'ರಾಯಲ್‌' ಎನ್‌ಫೀಲ್ಡ್ ಬೈಕ್‌ನಲ್ಲಿ ಮದುವೆ, ನವ ಜೋಡಿಗಳಿಗೆ ಶುಭ ಹಾರೈಸಿದ ಪೊಲೀಸ್!

Suvarna News   | Asianet News
Published : May 01, 2020, 05:57 PM ISTUpdated : May 01, 2020, 07:17 PM IST
'ರಾಯಲ್‌' ಎನ್‌ಫೀಲ್ಡ್ ಬೈಕ್‌ನಲ್ಲಿ ಮದುವೆ, ನವ ಜೋಡಿಗಳಿಗೆ ಶುಭ ಹಾರೈಸಿದ ಪೊಲೀಸ್!

ಸಾರಾಂಶ

ಲಾಕ್‌ಡೌನ್ ಕಾರಣ ಎಲ್ಲಾ ಕಾರ್ಯಕ್ರಮಗಳು ರದ್ದಾಗಿದೆ. ಹಲವರು ತಮ್ಮ ಮದುವೆ, ಎಂಗೇಜ್ಮೆಂಟ್ ಮುಂದೂಡಿದ್ದಾರೆ. ಕೆಲವರು ಸರಳವಾಗಿ ವಿವಾಹವಾಗಿದ್ದಾರೆ. ಇದೀಗ ಲಾಕ್‌ಡೌನ್ ನಡುವೆ ಅತ್ಯಂತ ಸರಳವಾಗಿ ನವ ಜೋಡಿಗಳು ವಿವಾಹವಾಗಿದ್ದಾರೆ. ಇವರ ರಾಯಲ್ ಮದುವೆಗೆ ಪೊಲೀಸರು ಶುಭ ಹಾರೈಸಿದ್ದಾರೆ.

ಪಂಜಾಬ್(ಮೇ.01); ಲಾಕ್‌ಡೌನ್ ಸಂದರ್ಭದಲ್ಲಿ ಹಲವು ಜೋಡಿಗಳು ಹೊಸ ಬದುಕಿಗೆ ಕಾಲಿಟ್ಟಿವೆ. ಕೇವಲ ಎರಡು ಕಡೆಯ ಪೋಷಕರು ಮಾತ್ರ ಭಾಗಿಯಾಗಿ ಮದುವೆಯಾಗಿದ್ದಾರೆ. ಇದೇ ರೀತಿ ಅತೀ ಸರಳ ವಿವಾಹವೊಂದು ಪಂಜಾಬ್‌ನಲ್ಲಿ ನಡೆದಿದೆ. ಲಾಕ್‌ಡೌನ್ ಕಾರಣ ನವ ಜೋಡಿಗಳು ನಿಗಧಿತ ದಿನಾಂಕದಂದೇ ಮದುವೆಯಾಗಲು ನಿರ್ಧರಿಸಿದ್ದಾರೆ. ಆದರೆ ಇವರ ಮದುವೆಯಲ್ಲಿ ರಾಯಲ್ ಎನ್‌ಫೀಲ್ಡ್ ಬೈಕ್ ಪ್ರಮುಖ ಪಾತ್ರ ನಿರ್ವಹಿಸಿದೆ.

ಲಾಕ್‌ಡೌನ್ ವೇಳೆ BMW ಕಾರಿನಲ್ಲಿ ಜಾಲಿ ರೈಡ್, ಓವರ್ ಬಿಲ್ಡಪ್ ನೀಡಿ ಅರೆಸ್ಟ್ ಆದ ಯುವಕ!

ಜಿಲ್ಲಾಧಿಕಾರಿ ಅನುಮತಿ ಪಡೆದ ನವ ಜೋಡಿಗಳು ಮನೆಯಿಂದ ರಾಯಲ್ ಎನ್‌ಫೀಲ್ಡ್ ಬೈಕ್ ಏರಿ ಸಮೀಪದ ದೇವಸ್ಥಾನಕ್ಕೆ ತೆರಳಿದ್ದಾರೆ. ದೇವಸ್ಥಾನದಲ್ಲಿ ವರ, ವಧು, ದೇವಸ್ಥಾನದ ಅರ್ಚಕ, ಕ್ಯಾಮರಾಮ್ಯಾನ್ ಸೇರಿದಂತೆ ಒಟ್ಟು ಐವರು 3 ನಿಮಿಷದಲ್ಲಿ ಮದುವೆ ಮುಗಿಸಿದ್ದಾರೆ. 3 ನಿಮಿಷದ ಮದುವೆ ಬಳಿಕ ನವ ದಂಪತಿಗಳು ರಾಯಲ್ ಎನ್‌ಫೀಲ್ಡ್ ಬೈಕ್ ಏರಿದ್ದಾರೆ.

ಇವರ ಮದುವೆ 3 ನಿಮಿಷದಲ್ಲಿ ಮುಗಿದಿದೆ. ಇನ್ನು ಇವರಿಗೆ ಮದುವೆ ಕೊಂಚ ಫೀಲ್ ನೀಡಿದ್ದು ರಾಯಲ್ ಎನ್‌ಫೀಲ್ಡ್ ಬೈಕ್. ಮನೆಯಿಂದ ದೇವಸ್ಥಾನಕ್ಕೆ 20 ನಿಮಿಷದ ಪ್ರಯಾಣ. ಬಳಿಕ ದೇವಸ್ಥಾನದಿಂದ ಮನೆಗೆ 20 ನಿಮಿಷದ ಪ್ರಯಾಣವೇ ಇವರಿಗೆ ಮದುವೆ ಸಡಗರ ನೀಡಿದೆ.  ಮರಳಿ ಬರುವಾಗ ಪೊಲೀಸರು ನವ ದಂಪತಿಗಳನ್ನು ನಿಲ್ಲಿಸಿ ಪ್ರಶ್ನಿಸಿದ್ದಾರೆ.

ಇತಿಹಾಸದಲ್ಲಿ ಇದೇ ಮೊದಲು; ಏಪ್ರಿಲ್ ತಿಂಗಳಲ್ಲಿ ಆಟೋಮೊಬೈಲ್ ಡಕೌಟ್!

ಪಂಜಾಬ್ ಹಾಗೂ ಉತ್ತರದ ಭಾಗದಲ್ಲಿ ಮದುವೆ ಸಮಾರಂಭ ಅತ್ಯಂತ ವಿಜ್ರಂಭಣೆಯಿಂದ ನಡೆಯುತ್ತದೆ. ಆದರೆ ಲಾಕ್‌ಡೌನ್ ಕಾರಣ ಸರಳವಾಗಿ ವಿವಾಹವಾಗಿರುವ ನವ ಜೋಡಿಗಳಿಗೆ ಪೊಲೀಸರು ಹೂವು ಹಾಗೂ ಸಿಹಿ ನೀಡಿ ಶುಭಹಾರೈಸಿದ್ದಾರೆ. ಬಳಿಕ ಈ ಜೋಡಿ ಮನೆಗೆ ವಾಪಸ್ ಆಗಿದೆ. ಸುಮಾರು 40 ನಿಮಿಷಗಳ ರಾಯಲ್ ಎನ್‌ಫೀಲ್ಡ್ ರೈಡ್ ಇವರ ಮದುವೆಯಲ್ಲಿ ಪ್ರಮುಖವಾಗಿದೆ. 

ನವ ಜೋಡಿಗಳಿಗೆ ತಮ್ಮ ಮದುವೆಗಿಂತ ರಾಯಲ್ ಎನ್‌ಫೀಲ್ಡ್ ಪ್ರಯಾಣ ಹಾಗೂ ಪೊಲೀಸರ ಶುಭಹಾರೈಕೆಯೇ ಹೆಚ್ಚು ನನೆಪನಲ್ಲಿ ಉಳಿಯಲಿದೆ ಎಂದಿದ್ದಾರೆ. ರಾಯಲ್ ಎನ್‌ಫೀಲ್ಡ್ ಮೂಲಕ ಹೊಸ ಬದುಕಿಗೆ ಕಾಲಿಟ್ಟ ರಾಯಲ್ ಮದುವೆ ವಿಡಿಯೋ ಈ ಕೆಳಗಿದೆ.

 

PREV
click me!

Recommended Stories

ಕಾಂತಾರ ನಟನಿಗೆ ದೈವದ ಅಭಯ, 1.5 ಕೋಟಿ ರೂ ವೆಲ್‌ಫೈರ್ ಕಾರಿನಲ್ಲಿ ಕಾಣಿಸಿಕೊಂಡ ರಿಷಬ್ ಶೆಟ್ಟಿ
ನಿಯಮಗಳ ಪಾಲಿಸದ ಸ್ಲೀಪರ್ ಬಸ್‌ ಸ್ಥಗಿತ: ಎನ್‌ಎಚ್‌ಆರ್‌ಸಿ