ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸಂಗ್ರಹ ಮಾಡೋ ಟೋಲ್ ಒಟ್ಟು ಮೊತ್ತ ಎಷ್ಟು? 2018-19ರ ಸಾಲಿನಲ್ಲಿ ಸಂಗ್ರಹ ಮಾಡಲಾದ ಟೋಲ್ ಮೊತ್ತದ ಕುರಿತು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಮಾಹಿತಿ ಬಹಿರಂಗ ಪಡಿಸಿದ್ದಾರೆ.
ನವದೆಹಲಿ(ಡಿ.06): ರಾಷ್ಟ್ರೀಯ ಹೆದ್ದಾರಿಯಲ್ಲಿ ಟೋಲ್ ಹಣ ಕಟ್ಟಿ ಮುಂದೆ ಸಾಗುವುದೇ ದೊಡ್ಡ ತಲೆನೋವು. ಪ್ರಯಾಣದಲ್ಲಿ ಕಾರಿನ ಇಂಧನಕ್ಕಿಂತ ಟೋಲ್ ಹಣ ಹೆಚ್ಚಾದರೂ ಆಶ್ಚರ್ಯವಿಲ್ಲ. ಹೀಗೆ ಪ್ರತಿ ದಿನ ಟೋಲ್ ಸಂಗ್ರಹ ಮಾಡಿದ ಟೋಲ್ ವಿವರವನ್ನು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಬಹಿರಂಗ ಪಡಿಸಿದ್ದಾರೆ. 2018-19ರ ಸಾಲಿನಲ್ಲಿ ದೇಶದ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಗ್ರಹ ಮಾಡಿದ ಟೋಲ್ ಮೊತ್ತವನ್ನು ಗಡ್ಕರಿ, ಸಂಸತ್ತಿನಲ್ಲಿ ಬಹಿರಂಗ ಪಡಿಸಿದರು.
ಇದನ್ನೂ ಓದಿ: ವಾಹನ ಸವಾರರೇ ಎಚ್ಚರ: ದುಬಾರಿ ಟೋಲ್ ಕಟ್ಟೋ ಬದಲು ಫಾಸ್ಟ್ಯಾಗ್ ಬಳಸಿ!
2018-19ರ ಸಾಲಿನಲ್ಲಿ ರಾಷ್ಟ್ರೀಯ ಹೆದ್ದಾರಿ ಟೋಲ್ ಪ್ಲಾಝಾ ಬಳಿ ಸಂಗ್ರಹಿಸಿಲಾದ ಒಟ್ಟು ಮೊತ್ತ ಬರೋಬ್ಬರಿ 24,396 ಕೋಟಿ ರೂಪಾಯಿ. ಪ್ರತಿ ದಿನ ಸರಾಸರಿ 2033 ಕೋಟಿ ರೂಪಾಯಿ ಟೋಲ್ ಮೂಲಕ ಸಂಗ್ರಹವಾಗುತ್ತಿದೆ. ಪ್ರತಿ ದಿನ ಸರಾಸರಿ 66.84 ಕೋಟಿ ರೂಪಾಯಿ ದೇಶದೆಲ್ಲೆಡೆ ಸಂಗ್ರಹವಾಗುತ್ತಿದೆ.
ಇದನ್ನೂ ಓದಿ: ಇಂದಿನಿಂದ ನೈಸ್ ರಸ್ತೆ ಟೋಲ್‌ನಲ್ಲೂ ಫಾಸ್ಟ್ಯಾಗ್; ನಗದು ವ್ಯವಹಾರ್ ಬಂದ್!
ದೇಶದ ರಾಷ್ಟ್ರೀಯ ಹೆದ್ದಾರಿಯಲ್ಲಿ 570 ಟೋಲ್ ಫ್ಲಾಜಾ ಮೂಲಕ ಹಣ ಸಂಗ್ರಹ ಮಾಡಲಾಗುತ್ತಿದೆ. ವರ್ಷವೊಂದರಲ್ಲೇ 24 ಸಾವಿರ ಕೋಟಿ ರೂಪಾಯಿ ಹಣ ಸಂಗ್ರಹವಾಗುತ್ತಿದ್ದರೂ ರಾಷ್ಟ್ರೀಯ ಹೆದ್ದಾರಿ ಹೊರತು ಪಡಿಸಿದರೆ ಉಳಿದೆಲ್ಲಾ ರಸ್ತೆಗಳ ಪರಿಸ್ಥಿತಿ ಸುಧಾರಿಸಿಲ್ಲ ಎಂದು ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತಪಡಿಸಲಾಗುತ್ತಿದೆ.