ನಿಸಾನ್ ಕಿಕ್ಸ್-ಜೂಮ್ ಕಾರು ಒಪ್ಪಂದ; ಬೆಂಗಳೂರಿಗರಿಗೆ ಭರ್ಜರಿ ಕೊಡುಗೆ!

By Web Desk  |  First Published Aug 15, 2019, 5:53 PM IST

ಬೆಂಗಳೂರಿಗರಿಗೆ ನಿಸಾನ್ ಕಿಕ್ಸ್ ಭರ್ಜರಿ ಕೊಡುಗೆ ನೀಡಿದೆ. ಕಾರು ಖರೀದಿಸಲು ಬಯಸದೇ ಲೀಸ್ ಅಥವಾ ಬಾಡಿಗೆಗೆ ಕಾರು ಪಡೆಯುವ ಗ್ರಾಹಕರಿಗೆ ನಿಸಾನ್ ಕಿಕ್ಸ್ ಹೊಸ ಯೋಜನೆ ಜಾರಿ ಮಾಡಿದೆ. ಇದಕ್ಕಾಗಿ ಜೂಮ್ ಕಾರಿನ ಜೊತೆ ಒಪ್ಪಂದ ಮಾಡಿಕೊಂಡಿದೆ. ನೂತನ ಕೊಡುಗೆ ಕುರಿತ ವಿವರ ಇಲ್ಲಿದೆ.
 


ಬೆಂಗಳೂರ(ಆ.15): ಇನ್ನು ಮುಂದೆ  ನಿಸ್ಸಾನ್ ಕಿಕ್ಸ್ ಜೂಮ್ ಕಾರ್ ನಲ್ಲೇ ಲಭ್ಯವಾಗಲಿದೆ. ನಿಸ್ಸಾನ್ ಕಾರ್ ನಲ್ಲಿ ಪ್ರಯಾಣ ಮಾಡಬೇಕೆಂದು ಬಯಸಿರುವ ಆದರೆ, ಕಾರನ್ನು ಸ್ವಂತವಾಗಿ ಹೊಂದಬೇಕೆಂದು ಬಯಸದ ಗ್ರಾಹಕರಿಗಾಗಿ ಈ ನಿಸ್ಸಾನ್ ಕಿಕ್ಸ್ ಅನ್ನು ಜೂಮ್ ಕಾರ್ ನಲ್ಲಿ ಬಿಡುಗಡೆ ಮಾಡಲಾಗುತ್ತಿದೆ.
ಈ ಸೇವೆ ಬೆಂಗಳೂರಿನಲ್ಲಿ ಲಭ್ಯವಿದ್ದು, ನಗರದ ನಾಗರಿಕರು ಈ ಸೇವೆಯನ್ನು ಬಳಸಿಕೊಳ್ಳಬಹುದಾಗಿದೆ. ಈ ಸಂಬಂಧ ನಿಸ್ಸಾನ್ ಮತ್ತು ಜೂಮ್‍ಕಾರ್ ಸಂಸ್ಥೆಗಳು ಒಪ್ಪಂದ ಮಾಡಿಕೊಂಡಿವೆ.

ಇದನ್ನೂ ಓದಿ: 73ನೇ ಸ್ವಾತಂತ್ರ್ಯ ದಿನಾಚರಣೆ; ಬದಲಾಯಿತು ಪ್ರಧಾನಿ ಮೋದಿ ಕಾರು!

Tap to resize

Latest Videos

undefined

ಸಾಮಾನ್ಯವಾಗಿ ಸ್ವಂತ ಕಾರುಗಳನ್ನು ಖರೀದಿಸಲು ಬಯಸದ ಹಲವರು ಸಾರ್ವಜನಿಕ ಸಾರಿಗೆ ಬಳಸುತ್ತಾರೆ ಅಥವಾ ಕಾರುಗಳನ್ನು ಲೀಸ್/ಬಾಡಿಗೆ ಆಧಾರದ ಮೇಲೆ ಬಳಸುತ್ತಾರೆ. ಇಂತಹವರ ಅಗತ್ಯತೆಗಳನ್ನು ಪೂರೈಸಲೆಂದೇ ನಿಸ್ಸಾನ್ ಇಂಡಿಯಾ ತನ್ನ ನಿಸ್ಸಾನ್ ಕಿಕ್ಸ್ ಸೇವೆಯನ್ನು ಜೂಮ್‍ಕಾರ್‌ನಲ್ಲಿ ಆರಂಭಿಸಿದೆ.
ಆದರೆ, ಈ ಕಾರನ್ನು ಪಡೆಯಬೇಕಾದರೆ ಗ್ರಾಹಕರು ಮೊದಲು ಕಡ್ಡಾಯವಾಗಿ ಆರು ತಿಂಗಳ ಸಬ್‍ಸ್ಕ್ರಿಪ್ಷನ್ ಮಾಡಿಕೊಳ್ಳಬೇಕು. ಹೀಗೆ ಸಬ್‍ಸ್ಕ್ರಿಪ್ಷನ್ ಮಾಡಿಕೊಳ್ಳುವ ಗ್ರಾಹಕರಿಗೆ ಸಂಸ್ಥೆಯು ಆಕರ್ಷಕವಾದ ಪ್ಯಾಕೇಜ್ ಅನ್ನು ನೀಡಲಿದೆ.

ಇದನ್ನೂ ಓದಿ: ದುಬಾರಿ ರೋಲ್ಸ್ ರಾಯ್ಸ್ ಖರೀದಿಸಿದ ಅನರ್ಹ ಶಾಸಕ MTB ನಾಗರಾಜ್!

ನಮ್ಮ ಕಾರಿನ ಮಾಲೀಕತ್ವದ ನಿಯಮಗಳು ನಗರ ಪ್ರದೇಶದ ಯುವ ಪೀಳಿಗೆಯಲ್ಲಿ ಸಾಕಷ್ಟು ಡೈನಾಮಿಕ್ ಬದಲಾವಣೆಯನ್ನು ತರಲಿದೆ. ಅವರು ಸುಲಭವಾಗಿ ಲೀಸ್ ಆಧಾರದ ಸಬ್‍ಸ್ಕ್ರಿಪ್ಷನ್ ಮಾದರಿಗಳನ್ನು ಆಯ್ಕೆ ಮಾಡಿಕೊಳ್ಳಲು ನೆರವಾಗುತ್ತದೆ. ಇದು ದೀರ್ಘಾವಧಿಯ ಮಾಲೀಕತ್ವಕ್ಕೆ ಪೂರಕವಾಗಿರುತ್ತದೆ. ಜೂಮ್‍ಕಾರ್ ಸಹಯೋಗದಲ್ಲಿ ನಮ್ಮ ಗ್ರಾಹಕರಿಗೆ ಕಿಕ್ಸ್ ಅನ್ನು ಮಾಸಿಕ ಸಬ್‍ಸ್ಕ್ರಿಪ್ಷನ್ ಯೋಜನೆಗಳಲ್ಲೂ ನೀಡುತ್ತಿದ್ದೇವೆ  ಎಂದು  ನಿಸ್ಸಾನ್ ಮೋಟರ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್‍ನ ಮಾರಾಟ & ವಾಣಿಜ್ಯ ವಿಭಾಗದ ನಿರ್ದೇಶಕ ಹರ್‍ದೀಪ್ ಸಿಂಗ್ ಬ್ರಾರ್ ಹೇಳಿದರು.
 

click me!