ಮಾರುತಿ ಬ್ರೆಜಾ ಪೆಟ್ರೋಲ್ ಕಾರು ಬಿಡುಗಡೆ ದಿನಾಂಕ ಬಹಿರಂಗ!

By Web DeskFirst Published Aug 15, 2019, 5:37 PM IST
Highlights

ಮಾರುತಿ ಬ್ರೆಜಾ ಸದ್ಯ ಡೀಸೆಲ್ ವೇರಿಯೆಂಟ್ ಮಾತ್ರ ಲಭ್ಯವಿದೆ. ಹ್ಯುಂಡೈ ವೆನ್ಯೂ ಪೆಟ್ರೋಲ್ ಕಾರಿನ ಯಶಸ್ಸಿನ ಬಳಿಕ ಇದೀಗ ಮಾರುತಿ ಬ್ರೆಜಾ ಪೆಟ್ರೋಲ್ ಕಾರು ಬಿಡುಗಡೆ ಖಚಿತಪಡಿಸಿದೆ. ಇದೀಗ ಮಾರುತಿ ಬ್ರೆಜಾ ಪೆಟ್ರೋಲ್ ಕಾರು ಬಿಡುಗಡೆ ದಿನಾಂಕ ಬಹಿರಂಗವಾಗಿದೆ. ಈ ಕುರಿತ ಹೆಚ್ಚಿನ ಮಾಹಿತಿ ಇಲ್ಲಿದೆ.
 

ನವದೆಹಲಿ(ಆ.15): ಭಾರತದಲ್ಲಿ ವಾಹನ ಮಾರುಕಟ್ಟೆ ಸಂಕಷ್ಟ ಅನುಭವಿಸುತ್ತಿದೆ. ಇದೀಗ ವಾಹನ ಕಂಪನಿಗಳು ನೂನತ ಕಾರು ಬಿಡುಗಡೆ ಮಾಡಲು ಹಿಂದೇಟು ಹಾಕುತ್ತಿವೆ. ಇದರ ಬೆನ್ನಲ್ಲೇ ಮಾರುತಿ ಸುಜುಕಿ ಇದೀಗ ದಾಖಲೆಯ ಮಾರಾಟ ಕಂಡಿರುವ ಬ್ರೆಜಾ SUV ಪೆಟ್ರೋಲ್ ಕಾರು ಬಿಡುಗಡೆಗೆ ಮುಂದಾಗಿದೆ. SUV ಕಾರುಗಳ ಭರ್ಜರಿ ಪೈಪೋಟಿ ನೀಡುವೆ ಬ್ರೆಜಾ 1.5 ಲೀಟರ್ ಪೆಟ್ರೋಲ್ ಎಂಜಿನ್ ಕಾರು ಬಿಡುಗಡೆ ಮಾಡಲಿದೆ.

ಇದನ್ನೂ ಓದಿ: ಹ್ಯುಂಡೈ ವೆನ್ಯೂ ಪೈಪೋಟಿ; ಮಾರುತಿ ಬ್ರೆಜಾ ಕಾರಿಗೆ ಭರ್ಜರಿ ಆಫರ್!

Suv ಕಾರುಗಳ ಪೈಕಿ ಮಾರುತಿ ಬ್ರೆಜಾ ಕಾರು ಹೊಸ ಇತಿಹಾಸ ರಚಿಸಿದೆ. ಇದಕ್ಕೆ ಪೈಪೋಟಿ ನೀಡಲು ಹಲವು ಕಾರುಗಳು ಬಿಡುಗಡೆಯಾವೆ. ಇದರಲ್ಲಿ ಹ್ಯುಂಡೈ ವೆನ್ಯೂ ಹೊರತು ಪಡಿಸಿದರೆ ಇತರ ಕಾರುಗಳಿಂದ ಬ್ರೆಜಾ ಕಾರಿಗೆ ಹೆಚ್ಚಿನ ಹೊಡೆತ ಬಿದ್ದಿಲ್ಲ. ಹ್ಯುಂಡೈ ವೆನ್ಯೂ 1.0 ಲೀಟರ್ ಎಂಜಿನ್ ಕಾರು ವೇರಿಯೆಂಟ್ ಕೂಡ ಲಭ್ಯವಿದೆ. ಕಡಿಮೆ ಬೆಲೆಯಲ್ಲಿ ಲಭ್ಯವಿರುವ SUV ಕಾರುಗಳಲ್ಲಿ ವೆನ್ಯೂ ಮೊದಲ ಸ್ಥಾನದಲ್ಲಿದೆ. ಇಷ್ಟೇ ಅಲ್ಲ ಮಾರುತಿ ಬ್ರೆಜಾ ಕಾರಿನ ಮಾರಾಟಕ್ಕೂ ಹೊಡೆತ ನೀಡಿದೆ. ಹೀಗಾಗಿ ಡೀಸೆಲ್ ವೇರಿಯೆಂಟ್ ಮಾತ್ರ ಲಭ್ಯವಿದ್ದ ಮಾರುತಿ ಬ್ರೆಜಾ ಇದೀಗ ಕಡಿಮೆ ಬೆಲೆಯಲ್ಲಿ ಬ್ರೆಜಾ ಪೆಟ್ರೋಲ್ ಕಾರು ಬಿಡುಗಡೆ ಮಾಡಲಿದೆ.

ಇದನ್ನೂ ಓದಿ: ಮಾರುತಿ ಬ್ರೆಜಾ to ಹ್ಯುಂಡೈ ವೆನ್ಯೂ: ಇಲ್ಲಿದೆ ಭಾರತದ SUV ಕಾರು ಬೆಲೆ ಪಟ್ಟಿ!

ಮಾರುತಿ ಸುಜುಕಿ ಪ್ರಕಾರ 2020ರ ಫೆಬ್ರವರಿಯಲ್ಲಿ ನೂತನ 1.5 ಲೀಟರ್ ಪೆಟ್ರೋಲ್ ಎಂಜಿನ್ ಬ್ರೆಜಾ ಕಾರು ಬಿಡುಗಡೆಯಾಗಲಿದೆ. 1.5 ಲೀಟರ್ ಪೆಟ್ರೋಲ್ ಕಾರು ಮಾರುತಿ ಸಿಯಾಝ್ ಹಾಗೂ ನೂತನ XL6 ಕಾರಿನ ಎಂಜಿನ್ ಹೊಂದಿದೆ.  ಈ ಮೂಲಕ ಸದ್ಯ ಮಾರುಕಟ್ಟೆಯಲ್ಲಿ ಪೆಟ್ರೋಲ್ SUV ಕಾರುಗಳಾದ ಹ್ಯುಂಡೈ ವೆನ್ಯು (83hp, 1.2 ಪೆಟ್ರೋಲ್ ಹಾಗೂ 120hp, 1.0 ಟರ್ಬೊ ಪೆಟ್ರೋಲ್),  ಮಹೀಂದ್ರ XUV300 (110hp, 1.2 ಟರ್ಬೋ ಪೆಟ್ರೋಲ್), ಫೋರ್ಡ್ ಇಕೋಸ್ಪೋರ್ಟ್ (123hp, 1.5 ಪೆಟ್ರೋಲ್ ಹಾಗೂ 125hp, 1.0 ಟರ್ಬೋ ಪೆಟ್ರೋಲ್) ಮತ್ತು ಟಾಟಾ ನೆಕ್ಸಾನ್ (110hp, 1.2 ಟರ್ಬೋ ಪೆಟ್ರೋಲ್) ಕಾರುಗಳಿಗೆ ಪೈಪೋಟಿ ನೀಡಲಿದೆ.

click me!