನೆಯಲ್ಲಿದ್ದಾಗಲೇ ಪ್ರಜ್ಞೆ ಕಳೆದುಕೊಂಡ ಚಾಲಕ: ವಿಮಾನ ಟೇಕಾಫ್‌ದಂತೆ ಮೇಲೇರಿದ ಮರ್ಸಿಡಿಸ್: ವೀಡಿಯೋ