ಒಕಿನಾವಾ R30 ಎಲೆಕ್ಟ್ರಿಕ್ ಸ್ಕೂಟರ್ ಲಾಂಚ್: ಬುಕಿಂಗ್ ಬೆಲೆ 2 ಸಾವಿರ ರೂ!

By Suvarna News  |  First Published Aug 23, 2020, 3:58 PM IST

ಒಕಿನಾವಾ ಭಾರತದಲ್ಲಿ ಕಡಿಮೆ ಬೆಲೆಯ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ ಮಾಡುತ್ತಿದೆ. ಇದೀಗ ಒಕಿನಾವ R30 ಎಲೆಕ್ಟ್ರಿಕ್ ಸ್ಕೂಟರ್ ಲಾಂಚ್ ಮಾಡಿದೆ. ಕೇವಲ 2,000 ರೂಪಾಯಿ ನೀಡಿ ಈ ಸ್ಕೂಟರ್ ಬುಕ್ ಮಾಡಿಕೊಳ್ಳಬಹುದು.


ನವದೆಹಲಿ(ಆ.23): ಒಕಿನಾವ ಹೊಚ್ಚ ಹೊಸ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ ಮಾಡಿದೆ. 1.25Kwh ಬ್ಯಾಟರಿ ಹೊಂದಿರುವ ಒಕಿನಾವ R30 ಎಲೆಕ್ಟ್ರಿಕ್ ಸ್ಕೂಟರ್ ಮಾರುಕಟ್ಟೆ ಪ್ರವೇಶಿಸಿದೆ. ಅಧಿಕೃತ ಬುಕಿಂಗ್ ಕೂಡ ಆರಂಭಗೊಂಡಿದೆ. 2,000 ರೂಪಾಯಿ ನೀಡಿ ನೂತನ ಸ್ಕೂಟರ್ ಬುಕ್ ಮಾಡಿಕೊಳ್ಳಬಹುದು. 

ಒಕಿನಾವ ಪ್ರೈಸ್ ಪ್ರೋ ಸ್ಕೂಟರ್; ಮನೆಯಲ್ಲೇ ಚಾರ್ಜ್ ಮಾಡಿ 110 ಕಿ.ಮೀ ಪ್ರಯಾಣಿಸಿ!.

Tap to resize

Latest Videos

undefined

ಒಕಿನಾವಾ R30 ಎಲೆಕ್ಟ್ರಿಕ್ ಸ್ಕೂಟರ್ ಬೆಲೆ 58,992 ರೂಪಾಯಿ(ಎಕ್ಸ್ ಶೋ ರೂಂ). ಒಂದು ಬಾರಿ ಚಾರ್ಜ್ ಮಾಡಿದರೆ ಸ್ಕೂಟರ್ 60 ಕಿಲೋಮೀಟರ್ ಪ್ರಯಾಣದ ರೇಂಜ್ ನೀಡಲಿದೆ. 4 ರಿಂದ 5 ಗಂಟೆ ಸಮಯ ಸಂಪೂರ್ಣ ಚಾರ್ಜ್‌ಗೆ ತೆಗೆದುಕೊಳ್ಳುತ್ತದೆ. ಸ್ಕೂಟರ್ ಜೊತೆಗೆ ಮೈಕ್ರೋ ಚಾರ್ಜರ್ ಹಾಗೂ ಆಟೋ ಕಟ್ ಫಂಕ್ಷನ್ ಕೂಡ ಲಭ್ಯವಿದೆ. 

ಸ್ವಾತಂತ್ರ್ಯ ದಿನಾಚರಣೆಗೆ ಗಿಫ್ಟ್ ಆಫರ್ ಘೋಷಿಸಿದ ಒಕಿನಾವ ಎಲೆಕ್ಟ್ರಿಕ್ ಸ್ಕೂಟರ್

ಬ್ಯಾಟರಿ ಪ್ಯಾಕ್‌ಗೆ 3 ವರ್ಷ ವಾರೆಂಟ್ ಕೂಡ ಸಿಗಲಿದೆ. ಇದರಲ್ಲಿರುವ 250 ವ್ಯಾಟ್ BLDC ಮೋಟಾರ್ ಕೂಡ 3 ವರ್ಷ ವಾರೆಂಟಿ ಅಥವಾ 30,000 ಕಿಲೋಮೀಟರ್ ವಾರೆಂಟ್ ಸಿಗಲಿದೆ. ಟೆಲಿಸ್ಕೋಪಿಕ್ ಫ್ರಂಟ್ ಫೋರ್ಕ್, ಡ್ರಂ ಬ್ರೇಕ್ ಹಾಗೂ E ABS(Electronic- Assisted Braking System) ಬ್ರೇಕಿಂಗ್ ಸಿಸ್ಟಮ್ ಕೂಡ ಲಭ್ಯವಿದೆ.

ಒಕಿನಾವಾ ಇತ್ತೀಚೆಗೆ ಫ್ರೀ ಡಿಲೆವರಿ ಟು ಹೋಮ್ ಸೌಲಭ್ಯ ಜಾರಿಗೆ ತಂದಿದೆ. ಬೆಂಗಳೂರಿನಲ್ಲಿ ಈ ಸೇವೆ ಆರಂಭಿಸಿರುವ ಒಕಿನಾವ ಯಾವುದೇ ಶುಲ್ಕವಿಲ್ಲದೆ ಮನೆಗೆ ಸ್ಕೂಟರ್ ಡೆಲಿವರಿ ಮಾಡಲಿದೆ.  ಆನ್‌ಲೈನ್ ಬುಕಿಂಗ್ ಮಾಡುವ ಗ್ರಾಹಕರಿಗೆ ಮಾತ್ರ ಈ ಸೌಲಭ್ಯವಿದೆ. 

click me!