ವಾಹನ ಮಾಲೀಕರ ಮೊಬೈಲ್ ಸಂಖ್ಯೆಯನ್ನು ವಾಹನ ನೋಂದಣಿ, ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ ಮತ್ತು ಅವುಗಳ ನವೀಕರಣ ಸೇರಿದಂತೆ ಇನ್ನಿತರ ಸರ್ಕಾರದ ವಾಹನ ಸೇವೆಗಳ ಜೊತೆ ಕಡ್ಡಾಯ ಸಂಯೋಜಿಸುವ ಬಗ್ಗೆ ಕೇಂದ್ರ ಸರ್ಕಾರ ಪ್ರಸ್ತಾಪ ಮಾಡಿದೆ
ನವದೆಹಲಿ [ಡಿ.06] : ಜನ ಸಾಮಾನ್ಯರ ವೈಯಕ್ತಿಕ ಮಾಹಿತಿ ದುರುಪಯೋಗವಾಗದಂತೆ ಕಾಪಾಡುವ ಸದುದ್ದೇಶದಿಂದ ವೈಯಕ್ತಿಕ ಮಾಹಿತಿ ರಕ್ಷಣಾ-2019 ಮಸೂದೆಗೆ ಕೇಂದ್ರ ಸಂಪುಟದ ಅನುಮೋದನೆ ಬೆನ್ನಲ್ಲೇ, ವಾಹನ ಮಾಲೀಕರ ಮೊಬೈಲ್ ಸಂಖ್ಯೆಯನ್ನು ವಾಹನ ನೋಂದಣಿ, ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ ಮತ್ತು ಅವುಗಳ ನವೀಕರಣ ಸೇರಿದಂತೆ ಇನ್ನಿತರ ಸರ್ಕಾರದ ವಾಹನ ಸೇವೆಗಳ ಜೊತೆ ಕಡ್ಡಾಯ ಸಂಯೋಜಿಸುವ ಬಗ್ಗೆ ಕೇಂದ್ರ ಸರ್ಕಾರ ಪ್ರಸ್ತಾಪ ಮಾಡಿದೆ. ಈ ಪ್ರಕಾರ, ಗ್ರಾಹಕರ ಮೊಬೈಲ್ ಸಂಖ್ಯೆಗಳು ಇನ್ನು ಮುಂದಿನ ದಿನಗಳಲ್ಲಿ ‘ವಾಹನ ದತ್ತಾಂಶ’ದಲ್ಲಿ ದಾಖಲಾಗಲಿವೆ.
2020ರ ಏಪ್ರಿಲ್ 1ರಿಂದ ಈ ನಿಯಮ ಜಾರಿಗೊಳಿಸುವ ಬಗ್ಗೆ ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ. ಈ ಕುರಿತು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಈ ಸಂಬಂಧ ಕರಡು ಅಧಿಸೂಚನೆ ಬಿಡುಗಡೆ ಮಾಡಿದ್ದು, ಈ ಬಗ್ಗೆ 30 ದಿನಗಳ ಒಳಗಾಗಿ ಜನ ಸಾಮಾನ್ಯರು ತಮ್ಮ ಅಭಿಪ್ರಾಯ ತಿಳಿಸುವಂತೆ ಕೋರಲಾಗಿದೆ.
ಮದ್ಯಪಾನ ಮಾಡಿ ಜೀವ ಉಳಿಸಿ; ಹಾಸನ ಪೊಲೀಸ್ರಿಗೆ ತಪ್ಪು ಬ್ಯಾರಿಕೇಡ್ ಸಂಕಷ್ಠ!...
ಈ ಬಗ್ಗೆ ಮಾತನಾಡಿದ ಸಾರಿಗೆ ಇಲಾಖೆ ಹಿರಿಯ ಅಧಿಕಾರಿಯೊಬ್ಬರು, ‘ಸಾಮಾನ್ಯವಾಗಿ ಹೊಸ ವಾಹನ ಖರೀದಿ ವೇಳೆ ಹೊರತುಪಡಿಸಿ, ಇನ್ಯಾವುದೇ ಸಂದರ್ಭದಲ್ಲಿ ಸರ್ಕಾರಿ ಸೇವೆಗಳಿಗೆ ಸಂಬಂಧಿಸಿದಂತೆ ವಾಹನ ಪ್ರಮಾಣಪತ್ರಗಳಿಗೆ ಗ್ರಾಹಕರ ಮೊಬೈಲ್ ಸಂಖ್ಯೆ ದಾಖಲಿಸಿಟ್ಟುಕೊಳ್ಳಲ್ಲ. ಆದರೆ, ಮುಂದಿನ ವರ್ಷದ ಏಪ್ರಿಲ್‌ನಿಂದ ಕಾರು ಸೇರಿದಂತೆ ಇನ್ಯಾವುದೇ ವಾಹನಗಳಿಗೆ ಸಂಬಂಧಿಸಿದ ಸೇವೆಗಳಿಗಾಗಿ ಗ್ರಾಹಕರು ತಮ್ಮ ಮೊಬೈಲ್ ಸಂಖ್ಯೆಯನ್ನು ವಾಹನ ದತ್ತಾಂಶದಲ್ಲಿ ಸಂಯೋಜನೆ ಮಾಡಬೇಕಿದೆ’ ಎಂದು ಹೇಳಿದ್ದಾರೆ.