ನಿಸಾನ್ ಕಿಕ್ಸ್‌ ವರ್ಷಾಚರಣೆ; ಭರ್ಜರಿ ಆಫರ್ ಘೋಷಣೆ!

Suvarna News   | stockphoto
Published : Jan 17, 2020, 08:54 PM IST
ನಿಸಾನ್ ಕಿಕ್ಸ್‌ ವರ್ಷಾಚರಣೆ; ಭರ್ಜರಿ ಆಫರ್ ಘೋಷಣೆ!

ಸಾರಾಂಶ

ನಿಸಾನ್ ಕಿಕ್ಸ್ ಕಾರು ಬಿಡುಗಡೆಯಾಗಿ ಇದೀಗ 1 ವರ್ಷ ಪೂರೈಸಿದೆ. ನಿಸಾನ್ ಆಟೋಮೊಬೈಲ್ ಕಂಪನಿಗೆ ಹೊಸ ತಿರುವು ನೀಡಿದ ಕಿಕ್ಸ್ ಕಾರು ಮಾರಾಟದಲ್ಲೂ ಗಣನೀಯ ಏರಿಕೆ ಕಂಡಿದೆ. ಇದೀಗ ಒಂದು ವರ್ಷ ಪೂರೈಸಿದ ಬೆನ್ನಲ್ಲೇ ಭರ್ಜರಿ ಆಫರ್ ಘೋಷಿಸಿದೆ.

ನವದೆಹಲಿ(ಜ.17): ನಿಸಾನ್ ಕಿಕ್ಸ್ SUV ಕಾರು ಒಂದು ವರ್ಷ ಪೂರೈಸಿದೆ. 2019ರಲ್ಲಿ ಬಿಡುಗಡೆಯಾದ ನಿಸಾನ್ ಕಳೆದೊಂದು ವರ್ಷದಲ್ಲಿ ಗ್ರಾಹಕರ ಮನಗೆಲ್ಲುವಲ್ಲಿ ಯಶಸ್ವಿಯಾಗಿದೆ. ವರ್ಷಾಚರಣೆ ಪ್ರಯುಕ್ತ ನಿಸಾನ್ಸ್ ಕಿಕ್ಸ್ ಕಾರಿಗೆ ಭರ್ಜರಿ ಆಫರ್ ಘೋಷಿಸಿದೆ.  ಈ ಮೂಲಕ ನಿಸಾನ್ ಕಿಕ್ಸ್ ಮತ್ತೆ ಮಾರಾಟ ಚುರುಕುಗೊಳಿಸಲು ಮುಂದಾಗಿದೆ.
ನಿಸಾನ್ ಕಿಕ್ಸ್ ಕಾರು ಖರೀದಿಸುವ ಗ್ರಾಹಕರಿಗೆ ಬರೋಬ್ಬರಿ 1.5 ಲಕ್ಷ ರೂಪಾಯಿ ಕಡಿತ ಆಫರ್ ಘೋಷಿಸಿದೆ. 
ನಿಸಾನ್ ಆಫರ್ ವಿವರ ಇಲ್ಲಿದೆ.

ಇದನ್ನೂ ಓದಿ: ನಿಸಾನ್ ಕಿಕ್ಸ್-ಜೂಮ್ ಕಾರು ಒಪ್ಪಂದ; ಬೆಂಗಳೂರಿಗರಿಗೆ ಭರ್ಜರಿ ಕೊಡುಗೆ!

ನಗದು ಬೆನಿಫಿಟ್ 40,000 ರೂಪಾಯಿ
ಎಕ್ಸ್‌ಜೇಂಜ್ ಬೆನಿಫಿಟ್ 25,000 ರೂಪಾಯಿಯಿಂದ 40,000 ರೂಪಾಯಿ
ಕಾರ್ಪೊರೇಟ್ ಡಿಸ್ಕೌಂಟ್ 10,000 ರೂಪಾಯಿ
ಹೆಚ್ಚುವರಿ 3 ವರ್ಷ ವಾರೆಂಟಿ 20,500 ರೂಪಾಯಿ
ಕಡಿಮೆ ಬಡ್ಡಿ ದರ 6.99%(36 ತಿಂಗಳ ಪ್ಲಾನ್)

ನಿಸಾನ್ ಕಿಕ್ಸ್ ಪೆಟ್ರೋಲ್ ವೇರಿಯೆಂಟ್ ಬೆಲೆ 9.55 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ)ನಿಂದ 10.95 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ). ಡಿಸೆಲ್ ವೇರಿಯೆಂಟ್ ಬೆಲೆ 9.89 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ) ನಿಂದ 13.69 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ).

ಇದನ್ನೂ ಓದಿ: ಹೆಚ್ಚಾದ ಪೈಪೋಟಿ; ನಿಸಾನ್ ಕಿಕ್ಸ್ XE ಕಾರು ಬಿಡುಗಡೆ!

4 ಡ್ಯುಯೆಲ್ ಟೋನ್ ಕಲರ್ ಸೇರಿದಂತೆ ಕಿಕ್ಸ್ ನೂತನ ಬಣ್ಣಗಳಲ್ಲಿ ಲಭ್ಯವಿದೆ. ಇನ್ನು ಏರ್‌ಬ್ಯಾಗ್, ABS+EBD ಹಾಗೂ ಬ್ರೇಕ್ ಅಸಿಸ್ಟ್ ಕೂಡ ಹೊಂದಿದೆ. ರೇರ್ ಪಾರ್ಕಿಂಗ್ ಕ್ಯಾಮರ, ಸೀಟ್ ಬೆಲ್ಟ್ ಅಲರಾಂ ಎಲ್ಲಾ ವೇರಿಯೆಂಟ್‌ಗಳಲ್ಲಿ ಲಭ್ಯವಿದೆ.
 

PREV
click me!

Recommended Stories

ಚಾಲನೆಯಲ್ಲಿದ್ದಾಗಲೇ ಪ್ರಜ್ಞೆ ಕಳೆದುಕೊಂಡ ಚಾಲಕ: ವಿಮಾನ ಟೇಕಾಫ್‌ದಂತೆ ಮೇಲೇರಿದ ಮರ್ಸಿಡಿಸ್: ವೀಡಿಯೋ
ಕಾಂತಾರ ನಟನಿಗೆ ದೈವದ ಅಭಯ, 1.5 ಕೋಟಿ ರೂ ವೆಲ್‌ಫೈರ್ ಕಾರಿನಲ್ಲಿ ಕಾಣಿಸಿಕೊಂಡ ರಿಷಬ್ ಶೆಟ್ಟಿ