ನವದೆಹಲಿ ಮೂಲದ ಒಕಿನಾವ ರಿಡ್ಜ್ ಸ್ಕೂಟರ್ ಬಿಡುಗಡೆಯಾಗಿದೆ. ಮೊಬೈಲ್ ರೀತಿ ಸುಲಭ ಚಾರ್ಜಿಂಗ್, ಒಂದು ಬಾರಿ ಚಾರ್ಜ್‌ಗೆ 120 ಕೀಮಿ ಪ್ರಯಾಣ, ABSಬ್ರೇಕ್ ಸೇರಿದಂತೆ ಹಲವು ಫೀಚರ್ಸ್ ಹೊಂದಿದೆ. ಇಲ್ಲಿದೆ ಇದರ ಬೆಲೆ ಹಾಗೂ ಇತರ ಮಾಹಿತಿ.
ನವದೆಹಲಿ(ಅ.11): ಗುರುಗಾಂವ್ ಮೂಲದ ಎಲೆಕ್ಟ್ರಿಕಲ್ ದ್ವಿಚಕ್ರ ವಾಹನ ತಯಾರಿಕಾ ಕಂಪೆನಿ ಒಕಿನಾವ ನೂತನ ಎಲೆಕ್ಟ್ರಿಕಲ್ ಬೈಕ್ ಬಿಡುಗಡೆ ಮಾಡಿದೆ. ಒಕಿನಾವ್ ರಿಡ್ಜ್ ಪ್ಲಸ್ ಎಲೆಕ್ಟ್ರಿಕಲ್ ಬೈಕ್ ಇದೀಗ ಭಾರತದ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ.
undefined
ಲೀಥಿಯಂ ಹಾಗೂ ಇಯಾನ್ ಬ್ಯಾಟರಿ ಹೊಂದಿರುವ ಈ ಒಕಿನಾವ ರಿಡ್ಜ್ ಪ್ಲಸ್ ಸ್ಕೂಟರ್ ಬೆಲೆ 64,999 ರೂಪಾಯಿ(ಎಕ್ಸ್ ಶೋ ರೂಂ, ದಹೆಲಿ). 800 ವ್ಯಾಟ್, BLDC ವಾಟರ್ ಫ್ರೂಫ್ ಸ್ಕೂಟರ್ ಒಂದು ಬಾರಿ ಚಾರ್ಜ್ ಮಾಡಿದರೆ 120 ಕೀಮಿ ಕ್ರಮಿಸಲಿದೆ.
ಒಕಿನಾವ ಸ್ಟಾಂಡರ್ಸ್ ಸ್ಕೂಟರ್ ಬೇಸ್ ಬೆಲೆಗಿಂತ 21,00 ರೂಪಾಯಿ ಆಧಿಕವಾಗಿದೆ. ವಿಶೇಷ ಅಂದರೆ ಈ ಸ್ಕೂಟರ್ ಬ್ಯಾಟರಿಯನ್ನ ಹೊರ ತೆಗೆದು ಕೂಡ ಚಾರ್ಜ್ ಮಾಡಬಹುದು. ಆಫೀಸ್‌ನಲ್ಲಿ ಅಥವಾ ಮನೆ ಒಳಗಡೆ ಸ್ಕೂಟರ್ ಬ್ಯಾಟರಿ ಕೊಂಡೊಯ್ದು ಚಾರ್ಜ್ ಮಾಡಬಹುದಾಗಿದೆ.
ಮಾರುಕಟ್ಟೆಯಲ್ಲಿರುವ ಎಲೆಕ್ಟ್ರಿಕಲ್ ಸ್ಕೂಟರ್‌ಗೆ ಹೋಲಿಸಿದರೆ ಒಕಿನಾವ ಆಕರ್ಷಕ ವಿನ್ಯಾಸ ಹೊಂದಿದೆ. ಎರಡು ಬಣ್ಣಗಳಲ್ಲಿ ಈ ಎಲೆಕ್ಟ್ರಿಕಲ್ ಸ್ಕೂಟರ್ ಲಭ್ಯವಿದೆ. ಇದರ ಗರಿಷ್ಠ ವೇಗ 55 ಕೀಮಿ ಪ್ರತಿ ಗಂಟೆಗೆ.
ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಎಲೆಕ್ಟ್ರಾನಿಕ್ ಅಸಿಸ್ಟೆಡ್ ಬ್ರೇಕಿಂಗ್ ಸಿಸ್ಟಮ್(ABS) ಹೊಂದಿದೆ. ಕಳ್ಳತನ ಅಲರಾಮ್, ಕೀ ಲೆಸ್ ಎಂಟ್ರಿ, ಸೆಂಟ್ರಲ್ ಲಾಂಕಿಂಗ್ ಸೌಲಭ್ಯ ಹೊಂದಿದೆ.