ಬರುತ್ತಿದೆ ಕಿಯಾ ಸೋಲ್ ಎಲೆಕ್ಟ್ರಿಕ್ ಕಾರು: ಹ್ಯುಂಡೈ ಕೋನಾ, MG Zs ಕಾರಿಗೆ ಪೈಪೋಟಿ!

By Suvarna News  |  First Published Aug 23, 2020, 3:06 PM IST

ಭಾರತದಲ್ಲಿ ಕಿಯಾ ಮೋಟಾರ್ಸ್ ಭರ್ಜರಿ ಯಶಸ್ಸು ಸಾಧಿಸಿದೆ. ಇದೀಗ ಕಿಯಾ ಸೊನೆಟ್ ಕಾರು ಬಿಡುಗಡೆ ತಯಾರಿಯಲ್ಲಿದೆ. ಸೊನೆಟ್ ಕಾರಿನ ಬೆನ್ನಲ್ಲೇ ಕಿಯಾ ಸೋಲ್ SUV ಎಲೆಕ್ಟ್ರಿಕ್ ಕಾರು ಬಿಡುಗಡೆ ಮಾಡಲು ಮುಂದಾಗಿದೆ. ಎಲೆಕ್ಟ್ರಿಕ್ ವಾಹನಗಳಿಗೆ ಬೇಡಿಕೆ ಹೆಚ್ಚಾಗುತ್ತಿರುವ ಬೆನ್ನಲ್ಲೇ ಕಿಯಾ ಮೋಟಾರ್ಸ್ ನಿರ್ಧಾರ ಇದೀಗ ಹ್ಯುಂಡೈ ಹಾಗೂ ಎಂ.ಜಿಗೆ ನಡುಕ ಹುಟ್ಟಿಸಿದೆ.


ಅನಂತಪುರಂ(ಆ.23): ದೆಹಲಿ ಆಟೋ ಎಕ್ಸ್ಪೋ 2020ರಲ್ಲಿ ಅನಾವರಣ ಮಾಡಿದ್ದ ಕಿಯಾ ಸೋಲ್ SUV ಎಲೆಕ್ಟ್ರಿಕ್ ಕಾರು ಬಿಡುಗಡೆಗೆ ತಯಾರಿ ಆರಂಭಗೊಂಡಿದೆ. ಭಾರತದಲ್ಲಿ ಒಂದರ ಮೇಲೋಂದರಂತೆ ಕಾರು ಬಿಡುಗಡೆ ಮಾಡಿ ಯಶಸ್ಸು ಸಾಧಿಸಿರುವ ಕಿಯಾ ಮೋಟಾರ್ಸ್  ಇದೀಗ ಮಹತ್ವದ ಹೆಜ್ಜೆ ಇಡುತ್ತಿದೆ. ಹ್ಯುಂಡೈ ಕೋನಾ ಹಾಗೂ MG Zs ಎಲೆಕ್ಟ್ರಿಕ್ ಕಾರುಗಳಿಗೆ ಪ್ರತಿಸ್ಪರ್ಧಿಯಾಗಿ ಕಿಯಾ ಸೋಲ್ EV ಕಾರು ಬಿಡುಗಡೆಯಾಗುತ್ತಿದೆ.

ಕಿಯಾ ಸೊನೆಟ್ SUV ಬುಕಿಂಗ್: ಮೊದಲ ದಿನವೇ ದಾಖಲೆ ಬರೆದ ಕಾರು!

Tap to resize

Latest Videos

undefined

ಕಿಯಾ ಸೋಲ್ ಕಾರು ಒಂದು ಬಾರಿ ಚಾರ್ಜ್ ಮಾಡಿದರೆ ಗರಿಷ್ಠ 450 ಕಿ.ಮೀ ಮೈಲೇಜ್ ನೀಡಲಿದೆ. ಹ್ಯುಂಡೈ ಕೋನಾ ಹಾಗೂ MG ZS ಕಾರಿನಲ್ಲಿರುವಂತೆ ಅತ್ಯಾಧುನಿಕ ಫೀಚರ್ಸ್ ಸೋಲ್ ಕಾರಿನಲ್ಲಿದೆ. ಮೈಲೇಜ್ ಕೂಡ ಕೋನಾ, ZS ಕಾರಿನಷ್ಟೇ ನೀಡಲಿದೆ. ವಿಶೇಷ ಅಂದರೆ ಕೋನಾ ಹಾಗೂ ZS ಎಲೆಕ್ಟ್ರಿಕ್ ಕಾರಿಗಿಂತ ಕಡಿಮೆ ಬೆಲೆ ಹೊಂದಿದೆ. ನೂತನ ಕಿಯೋ ಸೋಲ್ ಬೆಲೆ 14 ಲಕ್ಷ ರೂಪಾಯಿಂದ 18 ಲಕ್ಷ ರೂಪಾಯಿ ಎಂದು ಅಂದಾಜಿಸಲಾಗಿದೆ.

ಭಾರತದಲ್ಲಿ 2ನೇ ಘಟಕ ತೆರೆಯುತ್ತಿದೆ ಕಿಯಾ ಮೋಟಾರ್ಸ್, ಕರ್ನಾಟಕ ಅಥವಾ ಮಹಾರಾಷ್ಟ್ರ?.

ಹುಂಡೈ ಕೋನಾ ಕಾರಿನ ಬೆಲೆ 25 ಲಕ್ಷ ರೂಪಾಯಿ ಹಾಗೂ ಎಂಜಿ ZS ಕಾರಿನ ಬೆಲೆ 20  ಲಕ್ಷ ರೂಪಾಯಿ. ಈ ಕಾರಿಗೆ ಪ್ರತಿಸ್ಪರ್ಧಿಯಾಗಿರುವ ಕಿಯಾ ಸೋಲ್ ಬೆಲೆಯಲ್ಲೂ ತೀವ್ರ ಪೈಪೋಟಿ ನೀಡಲಿದೆ. ಪೆಟ್ರೋಲ್ ಹಾಗೂ ಡೀಸೆಲ್ ಕಾರಿನಲ್ಲಿ ಹ್ಯುಂಡೈ ಕ್ರೆಟಾ ಕಾರಿಗೆ ತೀವ್ರ ಹೊಡೆತ ನೀಡಿರುವ ಕಿಯಾ ಸೆಲ್ಟೋಸ್ ಇದೀಗ ಎಲೆಕ್ಟ್ರಿಕ್ ವಿಭಾಗದಲ್ಲೂ ಪೈಪೋಟಿ ನೀಡಲು ಸಜ್ಜಾಗಿದೆ.

ಪ್ರಧಾನಿ ನರೇಂದ್ರ ಮೋದಿ ಆತ್ಮನಿರ್ಭರ್ ಭಾರತ ಪರಿಕಲ್ಪನೆಯಿಂದ ಮೇಡ್ ಇನ್ ಇಂಡಿಯಾ ಉತ್ಪಾದನೆಗೆ ಪ್ರಾಶಸ್ತ್ಯ ಹೆಚ್ಚಾಗಿದೆ. ಇಷ್ಟೇ ಅಲ್ಲ ವಿದೇಶದಿಂದ ಆಮದು ಮಾಡಿಕೊಳ್ಳುವ ಬದಲು, ಇಲ್ಲೇ ಉತ್ಪಾದನೆ ಮಾಡಲು ಉತ್ತೇಜನ ನೀಡಲಾಗುತ್ತಿದೆ. ಈ ನಿಟ್ಟಿನಲ್ಲಿ ಎಲೆಕ್ಟಿರಿಕ್ ಕಾರಿನ ಬ್ಯಾಟರಿ ಉತ್ಪಾದನೆ ಭಾರತದಲ್ಲೇ ಆರಂಭವಾದರೆ ಎಲೆಕ್ಟ್ರಿಕ್ ಕಾರುಗಳ ಬೆಲೆ ಕಡಿಮೆಯಾಗಲಿದೆ.  ಈ ಕುರಿತು ಕೇಂದ್ರ ಸರ್ಕಾರ ಮೊದಲ ಸುತ್ತಿನ ಮಾತುಕತೆ ನಡೆಸಿದೆ.

click me!