ಬಿಡುಗಡೆಯಾಗುತ್ತಿದೆ ಬೆಂಗಳೂರು ಮೂಲದ ಎಲೆಕ್ಟ್ರಿಕ್ ಕಾರು; ಟೆಸ್ಲಾಗೆ ಪೈಪೋಟಿ!

By Suvarna News  |  First Published Nov 16, 2020, 3:33 PM IST

ಅಮೆರಿಕದ ಟೆಸ್ಲಾ ಎಲೆಕ್ಟ್ರಿಕ್ ಕಾರುಗಳು ವಿಶ್ವದೆಲ್ಲೆಡೆ ಜನಪ್ರಿಯವಾಗಿದೆ. ಇದಕ್ಕೆ ಪೈಪೋಟಿ ನೀಡುವ ಎಲೆಕ್ಟ್ರಿಕ್ ಕಾರು ಇದುವರೆಗೂ ಬಿಡುಗಡೆಯಾಗಿಲ್ಲ. ಆದರೆ ಇದೀಗ ಮೇಡ್ ಇನ್ ಇಂಡಿಯಾ ಮಾತ್ರವಲ್ಲ, ನಮ್ಮ ಬೆಂಗಳೂರು ಮೂಲದ ಎಲೆಕ್ಟ್ರಿಕ್ ಕಾರು ಟೆಸ್ಲಾ ಕಾರಿಗೆ ಪೈಪೋಟಿ ನೀಡಲು ಸಜ್ಜಾಗಿದೆ. ಶೀಘ್ರದಲ್ಲೇ ಈ ಕಾರು ಬಿಡುಗಡೆಯಾಗಲಿದೆ.


ಬೆಂಗಳೂರು(ನ.16):  ವಿಶ್ವದ ಅತೀ ದೊಡ್ಡ ಎಲೆಕ್ಟ್ರಿಕ್ ಕಾರು ಉತ್ಪಾದನ ಕಂಪನಿ, ಅತ್ಯಂತ ಆಕರ್ಷಕ ವಿನ್ಯಾಸ, ಸರಿಸಾಟಿ ಇಲ್ಲದ ಮೈಲೇಜ್ ಹೀಗೆ ಎಲ್ಲಾ ವಿಭಾಗದಲ್ಲಿ ಅತ್ಯುತ್ತಮವಾಗಿರುವ ವಿಶ್ವದ ಏಕೈಕ ಎಲೆಕ್ಟ್ರಿಕ್ ಕಾರು ಅನ್ನೋ ಹೆಗ್ಗಳಿಗೆ ಅಮೆರಿಕ ಟೆಸ್ಲಾ ಕಾರು ಪಾತ್ರವಾಗಿದೆ. ಇದೀಗ ಈ ಟೆಸ್ಲಾ ಕಾರಿಗೆ ಪೈಪೋಟಿ ನೀಡಲು ನಮ್ಮ ಬೆಂಗಳೂರಿನ  ಪ್ರವೈಗ್ ಡೈನಾಮಿಕ್ಸ್ ಸ್ಟಾರ್ಟ್ ಅಪ್ ಕಂಪನಿ ರೆಡಿಯಾಗಿದೆ.

Latest Videos

undefined

ಟೆಸ್ಲಾ ಎಲೆಕ್ಟ್ರಿಕ್ ಕಾರು ಭಾರತ ಆಗಮನ ಖಚಿತ ಪಡಿಸಿದ ಎಲನ್ ಮಸ್ಕ್!.

ಪ್ರವೈಗ್ ಎಕ್ಸ್‌ಟಿನ್ಶನ್ MK1 ಎಲೆಕ್ಚ್ರಿಕ್ ಕಾರು ಸರಿಸಾಟಿಯಿಲ್ಲದ ಡಿಸೈನ್, ಮೈಲೇಜ್‌ನಲ್ಲೂ ಅದ್ಬುತ, ಹಾಗೂ ಅತ್ಯಾಧುನಿಕ ಫೀಚರ್ಸ್ ಹೊಂದಿರುವ ಕಾರಾಗಿದೆ. ಬೆಂಗಳೂರಿನ ಪ್ರವೈಗ್ ಡೈನಾಮಿಕ್ಸ್  ಸ್ಟಾರ್ಟ್ ಅಪ್ ಕಂಪನಿ ಡಿಸೆಂಬರ್ ತಿಂಗಳ ಆರಂಭದಲ್ಲಿ ಅನಾವರಣವಾಗಲಿದೆ.

2030 ರಿಂದ ಪೆಟ್ರೋಲ್, ಡೀಸೆಲ್ ವಾಹನ ಮಾರಾಟ ಸಂಪೂರ್ಣ ನಿಷೇಧಕ್ಕೆ ನಿರ್ಧಾರ!.

ಪ್ರವೈಗ್ ಎಕ್ಸ್‌ಟಿನ್ಶನ್ MK1 ಎಲೆಕ್ಚ್ರಿಕ್ ಕಾರು ಒಂದು ಬಾರಿ ಚಾರ್ಜ್ ಮಾಡಿದರೆ ಬರೋಬ್ಬರಿ 504 ಕಿ.ಮೀ ಮೈಲೇಜ್ ನೀಡಲಿದೆ.  ಕಾರಿನ ಗರಿಷ್ಠ ವೇಗ 196 ಕಿ.ಮೀ ಪ್ರತಿ ಗಂಟೆಗೆ. ಇನ್ನು ಕೇವಲ 30 ನಿಮಿಷದಲ್ಲಿ ಶೇಕಡಾ 80 ರಷ್ಟು ಚಾರ್ಜ್ ಆಗಲಿದೆ. 0-100 ಕಿ.ಮೀ ಕೇವಲ 5.4 ಸೆಕೆಂಡ್‌ಗಳಲ್ಲಿ ತಲುಪಲಿದೆ.

96kwh ಲಿ-ಐಯಾನ್ ಬ್ಯಾಟರಿ ಅಳವಡಿಸಲಾಗಿದೆ. 200hp ಪವರ್ ಹೊಂದಿದೆ.  2021ರ  ಆರಂಭದಲ್ಲೇ ನೂತನ ಪ್ರವೈಗ್ ಎಲೆಕ್ಟ್ರಿಕ್ ಕಾರು ಬಿಡುಗಡೆಯಾಗಲಿದೆ. ಇನ್ನು ಆರಂಭಿಕ ಹಂತದಲ್ಲಿ ಬೆಂಗಳೂರು ಹಾಗೂ ದೆಹಲಿಯಲ್ಲಿ ಕಾರು ಲಭ್ಯವಿದೆ. ವಿಶೇಷ ಅಂದರೆ ಆನ್‌ಲೈನ್ ಸೇಲ್ಸ್ ಗೆ ಹೆಚ್ಚಿನ ಒತ್ತು ನೀಡುವ ಕಾರಣ ಡೀಲರ್‌ಶಿಪ್ ಸಂಪ್ರದಾಯಕ್ಕೆ ಅಂತ್ಯಹಾಡಲಿದೆ.
 

click me!