ಹೀರೋ ಮ್ಯಾಸ್ಟ್ರೋ ಎಡ್ಜ್ 125 ಸ್ಕೂಟರ್ ಬಿಡುಗಡೆಗೆ ರೆಡಿಯಾಗಿದೆ. ನೂತನ ಸ್ಕೂಟರ್ ಬೆಲೆ, ವಿಶೇಷತೆ ಏನು? ಇಲ್ಲಿದೆ ವಿವರ.
ನವದೆಹಲಿ(ಮೇ.09): ಹೀರೋ ಮೋಟಾರ್ ಕಾರ್ಪ್ ನೂತನ ಮ್ಯಾಸ್ಟ್ರೋ ಎಡ್ಜ್ 125 ಸ್ಕೂಟರ್ ಬಿಡುಗಡೆ ಮಾಡುತ್ತಿದೆ. ಮೇ.13 ರಂದು ಹೀರೋ ಮ್ಯಾಸ್ಟ್ರೋ ಎಡ್ಜ್ ಸ್ಕೂಟರ್ ಬಿಡುಗಡಯಾಗಲಿದೆ. 2018ರ ಆಟೋ ಎಕ್ಸ್ಪೋದಲ್ಲಿ ಪರಿಚಯಿಸಲಾದ ಹೀರೋ ಮ್ಯಾಸ್ಟ್ರೋ ಬಹುದಿನಗಳ ಬಳಿಕ ಬಿಡುಗಡೆಯಾಗುತ್ತಿದೆ. ಹಲವು ವಿಶೇಷತೆಗಳನ್ನೂ ಒಳಗೊಂಡಿದೆ.
undefined
ಇದನ್ನೂ ಓದಿ: ಬರುತ್ತಿದೆ TVS ಕ್ರಿಯಾನ್ ಎಲೆಕ್ಟ್ರಿಕ್ ಸ್ಕೂಟರ್ - 80KM ಮೈಲೇಜ್ ರೇಂಜ್!
ನೂತನ ಹೀರೋ ಮ್ಯಾಸ್ಟ್ರೋ ಎಡ್ಜ್ ಸ್ಕೂಟರ್ 125 cc ಸಿಂಗಲ್ ಸಿಲಿಂಡರ್, ಏರ್ ಕೂಲ್ಡ್ ಎಂಜಿನ್ ಹೊಂದಿದ್ದು, 8.5 bhp ಪವರ್ ಹಾಗೂ 10.2 Nm ಪೀಕ್ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ. ಡಿಜಿಟಲ್ ಎನಲಾಗ್ ಇನ್ಸ್‌ಸ್ಟ್ರುಮೆಂಟ್ ಕನ್ಸೋಲ್, ಸೈಡ್ ಸ್ಟಾಂಡ್ ಇಂಡಿಕೇಟರ್, ಸರ್ವೀಸ್ ರಿಮೈಂಡರ್ ಸೇರಿದಂತೆ ಹಲವು ಅತ್ಯಾಧುನಿಕ ಫೀಚರ್ಸ್ ನೂತನ ಸ್ಕೂಟರ್‌ನಲ್ಲಿ ಲಭ್ಯವಿದೆ.
ಇದನ್ನೂ ಓದಿ: 125 ಬೈಕ್ ಯಶಸ್ಸಿನ ಬಳಿಕ KTM ಡ್ಯೂಕ್ RC 125 ಶೀಘ್ರದಲ್ಲಿ ಬಿಡುಗಡೆ!
ನೂತನ ಮ್ಯಾಸ್ಟ್ರೋ ಎಡ್ಜ್ 125 ಸ್ಕೂಟರ್ ಬೆಲೆ 57,000 ರೂಪಾಯಿ(ಎಕ್ಸ್ ಶೋ ರೂಂ). ನೂತನ ಸ್ಕೂಟರ್ ಹೊಂಡಾ ಗ್ರೆಝಿಯಾ, ಟಿವಿಎಸ್ ಎನ್‌ಟಾರ್ಕ್, ಎಪಿಲಿಯಾ, 125 ವೆಸ್ಪಾ ವಿಎಕ್ಸ್ ಸೇರಿದಂತೆ 125 ಸ್ಕೂಟರ್‌ಗೆ ಪ್ರತಿಸ್ಪರ್ಧಿಯಾಗಿದೆ.