ವೆಸ್ಪಾ ಅರ್ಬನ್ ಕ್ಲಬ್ 125 ಸ್ಕೂಟರ್ ಬಿಡುಗಡೆ-5 ವೇರಿಯೆಂಟ್ ಲಭ್ಯ!

By Web Desk  |  First Published May 9, 2019, 12:17 PM IST

ವೆಸ್ಪಾ ಅರ್ಬನ್ ಕ್ಲಬ್ 125 ನೂತನ ಸ್ಕೂಟರ್ ಬಿಡುಗಡೆಯಾಗಿದೆ. ಪಿಯಾಗ್ಗೊ ಕಂಪನಿಯ ಈ ಸ್ಕೂಟರ್ ವಿಶೇಷತೆ ಏನು?ಇದರ ಬೆಲೆ ಎಷ್ಟು? ಇಲ್ಲಿದೆ ವಿವರ.


ಪುಣೆ(ಮೇ.09): ಪಿಯಾಗ್ಗೊ ಇಂಡಿಯಾ ಕಂಪನಿಯ ನೆಚ್ಚಿನ ಸ್ಕೂಟರ್ ವೆಸ್ಪಾ ಇದೀಗ  ಹೊಸ ಅವತಾರದಲ್ಲಿ ಬಿಡುಗಡೆಯಾಗಿದೆ. ನೂತನ ವೆಸ್ಪಾ ಅರ್ಬನ್ ಕ್ಲಬ್ 125 ಸ್ಕೂಟರ್ ಬಿಡುಗಡೆ ಮಾಡಲಾಗಿದೆ. 5 ವೇರಿಯೆಂಟ್ ಹಾಗೂ 4 ಬಣ್ಣಗಳಲ್ಲಿ ನೂತನ ವೆಸ್ಪಾ 125 ಸ್ಕೂಟರ್ ಲಭ್ಯವಿದೆ. ಎಪ್ರಿಲಾಯ 125 ಸ್ಟ್ರೊಮ್ ಬಿಡುಗಡೆಯಾದ ಬೆನ್ನಲ್ಲೇ ಇದೀಗ ವೆಸ್ಪಾ ಕೂಡ ಮಾರುಕಟ್ಟೆ ಪ್ರವೇಶಿಸಿದೆ.

ಇದನ್ನೂ ಓದಿ: ಹೀರೋ ಮ್ಯಾಸ್ಟ್ರೋ ಎಡ್ಜ್ 125 ಸ್ಕೂಟರ್ ಬಿಡುಗಡೆ ದಿನಾಂಕ ಪ್ರಕಟ!

Tap to resize

Latest Videos

undefined

ನೂತನ ವೆಸ್ಪಾ ಅರ್ಬನ್ ಕ್ಲಬ್ 125 ಸ್ಕೂಟರ್ ಬೆಲೆ 72,190 ರೂಪಾಯಿ.  ನೂತನ ಸ್ಕೂಟರ್ 125 cc ಏರ್-ಕೂಲ್ಡ್ ಎಂಜಿನ್ ಹೊಂದಿದ್ದು,  9.6 hp ಪವರ್ಲ  ಹಾಗೂ 9.9 Nm ಪೀಕ್ ಟಾರ್ಕ್ ಉತ್ಪಾದಿಸಲಿದೆ.  ಫ್ರಂಟ್ ಹಾಗೂ ರೇರ್ ಡ್ರಮ್ ಬ್ರೇಕ್ ಹೊಂದಿದೆ (ಫ್ರಂಟ್ 150 mm ಹಾಗೂ  140 mm ರೇರ್).  CBS (ಕಾಂಬಿ ಬ್ರೇಕಿಂಗ್ ಸಿಸ್ಟಮ್) ಬ್ರೇಕ್ ಹೊಂದಿದೆ. 

ಇದನ್ನೂ ಓದಿ: KTM ಡ್ಯೂಕ್ -RC ಬೆಲೆ ಹೆಚ್ಚಳ- ಇಲ್ಲಿದೆ ನೂತನ ದರ ಪಟ್ಟಿ!

ಹಳಿದಿ, ಕೆಂಪು, ನೀಲಿ ಹಾಗೂ ಗ್ರೇ ಬಣ್ಣಗಳಲ್ಲಿ ನೂತನ ನೂತನ ವೆಸ್ಪಾ ಅರ್ಬನ್ ಕ್ಲಬ್ 125 ಸ್ಕೂಟರ್ ಲಭ್ಯವಿದೆ. ನೂತನ ಸ್ಕೂಟರ್ ಡೆಲಿವರಿ ಕೂಡ ಆರಂಭಗೊಂಡಿದೆ. ಹೀಗಾಗಿ ಬುಕ್ ಮಾಡೋ ಗ್ರಾಹಕರಿಗೆ ಹೆಚ್ಚಿನ ಕಾಯುವಿಕೆ ಇಲ್ಲದೆ ವೆಸ್ಪಾ 125 ಸ್ಕೂಟರ್ ಸಿಗಲಿದೆ. 

click me!