
ನವದೆಹಲಿ(ಅ.10): ಟಾಟಾ ಮೋಟಾರ್ಸ್ ಸಂಸ್ಥೆ ನೂತನ ಟಾಟಾ ಟಿಗೋರ್ ಕಾರು ಬಿಡುಗಡೆ ಮಾಡಿದೆ. ನೂತನ ಟಿಗೋರ್ ಕಾರಿನ ಬೆಲೆ 5.20 ಲಕ್ಷ(ಎಕ್ಸ್ ಶೋ ರೂಂ) ರೂಪಾಯಿಂದ ಆರಂಭವಾಗಲಿದೆ. ಭಾರತದಲ್ಲಿ ಲಾಂಚ್ ಆಗಿರುವ ನೂತನ ಟಿಗೋರ್ ಕಾರು ಫೋರ್ಡ್ ಆಸ್ಪೈರ್, ಮಾರುತಿ ಸುಜುಕಿ ಡಿಸೈರ್, ಹೊಂಡಾ ಅಮೇಜ್ ಹಾಗೂ ಇತರ ಮಿಡ್ ಸೆಡಾನ್ ಕಾರುಗಳಿಗೆ ಭಾರಿ ಪೈಪೋಟಿ ನೀಡಲಿದೆ.
ನೂತನ ಟಾಟಾ ಟಿಗೋರ್ ಹಲವು ವಿಶೇಷತೆಗಳನ್ನೊಳಗೊಂಡಿದೆ. ದೊಡ್ಡ ಟಚ್ ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, 6.5 ಡಿಸ್‌ಪ್ಲೇ (ಟಾಟಾ ನೆಕ್ಸಾನ್ ಡಿಸ್‌ಪ್ಲೇ ಗಾತ್ರ) ಹೊಂಜಿದೆ. ಇದು ಆಪಲ್ ಕಾರ್‌ಪ್ಲೇ ಹಾಗೂ ಆಂಡ್ರಾಯಿಡ್ ಆಟೋಗೆ ಸಪೂರ್ಟ್ ಮಾಡಲಿದೆ.
1.2 ಲೀಟರ್,3 ಸಿಲಿಂಡರ್ ಪೆಟ್ರೋಲ್ ಇಂಜಿನ್, 83 ಬಿಹೆಚ್‌ಪಿ ಪವರ್ ಹಾಗೂ 1.5 ಲೀಟರ್ ಡೀಸೆಲ್ ಇಂಜಿನ್ 98 ಬಿಹೆಚ್‌ಪಿ ಪವರ್ ಹೊಂದಿದೆ. 5 ಸ್ವೀಡ್ ಮ್ಯಾನ್ಯುಯೆಲ್ ಟ್ರಾನ್ಸ್‌ಮಿಶನ್ ಹಾಗೂ ಪೆಟ್ರೋಲ್ ಇಂಜಿನ್‌ನಲ್ಲಿ ಆಟೋ ಟ್ರಾನ್ಸ್‌ಮಿಶನ್(AMT) ಹೊಂದಿದೆ.
ಟಾಟಾ ಟಿಗೋರ್ ಪೆಟ್ರೋಲ್
XE - 5.20 ಲಕ್ಷ ರೂಪಾಯಿ
XM - 5.55 ಲಕ್ಷ ರೂಪಾಯಿ
XZ - 5.95 ಲಕ್ಷ ರೂಪಾಯಿ
XZ+- 6.49 ಲಕ್ಷ ರೂಪಾಯಿ
XZA -6.65 ಲಕ್ಷ ರೂಪಾಯಿ
ಟಾಟಾ ಟಿಗೋರ್ ಡೀಸೆಲ್
XE - 6.09 ಲಕ್ಷ ರೂಪಾಯಿ
XM - 6.41 ಲಕ್ಷ ರೂಪಾಯಿ
XZ - 6.48 ಲಕ್ಷ ರೂಪಾಯಿ
XZ+- 7.38 ಲಕ್ಷ ರೂಪಾಯಿ