ಜೀಪ್ ಕಂಪಾಸ್‌ ಪ್ಲಸ್ : ಮಳೆ ಗಾಜಿನ ಮೇಲೆ ಬಿದ್ದರೆ ಸಾಕು ವೈಪರ್ ತನ್ನಿಂತಾನೇ ಆನ್!

By Web Desk  |  First Published Oct 10, 2018, 8:29 PM IST

+ರೈನ್ ಸೆನ್ಸಿಂಗ್ ವೈಪರ್‌ಗಳು +ಸುರಕ್ಷತೆ ದೃಷ್ಟಿಯಿಂದ ಆರು ಏರ್‌ಬ್ಯಾಗ್‌ಗಳು +ಅಟೋಮ್ಯಾಟಿಕ್ ಹೆಡ್‌ಲ್ಯಾಂಪ್ +ಬುಕಿಂಗ್ ಆರಂಭ, ತಕ್ಷಣ ಡೆಲಿವರಿ
 


ಮಳೆ ಗಾಜಿನ ಬಿದ್ದರೆ ಸಾಕು ವೈಪರ್ ತನ್ನಿಂತಾನೇ ಆನ್ ಆಗುತ್ತದೆ. ಕತ್ತಲಾದರೆ ಸಾಕು ಹೆಡ್‌ಲೈಟ್ ಆಟೋಮ್ಯಾಟಿಕ್ ಆಗಿ ಆನ್ ಆಗುತ್ತದೆ. ಹೀಗೆ ಡಿಫರೆಂಟಾದ ಫೀಚರ್ ಗಳಿರುವ ಸ್ಟ್ರಾಂಗ್ ಎಸ್‌ಯುವಿ ಎಂದೇ ಕರೆಸಿಕೊಳ್ಳುವ ಜೀಪ್ ಕಂಪಾಸ್ ಕಂಪನಿ ತಮ್ಮ ಹೊಚ್ಚ ಹೊಸ ಲಿಮಿಟೆಡ್ ಪ್ಲಸ್ ಕಾರುಗಳನ್ನು ಮಾರುಕಟ್ಟೆಗೆ ಬಿಟ್ಟಿದೆ. 

ಅಕ್ಟೋಬರ್ ಮೊದಲ ವಾರದಿಂದ ಬುಕಿಂಗ್ ಆರಂಭವಾಗಿದೆ ಮತ್ತು ತಕ್ಷಣ ಡೆಲಿವರಿ ನೀಡುವ ವ್ಯವಸ್ಥೆಯನ್ನೂ ಕಂಪನಿ ಮಾಡಿದೆ. ಕಂಪಾಸ್ ಜೀಪ್‌ನ ಹೊಸ ಟಾಪ್ ಎಂಡ್ ಆವೃತ್ತಿ ‘ಲಿಮಿಟೆಡ್ ಪ್ಲಸ್’ ಹೆಚ್ಚಿನ ಫೀಚರ್‌ಗಳೊಂದಿಗೆ ಮಾರುಕಟ್ಟೆ ಪ್ರವೇಶಿಸಿದೆ. ದೇಶದ ದುಬಾರಿ ಕಾರುಗಳಲ್ಲಿರುವ ಹೆಚ್ಚಿನ ಫೀಚರ್ ಇದರಲ್ಲಿದ್ದು, ಅವಕ್ಕಿಂತ ಕಡಿಮೆ ಬೆಲೆಯಲ್ಲಿ ಈ ಕಾರು ಸಿಗುತ್ತದೆ.

Latest Videos

ಈ ಜೀಪ್‌ನಲ್ಲಿ ಪ್ಯಾನರಮಿಕ್ ಸನ್‌ರೂಫ್‌ಗಳಿರೋದು ವಿಶೇಷ. ಇಷ್ಟು ಕಡಿಮೆ ದರದ ಕಾರುಗಳ ಮಾಡೆಲ್‌ಗಳಲ್ಲಿ ಸನ್‌ರೂಫ್‌ಗಳಿರೋದು ತುಂಬಾ ಅಪರೂಪ. ಲಿಮಿಟೆಡ್ ಪ್ಲಸ್‌ನಲ್ಲಿರುವ ಸನ್‌ರೂಫ್ ಉಳಿದ ಕಾರ್‌ಗಳಿಗಿಂತ ಹೆಚ್ಚಿಗೆ ವಿಶಾಲವಾಗಿದೆ. ಹೀಗಾಗಿ ಮುಂದೆ ಕೂತವರ ಜೊತೆಗೆ ಹಿಂದೆ ಕೂತವರೂ ಇದನ್ನು ಎಕ್ಸ್‌ಪೀರಿಯನ್ಸ್ ಮಾಡಬಹುದು. 

8.4 ಇಂಚಿನ ದೊಡ್ಡ ಟಚ್‌ಸ್ಕ್ರೀನ್ ಆಡಿಯೋ ಸಿಸ್ಟಂ ಇದರಲ್ಲಿದೆ. ಡೋರ್ ಬದಿಯಲ್ಲಿ ಸೀಟ್ ಅಡ್ಜೆಸ್ಟ್‌ಮೆಂಟ್‌ಗೆ ಬಟನ್‌ಗಳಿವೆ. ಕಾರನ್ನು ಇಬ್ಬರು ಮೂವರು ಚಲಾಯಿಸುವಾಗ ಒಬ್ಬೊಬ್ಬರಿಗೆ ಒಂದೊಂಥರ ಸೀಟ್ ಅಡ್ಜೆಸ್ಟ್‌ಮೆಂಟ್ ಬೇಕಾಗುತ್ತೆ. ಇದರಲ್ಲಿ ಇಬ್ಬರ ಅಥವಾ ಮೂವರ ಸೀಟ್ ಅಡ್ಜೆಸ್ಟ್‌ಮೆಂಟ್ ಅನ್ನು ಸೇವ್ ಮಾಡಿದರೆ, ಪದೇ ಪದೇ ಸೀಟ್ ಅಡ್ಜೆಸ್ಟ್ ಮಾಡುವ ತೊಂದರೆ ಇರಲ್ಲ. ಇದಲ್ಲದೇ ಅಟೋಮ್ಯಾಟಿಕ್ ಹೆಡ್‌ಲ್ಯಾಂಪ್ ಗಳಿವೆ. 

ರೈನ್ ಸೆನ್ಸಿಂಗ್ ವೈಪರ್‌ಗಳೂ ಇವೆ. ಸುರಕ್ಷತೆ ದೃಷ್ಟಿಯಿಂದ ಆರು ಏರ್‌ಬ್ಯಾಗ್‌ಗಳನ್ನು ಈ ಜೀಪ್‌ನಲ್ಲಿ ಅಳವಡಿಸಲಾಗಿದೆ. ಪೆಟ್ರೋಲ್ ಹಾಗೂ ಡೀಸೆಲ್ ಎರಡೂ ವಿನ್ಯಾಸದಲ್ಲಿ ಲಭ್ಯವಿದೆ. ಈ ಫೀಚರ್‌ಗಳನ್ನು ಹೊಂದಿರುವ ಇತರ ಹೈ ಎಂಡ್ ಕಾರುಗಳಿಗಿಂತ ಕಡಿಮೆ ಬೆಲೆಯಲ್ಲಿ ಈ ಕಾರು ಸಿಗ್ತಿರೋದು ವಿಶೇಷ.
ಬೆಲೆ: 15.35 ಲಕ್ಷ(ಎಕ್ಸ್ ಶೋರೂಮ್ ದಿಲ್ಲಿ)ದಿಂದ ಆರಂಭ
 

click me!