ವಿಮಾ ಅವಧಿ ಕಡಿತ: ಆ.1ರಿಂದ ಕಾರು, ಬೈಕ್ ಕೊಂಚ ಅಗ್ಗ| ವಾಹನ ಕೊಳ್ಳುವಾಗ ಕಡ್ಡಾಯವಾಗಿದ್ದ ದೀರ್ಘಾವಧಿ ವಿಮಾ ನೀತಿ ಕೈ ಬಿಟ್ಟ ವಿಮಾ ನಿಯಂತ್ರಣ ಹಾಗೂ ಅಭಿವೃದ್ಧಿ ಪ್ರಾಧಿಕಾರ
ನವದೆಹಲಿ: ಆಗಸ್ಟ್ 1ರಿಂದ ಹೊಸ ಕಾರು ಅಥವಾ ಬೈಕ್ ಬೆಲೆ ಕೊಂಚ ಇಳಿಕೆಯಾಗಲಿದೆ. ಏಕೆಂದರೆ, ವಾಹನ ಕೊಳ್ಳುವಾಗ ಕಡ್ಡಾಯವಾಗಿದ್ದ ದೀರ್ಘಾವಧಿ ವಿಮಾ ನೀತಿಯನ್ನು ಭಾರತೀಯ ವಿಮಾ ನಿಯಂತ್ರಣ ಹಾಗೂ ಅಭಿವೃದ್ಧಿ ಪ್ರಾಧಿಕಾರ ಕೈಬಿಟ್ಟಿದೆ.
ಆಗಸ್ಟ್‌ನಿಂದ ನೂತನ ವಾಹನ ಬೆಲೆ ಇಳಿಕೆ, ಖರೀದಿ ಸುಲಭ!
undefined
ಈಗಿನ ನಿಯಮದ ಪ್ರಕಾರ ಕಾರು ಕೊಳ್ಳುವವರು ಕಡ್ಡಾಯವಾಗಿ 3 ವರ್ಷದ ವಿಮೆ ಹಾಗೂ ಬೈಕ್ ಕೊಳ್ಳುವವರು 5 ವರ್ಷದ ಕಡ್ಡಾಯ ವಿಮಾ ಪಾಲಿಸಿ ಮಾಡಿಸಲೇಬೇಕು. ಆದರೆ ಆಗಸ್ಟ್ 1ರಿಂದ ಈ ನಿಯಮಗಳು ಬದಲಾಗಲಿವೆ. ಇನ್ನು ಮುಂದೆ, ವಾಹನಕ್ಕೆ ನಾವೇ ಏನಾದರೂ ಹಾನಿ ಮಾಡಿದ್ದರೆ ಅನ್ವಯವಾಗುವ (ಓನ್ ಡ್ಯಾಮೇಜ್) ವಿಮಾ ಪಾಲಿಸಿ 5 ಅಥವಾ 3 ವರ್ಷದ ಬದಲು 1 ವರ್ಷದ್ದಾಗಲಿದೆ.
ಸೆಪ್ಟೆಂಬರ್‌ನಿಂದ ಹೆಲ್ಮೆಟ್ ನಿಯಮದಲ್ಲಿ ಬದಲಾವಣೆ!
ಹೀಗಾಗಿ ವಾಹನ ಕೊಳ್ಳುವಾಗ ‘ಆನ್ ರೋಡ್’ ದರ ತಂತಾನೇ ಕಡಿಮೆಯಾಗಲಿದೆ. ಆದರೆ ಇನ್ನು ಮುಂದೆಯೂ ಕಾರಿಗೆ 3 ವರ್ಷ ಹಾಗೂ ಬೈಕ್‌ಗೆ 5 ವರ್ಷದ ‘ಥರ್ಡ್-ಪಾರ್ಟಿ’ ವಿಮೆ ಕಡ್ಡಾಯವಾಗಿರಲಿದೆ.