ನಿಸಾನ್ ಮೈಕ್ರಾ, ಸನ್ನಿ ಕಾರು ಸ್ಥಗಿತ, ವಿದಾಯ ಖಚಿತ ಪಡಿಸಿದ ಕಂಪನಿ!

By Suvarna News  |  First Published May 15, 2020, 9:29 PM IST

ಕೊರೋನಾ ವೈರಸ್ ಹಾಗೂ ಲಾಕ್‌ಡೌನ್ ಕಾರಣ ಬಹುತೇಕ ಆಟೋಮೊಬೈಲ್ ಕಂಪನಿಗಳು ನಷ್ಟ ಅನುಭವಿಸುತ್ತಿದೆ. ಕೆಲ ಕಂಪನಿಗಳು ಕಾರ್ಯರಂಭಗೊಂಡಿದ್ದರು, ಪೂರ್ಣ ಪ್ರಮಾಣದಲ್ಲಿ ಆಗಿಲ್ಲ. ಇದೀಗ ನಿಸಾನ್ ಭಾರತದಲ್ಲಿ ಉತ್ಪಾದನೆ ಆರಂಭಿಸಲು ಸಜ್ಜಾಗುತ್ತಿದೆ. ಇದರ ಬೆನ್ನಲ್ಲೇ ಎರಡು ಕಾರು ಸ್ಥಗಿತಗೊಳಿಸುತ್ತಿರುವುದಾಗಿ ಹೇಳಿದೆ.


ನವದೆಹಲಿ(ಮೇ.11): ಕೊರೋನಾ ವೈರಸ್ ವಕ್ಕರಿಸಿದ ಮೇಲೆ ಹಲವು ಕಂಪನಿಗಳು ನಷ್ಟದಲ್ಲಿವೆ. ಇದರಲ್ಲಿ ಆಟೋಮೊಬೈಲ್ ಕ್ಷೇತ್ರ ಹೆಚ್ಚಿನ ಹೊಡೆತ ಅನುಭವಿಸಿದೆ. ಲಾಕ್‌ಡೌನ್ ಬಳಿಕ ಕಾರ್ಯರಂಭಿಸಲು ಮಜ್ದಾ ಸೇರಿದಂತೆ ಕೆಲ ಕಂಪನಿಗಳು ಸಾವಿರಾರು ಕೋಟಿ ರೂಪಾಯಿ ಲೋನ್‌ಗೆ ಬ್ಯಾಂಕ್‌ಗೆ ಮನವಿ ಮಾಡಿದೆ. ಇತ್ತ ನಿಸಾನ್ ಕೂಡ ಮೆಲ್ಲನೆ ಭಾರತದಲ್ಲಿ ವ್ಯವಹಾರ ಆರಂಭಿಸಲು ಸಜ್ಜಾಗಿದೆ. ಆದರೆ ಕಾರ್ಯರಂಭಕ್ಕೂ ಮುನ್ನವೇ ನಿಸಾನ್ ಮೈಕ್ರಾ ಹಾಗೂ ನಿಸಾನ್ ಸನ್ನಿ ಕಾರು ಸ್ಥಗಿತಗೊಳಿಸುತ್ತಿರುವುದಾಗಿ ಹೇಳಿದೆ.

ನಿಸ್ಸಾನ್ ಬಿಡುಗಡೆ ಮಾಡುತ್ತಿದೆ ನೂತನ SUV ಕಾರು!.

Latest Videos

undefined

ನಿಸಾನ್ ಮೈಕ್ರಾ ಹ್ಯಾಚ್‌ಬ್ಯಾಕ್ ಹಾಗೂ ಸನ್ನಿ ಸೆಡಾನ್ ಕಾರು ಸ್ಥಗಿತಕ್ಕೆ ಕೊರೋನಾ ವೈರಸ್ ಕಾರಣವಲ್ಲ. ಇದು ಸುಪ್ರೀಂ ಕೋರ್ಟ್ ನಿಯಮದ ಪ್ರಕಾರ ಎಪ್ರಿಲ್ 1, 2020 ರಿಂದ ಭಾರತದಲ್ಲಿ ಮಾರಾಟವಾಗು ಹೊಸ ಕಾರುಗಳೆಲ್ಲಾ BS6 ಎಮಿಶನ್ ಎಂಜಿನ್ ಹೊಂದಿರಬೇಕು. ಬಹುತೇಕ ಕಂಪನಿಗಳು ವಾಹನಗಳನ್ನು  BS4ನಿಂದ  BS6 ಎಮಿಶನ್ ಎಂಜಿನ್ ಆಗಿ ಪರಿವರ್ತಿಸಿದೆ. ಆದರೆ ನಿಸಾನ್ ಮೈಕ್ರಾ ಹಾಗೂ ಸನ್ನಿಗೆ ಬೇಡಿಕೆ ಕಡಿಮೆ ಇರುವ ಕಾರಣ ಕಂಪನಿ ಈ ಎರಡು ಕಾರುಗಳ ಉತ್ಪಾದನೆ ಸ್ಥಗಿತಗೊಳಿಸಿದೆ.

ನಿಸಾನ್ ಮೈಕ್ರಾ ಹಾಗೂ ಸನ್ನಿ ಕಾರುಗಳನ್ನು BS6 ಎಮಿಶನ್ ಎಂಜಿನ್ ಆಗಿ ಪರಿವರ್ತಿಸಿಲ್ಲ. ಕಾರಣ ಈ ಪರಿವರ್ತನೆಯಿಂದ ಕಂಪನಿಗೆ ಆರ್ಥಿಕ ಹೊರೆ ಬೀಳಲಿದೆ. ಇಷ್ಟೇ ಅಲ್ಲ ಈ ಎರಡು ಕಾರುಗಳಿಗೆ ಬೇಡಿಕೆ ಕಡಿಮೆ ಇರುವ ಕಾರಣ,  BS6 ಎಂಜಿನ್ ಪರಿವರ್ತನೆ ಬದಲು ಕಾರು ನಿರ್ಮಾಣ ಸ್ಥಗಿತಗೊಳಿಸಿದೆ.

ನಿಸಾನ್ ಮೈಕ್ರಾ ಹ್ಯಾಚ್‌ಬ್ಯಾಕ್ ಕಾರನ್ನು 2010ರಲ್ಲಿ ಭಾರತದಲ್ಲಿ ಪರಿಚಯಿಸಲಾಯಿತು. 2014ರಲ್ಲಿ ಕೆಲ ಬದಲಾವಣೆ ಹಾಗೂ ಹೆಚ್ಚುವರಿ ಫೀಚರ್ಸ್‌ನೊಂದಿಗೆ ಬಿಡುಗಡೆಗೊಂಡಿತು. 2017ರಲ್ಲಿ ಆಟೋಮ್ಯಾಟಿಕ್ ಹೆಡ್‌ಲ್ಯಾಂಪ್ಸ್ ಸೇರಿದಂತೆ ಹಲವು ಬದಲಾವಣೆಯೊಂದಿಗೆ ಮೈಕ್ರಾ ಫೇಸ್‌ಲಿಫ್ಟ್ ಕಾರು ಬಿಡುಗಡೆಯಾಗಿತ್ತು.

ನಿಸಾನ್ ಸನ್ನಿ ಕಾರು 2011ರಲ್ಲಿ ಭಾರತದಲ್ಲಿ ಬಿಡುಗಡೆಯಾಯಿತು. ಹೆಚ್ಚು ಸ್ಥಳಾವಕಾಶ ಹೊಂದಿದ ಸೆಡಾನ್ ಕಾರು ಆರಂಭಿಕ ಹಂತದಲ್ಲಿ ಗ್ರಾಹಕರನ್ನು ಆಕರ್ಷಿಸಿತ್ತು. ಬಳಿಕ ಪೈಪೋಟಿ ಹೆಚ್ಚಿದ ಕಾರಣ ಸನ್ನಿ ಮಾರುಕಟ್ಟೆ ಕುಸಿತ ಕಂಡಿತು. 2017ರಲ್ಲಿ ಫೇಸ್‌ಲಿಫ್ಟ್ ಕಾರು ಬಿಡುಗಡೆಯಾದರು ಜನ ಆಸಕ್ತಿ ತೋರಲಿಲ್ಲ.

click me!