ಬೈಕ್ ಹಾಗೂ ಸ್ಕೂಟರ್ ಚಲಾಯಿಸುವಾಗಿ ಹೆಲ್ಮೆಟ್ ಕಡ್ಡಾಯ ನಿಯಮವನ್ನ ಗಾಳಿಗೆ ತೂರುವವರೇ ಹೆಚ್ಚು. ಇದೀಗ ಅಂಕಿ ಅಂಶಗಳು ಕೂಡ ಇದನ್ನೇ ಸಾರಿ ಹೇಳುತ್ತಿದೆ. ಜುಲೈನಿಂದ ಸೆಪ್ಟೆಂಬರ್‌ವರೆಗೆ ಹೆಲ್ಮೆಟ್ ಖಡ್ಡಾಯ ನಿಯಮ ಉಲ್ಲಂಘಿಸಿದವರ ಸಂಖ್ಯೆ ಎಷ್ಟು ಗೊತ್ತಾ? ಇಲ್ಲಿದೆ.
ದೆಹಲಿ(ಅ.30): ಸರ್ಕಾರ ಅದೆಷ್ಟೇ ನಿಯಮ ಜಾರಿಗೆ ತಂದರೂ ಪಾಲನೆ ಮಾಡುವವರ ಸಂಖ್ಯೆ ಕಡಿಮೆಯಾಗುತ್ತಿದೆಯಾ ಅನ್ನೋ ಅನುಮಾನ ಇದೀಗ ಕಾಡತೊಡಗಿದೆ. ಕಾರಣ ಜುಲೈನಿಂದ ಸೆಪ್ಟೆಂಬರ್‌ವರೆಗಿನ ವಾಹನ ಸವಾರರ ನಿಯಮ ಉಲ್ಲಂಘನೆ ಗರಿಷ್ಠ ದಾಖಲೆ ಬರೆದಿದೆ.
ಡ್ರಿಂಕ್ ಅಂಡ್ ಡ್ರೈವ್ ಸೇರಿದಂತೆ ಇತರ ನಿಯಮ ಉಲ್ಲಂಘನೆಗಳಿಗೆ ಹೋಲಿಸಿದರೆ, ಹೆಲ್ಮೆಟ್ ನಿರ್ಲಕ್ಷ್ಯ ಹಾಗೂ ಸೀಟ್ ಬೆಲ್ಟ್ ಹಾಕದೇ ಡ್ರೈವಿಂಗ್ ಕಳೆದ 3 ತಿಂಗಳಲ್ಲಿ ಗರಿಷ್ಠ ಪ್ರಮಾಣದ ಪ್ರಕರಣಗಳು ದಾಖಲಾಗಿದೆ.
undefined
ಜುಲೈನಿಂದ ಸೆಪ್ಟೆಂಬರ್‌ವರೆಗಿನ ಹೆಲ್ಮೆಟ್ ಕಡ್ಡಾಯ ನಿಯಮ ಉಲ್ಲಂಘನೆ 76,499 ಪ್ರಕರಣಗಳು ದಾಖಲಾಗಿದೆ. ಇನ್ನು ಸೀಟ್ ಬೆಲ್ಟ್ ಹಾಕದೇ ವಾಹನ ಚಲಾಯಿಸಿದ ಪ್ರಕರಣಗಳು 17,257. ಇತರ ನಿಯಮ ಉಲ್ಲಂಘನೆಗಳಿಗೆ ಹೋಲಿಸಿದರೆ ಈ ಬಾರಿ ಹೆಲ್ಮಟ್ ಕಡ್ಡಾಯ ಹಾಗೂ ಸೀಟ್ ಬೆಲ್ಟ್ ನಿಯಮ ಉಲ್ಲಂಘನೆ ಹೆಚ್ಚಾಗಿದೆ.
ಕಳೆದ ಮೂರು ತಿಂಗಳಲ್ಲಿ ಕುಡಿದು ವಾಹನ ಚಲಾಯಿಸಿ ಸಿಕ್ಕಿ ಬಿದ್ದ ಪ್ರಕರಣಗಳು 2,303. ಇದೀಗ ಪೊಲೀಸರಿಗೆ ನಿಯಮ ಪಾಲನೆಗೆ ಕಟ್ಟು ನಿಟ್ಟಿನ ಕ್ರಮಕ್ಕೆ ಮುಂದಾಗಿದ್ದಾರೆ. ಇಷ್ಟೇ ಅಲ್ಲ ದಂಡ ವಾಪತಿಯನ್ನ ಹೆಚ್ಚಿಸಲು ನಿರ್ಧರಿಸಲಾಗಿದೆ.