ಲಾಕ್‌ಡೌನ್‌ನಲ್ಲೂ ದಾಖಲೆ ಬರೆದ ನ್ಯೂ ಜನರೇಶನ್ ಕ್ರೆಟಾ ಕಾರು!

By Suvarna News  |  First Published May 2, 2020, 6:20 PM IST

 ಕೊರೋನಾ ವೈರಸ್ ಹೊಡೆತಕ್ಕೆ ಭಾರತೀಯ ಆಟೋಮೊಬೈಲ್ ಕ್ಷೇತ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ. ಮಾರ್ಚ್ ತಿಂಗಳಲ್ಲಿ ಬಿಡುಗಡೆಯಾದ ನ್ಯೂ ಜನರೇಶನ್ ಹ್ಯುಂಡೈ ಕ್ರೇಟಾ ಕಾರು ಗ್ರಾಹಕರನ್ನು ಆಕರ್ಷಿಸಿತ್ತು. ಆದರೆ ಲಾಕ್‌ಡೌನ್ ಕಾರಣ ವ್ಯವಹಾರ ಸ್ಥಗಿತಗೊಂಡಿತು. ಲಾಕ್‌ಡೌನ್ ಸಮಯದಲ್ಲೂ ನೂತನ ಕ್ರೆಟಾ ಕಾರು ದಾಖಲೆಯ ಬುಕಿಂಗ್ ಕಂಡಿದೆ. ಈ ಕುರಿತ ವಿವರ ಇಲ್ಲಿದೆ.


ನವದೆಹಲಿ(ಮೇ.02): ಹಲವು ವಿಶೇಷತೆ, ಕೆಲ ಬದಲಾವಣೆ, ಹೆಚ್ಚುವರಿ ಫೀಚರ್ಸ್‌ನೊಂದಿ ನ್ಯೂ ಜನರೇಶನ್ ಹ್ಯುಂಡೈ ಕ್ರೆಟಾ ಕಾರು ಮಾರುಕಟ್ಟೆಗೆ ಲಗ್ಗೆ ಇಟ್ಟಿತು. ಮಾರ್ಚ್ 17ಕ್ಕೆ ಭಾರತದಲ್ಲಿ ನೂತನ ಕಾರು ಬಿಡುಗಡಯಾಗಿತ್ತು. ಆದರೆ ಕೊರೋನಾ ವೈರಸ್ ಅಟ್ಟಹಾಸ ಕಾರಣ ಎಲ್ಲಾ ಆಟೋಮೊಬೈಲ್ ಕಂಪನಿ ತಾತ್ಕಾಲಿಕ ಸ್ಥಗಿತಗೊಂಡಿತ್ತು. ಆದರೆ ಆನ್‌ಲೈನ್ ಬುಕಿಂಗ್ ತೆರೆದಿತ್ತು. ಇದೀಗ ಬಿಡುಗಡೆಯಾದಾಗ ಹಾಗೂ ಲಾಕ್‌ಡೌನ್ ಸಮಯದಲ್ಲಿ ಒಟ್ಟು 20,000 ನೂತನ ಹ್ಯುಂಡೈ ಕ್ರೆಟಾ ಕಾರು ಬುಕ್ ಆಗಿದೆ.

ಲಾಕ್‌ಡೌನ್ ಸಂಕಷ್ಟ; ಗ್ರಾಹಕರಿಗೆ ವಾರಂಟಿ ವಿಸ್ತರಣೆ ಸೇರಿ ಹಲವು ಸೌಲಭ್ಯ ಘೋಷಿಸಿದ ಟಾಟಾ ಮೋಟಾರ್ಸ್!.

Tap to resize

Latest Videos

ಲಾಕ್‌ಡೌನ್‌ಗೂ ಮುನ್ನ 18,000 ಕ್ರೆಟಾ ಕಾರುಗಳು ಬುಕ್ ಆಗಿತ್ತು. ಇನ್ನು ಲಾಕ್‌ಡೌನ್ ಸಮಯದಲ್ಲಿ 2,000 ಕಾರುಗಳು ಬುಕ್ ಆಗಿವೆ. ಹೀಗಾಗಿ ಒಟ್ಟು 20,000 ಕ್ರೆಟಾ ಕಾರುಗಳು ಬಕಿಂಗ್ ಆಗಿವೆ. ಈ ಕುರಿತು ಹ್ಯುಂಡೈ ಇಂಡಿಯಾ  ಸಂತಸ ವ್ಯಕ್ತಪಡಿಸಿದೆ. ಲಾಕ್‌ಡೌನ್ ಸಮಯದಲ್ಲೂ ಕ್ರೆಟಾ ಕಾರು ಬುಕಿಂಗ್ ಆಗಿವೆ. ಇದು ಗ್ರಾಹಕರು ಕ್ರೆಟಾ ಮೇಲಿಟ್ಟ ನಂಬಿಕೆ. ಲಾಕ್‌ಡೌನ್ ಸಮಯದಲ್ಲಿ ಆನ್‌ಲೈನ್ ಮೂಲಕ ಬುಕಿಂಗ್ ಮಾಡಿದ ಕಾರುಗಳ ಪೈಕಿ ಶೇಕಾಡ 75ರಷ್ಟು ಮಂದಿ ಕ್ರೆಟಾ ಕಾರು ಬುಕ್ ಮಾಡಿದ್ದಾರೆ ಎಂದು ಹ್ಯುಂಡೈ ಇಂಡಿಯಾ ಹೇಳಿದೆ.

5ಸಾವಿರ ರೂ.ಗೆ ಬುಕ್ ಮಾಡಿ ಮಹೀಂದ್ರ ಸ್ಕಾರ್ಪಿಯೋ BS6, ಆನ್‌ಲೈನ್‌ನಲ್ಲಿ ಮಾತ್ರ!

ಕಾರು ಬುಕ್ ಮಾಡಿದ ಗ್ರಾಹಕರಿಗೆ ಲಾಕ್‌ಡೌನ್ ತೆರವಾದ ಮೇಲೆ ಡೆಲಿವರಿಯಾಗಲಿದೆ. ಕೊರೋನಾ ವೈರಸ್ ಕಾರಣ ಡೆಲಿವರಿ ವಿಳಂಬವಾಗುತ್ತಿದೆ. ಆದರೆ ಗ್ರಾಹಕರ ತಾಳ್ಮೆಯನ್ನು ಗೌರವಿಸುತ್ತೇವೆ.  ಲಾಕ್‌ಡೌನ್ ತೆರವಾದ ಬಳಿಕ ಪ್ರತಿ ತಿಂಗಳು 10,000 ಕಾರುಗಳನ್ನು ಡೀಲರ್‌ಗೆ ತಲುಪಸಲಿದ್ದೇವೆ ಎಂದು ಹ್ಯುಂಡೈ ಇಂಡಿಯಾ ಹೇಳಿದೆ.

ನೂತನ ಹ್ಯುಂಡೈ ಕ್ರೆಟಾ 3 ಎಂಜಿನ್ ವೇರಿಯೆಂಟ್ ಲಭ್ಯವಿದೆ. 1.5 ಲೀಟರ್ ಪೆಟ್ರೋಲ್, 1.5 ಲೀಟರ್ ಟರ್ಬೋ ಪೆಟ್ರೋಲ್ ಹಾಗೂ 1.5 ಲೀಟರ್ ಡೀಸೆಲ್ ಎಂಜಿನ್ ವೇರಿಯೆಂಟ್‌ಗಳಲ್ಲಿ ಲಭ್ಯವಿದೆ. ಬೇಸ್‌ನಿಂದ ಟಾಪ್ ವರೆಗೂ ಒಟ್ಟು 14 ಮಾಡೆಲ್ ನೂತನ ಕ್ರೆಟಾ ಕಾರಿನಲ್ಲಿ ಲಭ್ಯವಿದೆ. 25,000 ರೂಪಾಯಿ ಮೂಲಕ ನೂತನ ಕ್ರೇಟಾ ಕಾರು ಬುಕ್ ಮಾಡಿಕೊಳ್ಳಬಹುದು. ಇಷ್ಟೇ ಅಲ್ಲ ಕ್ರೆಟಾ ಆರಂಭಿಕ ಬೆಲೆ 11. 42 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ).
 

click me!